ಹರಿತಲೇಖನಿ ದಿನಕ್ಕೊಂದು ಕಥೆ: ವಿಶ್ವ ನಾಯಕ ರಾಮನ ಅವತಾರ| ವೈರಲ್ ವಿಡಿಯೋ ನೋಡಿ
ಹರಿತಲೇಖನಿ ದಿನಕ್ಕೊಂದು ಕಥೆ: ವಿಶ್ವ ನಾಯಕ ರಾಮನ ಅವತಾರ| ವೈರಲ್ ವಿಡಿಯೋ ನೋಡಿ

ಜಗತ್ತಿನ ನಾಯಕ ರಾಮ ಭೂಮಿಯಲ್ಲಿ ಅವತರಿಸುವುದನ್ನು ಪ್ರಕೃತಿದೇವಿ, ಗ್ರಹ, ನಕ್ಷತ್ರ, ತಾರೆಗಳು, ಋಷಿ ಮುನಿಗಳು ಕಾತರದಿಂದ ಕಾಯುತ್ತಿದ್ದರು. ಪ್ರಕೃತಿಗೆ ಮೊದಲ ವಸಂತ ಋತು, ಮೊದಲ ಚೈತ್ರ ಮಾಸ, ಮೊದಲ ಶುಕ್ಲ ಪಕ್ಷ,  ನವಮಿ, ಇಂಥ ಸುದಿನ ಮಧ್ಯಾಹ್ನ ಅಭಿಜನ್ ಮುಹೂರ್ತ. ಮುಂಜಾನೆಯ ಕತ್ತಲು ಹರಿದು  ಸಮಯವಾಗಿದೆ.

ರಾತ್ರಿಯ ಕತ್ತಲೆಗೆ ಇನ್ನೂ ಸಮಯವಿದೆ. ಇಂಥ ಮಧ್ಯ ಸಮಯ ದ ಶುಭದ ಹೊತ್ತು ರಾಮನನ್ನು ಹೊತ್ತು ಬಂದ ಅಮೃತ ಕಾಲವಾಗಿತ್ತು, ಪುಣ್ಯದ ಭೂಮಿ ಭಾರತದ ಅಯೋಧ್ಯೆಯ ಮಣ್ಣು,‌ ದೈವಾಂಶ ಸಂಭೂತ  ರಾಮನನ್ನು ಪಡೆದ ಪುಣ್ಯಕ್ಷೇತ್ರ. ಮೋಕ್ಷನಗರದ ಏಳು ನಗರಗಳಲ್ಲಿ  ಅಯೋಧ್ಯಾ ನಗರ ಮೊದಲು, ‌ದೇವಮಾನವ ಮನು ನಿರ್ಮಾಣ ಮಾಡಿದ ನಗರ. ಜಗತ್ತಿಗೆ ಕೇಂದ್ರ ಬಿಂದುವಾಗಿದ್ದ ನಗರ. 

ಅಯೋಧ್ಯಾಪತಿ ದಶರಥನಿಗೆ ಗಂಡು ಸಂತಾನವಿಲ್ಲ ಎಂಬ ಕೊರಗಿನಲ್ಲಿದ್ದಾಗ ಯಾವುದೋ  ಪ್ರೇರಣ ಶಕ್ತಿ ಸೂಚನೆ ಕೊಟ್ಟು, ಕುಲ ಗುರುಗಳ ಸಲಹೆ ಪಡೆದು ಋಷ್ಯಶೃಂಗ ಮುನಿಗಳನ್ನು ಕರೆಸಿ ಅವರ ಮೂಲಕ ಪುತ್ರಕಾಮೇಷ್ಟಿ ಯಾಗದ ತಯಾರಿ ನಡೆಸಿದ್ದು, ಮೊದಲ ವಸಂತ ಮಾಸದಲ್ಲಿ, ಯಾಗದ ಕುದುರೆ ಬಿಟ್ಟಿದ್ದು. 

ಮುಂದಿನ  ವಸಂತದಲ್ಲಿ, ಯಾಗ ಮಾಡಿ ಮಗದೊಂದು ವಸಂತ ಮಾಸದಲ್ಲಿ ರಾಮನ ಜನನವಾಗಿದ್ದು. ರಾಮ ಹುಟ್ಟುವಾಗ ಗರ್ಭಿಣಿ ಕೌಸಲ್ಯೆಗೆ ಪೂರ್ತಿ ಹನ್ನೆರಡು ತಿಂಗಳು ತುಂಬಿದ ಮೇಲೆ ಹುಟ್ಟಿದ್ದು. ದಶರಥ ತನ್ನ ಕುಲದ ಸಂತಾನದ ಕುರಿತು ಯೋಚಿಸಿದ್ದು, ಯಾಗ ದೀಕ್ಷೆ ತೊಟ್ಟು, ಯಾಗದ ಕುದುರೆ ಬಿಟ್ಟು, ಯಾಗ ಮಾಡಿ ರಾಮ ಜನ್ಮ ತಾಳಲು ಮೂರು ವಸಂತಗಳು ಬಂದವು.

ರಾಮನ ಜನನ ವಾಗಿದ್ದು ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಪುನರ್ವಸು ನಕ್ಷತ್ರ, ಆ ಸಮಯ ಎಂತಹದು ಎಂದರೆ ಐದು ಗ್ರಹಗಳು ಉಚ್ಚ ಸ್ಥಿತಿಯಲ್ಲಿತ್ತು.

ಒಂದು ಗ್ರಹ ಉಚ್ಚ ಸ್ಥಿತಿಯಲ್ಲಿದೆ ಎಂದರೆ, ಆತ ಸುಖ ಸಮೃದ್ಧಿ ಜೀವನ ನಡೆಸುತ್ತಾನೆ. ಎರಡು ಗ್ರಹ ಉಚ್ರಾಯ ಸ್ಥಿತಿಯಲ್ಲಿದ್ದರೆ ಮಹತ್ವವಾದ ಏನನ್ನು ಸಾಧಿಸುತ್ತಾನೆ ಎಂದು, ಮೂರು ಗ್ರಹ ಇದ್ದರೆ, ಸಾಮಂತರಾಜನಾಗುತ್ತಾನೆ, ನಾಲ್ಕು ಗ್ರಹ ಇದ್ದರೆ, ದೇಶದ ರಾಜನಾಗುತ್ತಾನೆ, ಐದು ಗ್ರಹ ಉಚ್ರಾಯ ಸ್ಥಿತಿಯಲ್ಲಿದ್ದರೆ ‘ವಿಶ್ವ ನಾಯಕ’ ನಾಗುತ್ತಾನೆ. ಎಂಬುದು ಜಾತಕ ಫಲ ಇರುವುದು.

ಈ ರೀತಿ ಇರುವುದು ದೇವಮಾನವರಿಗೆ ಮಾತ್ರ ಸಾಧ್ಯ. ಪುನರ್ವಸು  ನಕ್ಷತ್ರದ ದೇವತೆ, ದೇವತೆಗಳ ತಾಯಿಯಾದ ಅದಿತಿದೇವಿ. ಹೀಗಾಗಿ ರಾಮನ ಮನಸ್ಸು ಮಾತೃ ಹೃದಯ. ಚೈತ್ರ ಮಾಸದಲ್ಲಿ ಒಳ್ಳೆಯ ಫಲಗಳು, ಶುಕ್ಲ ಪಕ್ಷ ಅಂದರೆ ವೃದ್ಧಿಪಕ್ಷ. ಲೋಕವನ್ನು ವಿಸ್ತರಿಸುತ್ತ ಬಂದ, ರಾಮನೇ ಹೇಳಿದ್ದಾನೆ. ‘ಒಂದೇ ಒಂದು ಬಾರಿ ಬಂದು ನನಗೆ ಶರಣಾದವರನ್ನು ಕಾಯುವ ಹೊಣೆ ನನ್ನದು’ ಎಂದು ಘೋಷಿಸಿದ್ದಾನೆ.

ನವಮಿ ತಿಥಿಯ ಫಲ, ದೂರ ದೂರದ ವೈರಿಗಳನ್ನು ಸಂಹರಿಸುತ್ತಾ, ( ಮಾರಿಚ ಸುಭಾಹು, ಮುಂತಾದವರು) ಕೊನೆಗೆ ಮೂರು ಲೋಕಕ್ಕೂ ಕಂಟಕ ಪ್ರಾಯನಾದ ವೈರಿಯ ಜೊತೆ ಸೆಣೆಸಾಡುವುದು. (ರಾವಣ) ನವಮಿ ತಿಥಿಯ ಫಲದಂತೆ ಮೂರು ಲೋಕಗಳಲ್ಲೂ ಪ್ರಖ್ಯಾತ ನಾಗುವುದು. ಭಯವಿಲ್ಲದವನು, ದೈತ್ಯಾಕಾರದ ರಾವಣ ಕುಂಭಕರ್ಣ ರನ್ನು ನೋಡಿದರೂ ರಾಮ ಹೆದುರಲಿಲ್ಲ. ಕಷ್ಟಗಳನ್ನು ಸಹಿಸುವ ಸಹನೆ.‌ 

“ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ,  ನಿನ್ನಷ್ಟು ನೆಮ್ಮದಿದೋ ಎಲ್ಲಿಹುದು ರಾಮಾ ರಾಮಾ!! ಜೀವನದುದ್ದಕ್ಕೂ  ಕಷ್ಟಗಳು ಎಂದರೆ ಅಂತಿಂಥ ಕಷ್ಟಗಳಲ್ಲ ಆ ಜನ್ಮ ಪರ್ಯಂತ ಬೆಳದಿಂಗಳು- ಅಮಾವಾಸ್ಯೆ, ಗಳಂತೆ ( ಎಲ್ಲಾ ನಕ್ಷತ್ರಗಳು ಒಳ್ಳೆಯದೇ ಆದರೆ ಗ್ರಹಗಳ ಚಲನೆಗಳ ಮೇಲೆ ಭವಿಷ್ಯ ಇರುತ್ತದೆ. ಶುಕ್ಲ ಪಕ್ಷದಲ್ಲಿ ಚಂದ್ರ  ಬೆಳಕಾಗಿರುತ್ತಾನೆ. ಕೃಷ್ಣ ಪಕ್ಷದಲ್ಲಿ ಮಂದವಾಗುತ್ತಾನೆ. ಹಾಗೆ ಗ್ರಹಗಳು ಕೆಲವು ಉಚ್ರಾಯ ಸ್ಥಿತಿಯಲ್ಲಿರುತ್ತದೆ. ಕೆಲವು ನೀಚ ಸ್ಥಿತಿಯಲ್ಲಿರುತ್ತದೆ).

ರಾಮನಿಗೆ ಹಂಸ ಯೋಗ ಅಂದರೆ ಮಧುರವಾದ ಮಾತು, ಎತ್ತರದ  ಮೂಗು, ನಾಟ್ಯ ಕೋವಿಧ, ನೃತ್ಯ ಗೀತೆ ವಾದ್ಯ ಹಾಗೂ ಚಿತ್ರಕಲೆ ಹೀಗೆ ಸಮಸ್ತ ಕಲೆಗಳಲ್ಲೂ ರಾಮನಿಗೆ ಸರಿಸಾಟಿ ಅಂದು ಯಾರು ಇರಲಿಲ್ಲ. ಯುದ್ಧ ಮಾಡುವಾಗ ನಾಟ್ಯ ದಂತೆ ಜಿಗಿದು ಮಾಡುತ್ತಿದ್ದ. ಸ್ವಲ್ಪಕ್ಕೆ  ತೃಪ್ತಿ ಪಡುವ ಸಂತುಷ್ಟ ಮನಸು.

ಎತ್ತರವಾದ ಸುಂದರ ಕಾಯ, ಗೌರವರ್ಣ ಮುಖ, ಶ್ಯಾಮಲ ವರ್ಣ, ಛತ್ರಿಯಂತೆ ವೃತ್ತಾಕಾರದ ತಲೆ ಇಂಥ ತಲೆ ಇದ್ದರೆ ಭೂಮಂಡಲಾದಿಪತಿ ಯೋಗ, ರಾಮನ ಶರೀರ ಪ್ರೀತಿ ಪಾತ್ರರನ್ನು ರಾಮ ಆಲಂಗಿಸಿಕೊಂಡರೆ, ಅಪ್ಯಾಯವಾದ ಪ್ರೇಮ ಬಂಧನ, ಭದ್ರತೆ, ಸಂತೋಷ, ನೆಮ್ಮದಿ ಇದ್ದು ಮತ್ತಷ್ಟು ರಾಮನ ಅಪ್ಪುಗೆಯಲ್ಲಿ ಇರಬೇಕೆಂಬ ಭಾವ, ರಾಮನ ಒಲವು ಆಧ್ಯಾತ್ಮಿಕದತ್ತ, ರಾಮನ ಹಸ್ತ ಮತ್ತು ಪಾದಗಳಲ್ಲಿ ಶಂಖ-ಚಕ್ರ ಧನುಸ್ಸು ,ಕಮಲ, ಸೂರ್ಯ, ಸ್ವಸ್ತಿಕ ಚಿಹ್ನೆಗಳು. 

ರಾಮನಿಗೆ ಯಾರೇ ವಂಚನೆ ಮಾಡುವುದು ತಿಳಿಯುತ್ತಿತ್ತು. ಆದರೆ ರಾಮ ಅವರ ವಂಚನೆಗೆ ಸಿಗುವವನಲ್ಲ. ಅರಣ್ಯದಲ್ಲಿ ಸಂಚರಿಸುವ ಖಗ-ಮೃಗ, ಪ್ರಾಣಿ ಪಕ್ಷಿಗಳು ಅವನ ಗೆಳೆಯರು, ಧನವಂತ, ಗುಣವಂತ, ಮಹಾಪ್ರತಾಪಿ, ಮಂದಸ್ಮಿತ ಮಾತು ಕಡಿಮೆ, ನಿರ್ಧಾರದಲ್ಲಿ ಸ್ಪಷ್ಟತೆ, ದೇಹ ಆಜಾನುಬಾಹು ಅರವಿಂದ ದಳಾಯತಾಕ್ಷ. ರಾಮನಿಗೂ ಆದಿ ವ್ಯಾದಿಗಳಿದ್ದವು, ಜೀವನ ಪೂರ್ತಿ ಬೆಳದಿಂಗಳು- ಅಮಾವಾಸ್ಯೆ ಯಂತೆ ಇತ್ತು.

ರಾಮನ ಅವತಾರ ಲೋಕಕ್ಕೆ ಸಂತೋಷ ಅರಮನೆಯಲ್ಲಿ ಸಂಭ್ರಮ ದಶರಥನ ಪ್ರೀತಿಯ ಪುತ್ರ.  ತಾಯಿಂದರ ಪ್ರೀತಿ,  ಬಾಲ್ಯ ಗುರುಕುಲದ ವಿದ್ಯಾರ್ಥಿ ಜೀವನ. ಬೆಳದಿಂಗಳಾಗಿ ಅರಮನೆಗೆ ಬರುತ್ತಿದ್ದಂತೆ ಮತ್ತೆ ತಾಟಕಿ ಸಂಹಾರಕ್ಕಾಗಿ ವಿಶ್ವಾಮಿತ್ರರ ಜೊತೆ ವನವಾಸಕ್ಕೆ ಹೋಗಬೇಕಾಯಿತು. 

ಜನಕ ರಾಜನ ಆಸ್ಥಾನದಲ್ಲಿ ಶಿವ ಧನಸ್ಸು ಮರಿದು ಸೀತೆಯೊಡನೆ ವಿವಾಹ ಸಂಭ್ರಮ. ಪರಶುರಾಮನೊಡನೆ ಯುದ್ಧ, ಅರಮನೆಯ ಸುಖ ಸಂತೋಷ

ಮುಕ್ತಾಯ ಎನ್ನುವಂತೆ ಪಟ್ಟಾಭಿಷೇಕದ ಹೊತ್ತಿಗೆ, ಅಪಾರವಾಗಿ ಪ್ರೀತಿ ಪಡುತ್ತಿದ್ದ ತಾಯಿ ಕೈಕೆಯಿ ಶತ್ರುವಾದಳು. ಪತ್ನಿ ತಮ್ಮನ ಜೊತೆ ವನವಾಸ, ಪ್ರೀತಿ ಪಾತ್ರ ತಂದೆಯನ್ನು ಕಳೆದುಕೊಂಡನು. ಬಂಧು ಬಳಗ ದೂರವಾಗಬೇಕಾಯಿತು.

ಕೆಲವು ಕಾಲ ವನವಾಸದಲ್ಲಿ ಸುಖ ಜೀವನ. ಮುಂದೆ ಸೀತಾ ಪಹರಣದಲ್ಲಿ,  ಪ್ರೀತಿಯ ಜಟಾಯು ಮರಣ, ಉದ್ವೇಗಕ್ಕೋಳಗಾದನು. ಸೀತೆಗಾಗಿ ಹಂಬಲಿಸಿ ಪಶು ಪಕ್ಷಿ ಪ್ರಾಣಿ ಕಾಡು ಮೇಡುಗಳನ್ನು ಆರ್ತನಾದದಿಂದ ಕೇಳಿದ, ನನ್ನ ಸೀತೆ ಎಲ್ಲಿ, ಎತ್ತ ಹೋದೆ ಸೀತೆ, ‌ ಹಂಬಲಿಸಿದ, ಮರುಗಿದ, ಕಣ್ಣೀರು ಹಾಕಿದ, ಕಾಡು ಮೇಡು ಹುಚ್ಚನಂತೆ ಅಲೆದ, ಸೀತೆಯ ಶೋಕದಲ್ಲಿ ಒಂದು ವರ್ಷ ಕಳೆದ, ವಾನರ ಬಳಗ‌ ಅವನೋಡನಿತ್ತು.  ರಾಮನ ಭಕ್ತ ಹನುಮಂತ ದೊರಕಿದ. ಸಮುದ್ರಕ್ಕೆ ಯಾರೂ ಕಟ್ಟಲಾಗದ  ಸೇತುವೆ ಕಟ್ಟಿದ, ರಾವಣನ ಬಂಧನದಿಂದ ಸೀತೆಯನ್ನು ಬಿಡಿಸಿದ.

ಜನಗಳ ಅನುಮಾನಕ್ಕೆ ಗುರಿಯಾಗಬಾರದೆಂದು ಸೀತೆಯು ಅಗ್ನಿ ಪ್ರವೇಶ ಮಾಡಿದಳು. 

ಅಗ್ನಿ ಪ್ರವೇಶ ಮಾಡುವಾಗ ಸಾಕ್ಷಾತ್ ಬ್ರಹ್ಮಾದಿ ದೇವತೆಗಳೇ ಬಂದು ನೀನು ಸಾಮಾನ್ಯ ಮನುಷ್ಯನಲ್ಲ,ವಿಶೇಷ ಶಕ್ತಿ ಇದೆ. ಆದರೂ ಏಕೆ ಹೀಗೆ ಮಾಡುವೆ, ಸೀತೆಯಅಗ್ನಿ ಪ್ರವೇಶವನ್ನು ತಡೆ  ಎಂದಾಗ, ನಾನು ಸಾಮಾನ್ಯ ಮನುಷ್ಯನೇ ನನ್ನಲ್ಲಿ ವಿಶೇಷ ಗುಣಗಳು ಇವೆ ಎಂದರೆ ಅದು ಏನೆಂದು ನೀವೇ ತಿಳಿಸಿ ಎಂದು ಬ್ರಹ್ಮದೇವನಿಗೆ ಹೇಳಿದನು.

ಅಂದರೆ ರಾಮನಿಗೆ ದೈವೀಕ ಬಲವು ಇದ್ದರೂ ಅದನ್ನು ಬಳಸಲಿಲ್ಲ. ಪತ್ನಿ ಸಮೇತ ಅಯೋಧ್ಯೆಗೆ ಹಿಂತಿರುಗಿದ, ಕೆಲವೇ ಕಾಲದ ಸುಖ. ಸ್ವಲ್ಪ ಕಾಲದಲ್ಲೇ, ಅಗಸ ಹಾಗೂ, ಊರವರ ಅಪವಾದದ ಮಾತಿಗೆ, ಪ್ರೀತಿಯ ಪತ್ನಿ ಸೀತೆಯಿಂದ ದೂರವಾಗ ಬೇಕಾಯಿತು. ನಂತರದ ದಿನಗಳು, ಅಧಿಕಾರ ಅರಸೊತ್ತಿಗೆ ಇದ್ದರೂ ಸೀತೆಯ ನೆನಪಿನ ವ್ಯಥೆಯಲ್ಲಿಯೇ ಕಳೆಯ ಬೇಕಾಯಿತು.

ರಾಮನು ತನ್ನ ಸಾವಿರ ತಿಂಗಳ ಜೀವಿತಾವಧಿಯಲ್ಲಿ ಜನಾನು ರಾಗಿಯಾಗಿ, ತಾಯಂದಿರು, ಸಹೋದರರು, ಬಂದು ಬಾಂಧವರಿಗೆ  ಪ್ರೇಮಾನು ರಾಗಿಯಾಗಿ, ಪಶು ಪಕ್ಷಿ ಪ್ರಕೃತಿ, ಪ್ರಾಣಿಗಳ ಮೇಲೆ ದಯೆಯುಳ್ಳವನಾಗಿ, ರಾಜ್ಯವನ್ನು ವಿಸ್ತಾರ ಮಾಡುತ್ತಾ ಏಕ ಚಕ್ರಾಧಿಪತಿಯಾಗಿ, ರಾಮನ ರಾಜ್ಯ ರಾಮ ರಾಜ್ಯ ಎಂಬ ಹೆಸರು ಅಜರಾಮರವಾಯಿತು.

ಸಂಗ್ರಹ ವರದಿ: ಗಣೇಶ್. ಎಸ್., ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

politics

HL

politics

HL

politics

HL

health

HL

politics

HL

economy

HL

politics

HL

politics

HL

politics

HL

health

HL

politics

HL

economy

HL

literature

HL

politics

HL

literature

HL

politics

HL

politics

HL

others

HL

politics

HL

crime

HL

education

HL

politics

HL

politics

HL

politics

HL

politics

HL

politics

HL

crime

HL

politics

HL

politics

HL

others