ದೊಡ್ಡಬಳ್ಳಾಪುರದಲ್ಲಿ ತಾಪಮಾನ 38 ಡಿಗ್ರಿ..! ಮುಂದಿನ ದಿನಗಳು ಮತ್ತಷ್ಟು ಭೀಕರ
ದೊಡ್ಡಬಳ್ಳಾಪುರದಲ್ಲಿ ತಾಪಮಾನ 38 ಡಿಗ್ರಿ..! ಮುಂದಿನ ದಿನಗಳು ಮತ್ತಷ್ಟು ಭೀಕರ

ದೊಡ್ಡಬಳ್ಳಾಪುರ, (ಏ.30): ಸುಮಾರು ಮೂರು ವಾರಗಳಿಂದಲು ರಾಜ್ಯ ಸೇರಿದಂತೆ ತಾಲ್ಲೂಕಿನಲ್ಲಿ ಪ್ರತಿ ದಿನವು 36 ರಿಂದ 38 ಡಿಗ್ರಿಯಷ್ಟು ಅಸುಪಾಸಿನಲ್ಲೇ ಉಷ್ಣಾಂಶ ಮುಂದುವರೆದಿದೆ.

ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದಾರೆ. ಹೀಟ್‌ ವೇವ್‌ ಎನ್ನುವುದು ತೀವ್ರ ಎಚ್ಚರಿಕೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಮತ್ತು ಸರಕಾರ ಸಂಸ್ಥೆಗಳು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. 

ಅದೇ ರೀತಿಯಲ್ಲಿ ಸನ್‌ಸ್ಟ್ರೋಕ್ ಮತ್ತು ಸನ್‌ಬರ್ನ್‌ಗೆ ಹೆಚ್ಚು ಒಳಗಾಗುವ ಸಾಧ್ಯತೆ ಇರುವುದರಿಂದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. 

ಆದಷ್ಟು ದಿನದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ನೇರ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡುವ ಎಲ್ಲ ಹೊರಾಂಗಣ ಕೆಲಸ, ಕ್ರೀಡೆ ಮತ್ತು ಇತರ ಚಟುವಟಿಕೆಗಳನ್ನು ನಿಲ್ಲಿಸಬೇಕು. ಹೆಚ್ಚು ನೀರು ಕುಡಿಯಬೇಕು, ಅಗತ್ಯಕ್ಕೆ ಮಾತ್ರ ಹೊರಗೆ ಹೋಗಬೇಕು, ಹೊರಗೆ ಹೋಗುವಾಗ ಯಾವಾಗಲೂ ಕೊಡೆ ಮತ್ತು ಪಾದರಕ್ಷೆಗಳನ್ನು ಬಳಸಬೇಕು.

ಹಗಲಿನಲ್ಲಿ ಆಲ್ಕೋಹಾಲ್‌, ಕಾರ್ಬೊನೇಟೆಡ್‌ ಪಾನೀಯಗಳು, ಚಹಾ ಮತ್ತು ಕಾಫಿಗಳನ್ನು ಸಂಪೂರ್ಣವಾಗಿ ತ್ಯಜಿಸಿ ಏಕೆಂದರೆ ಅವು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ. 

ನಿರಂತರ ಬಳಕೆಯಿಂದ ವಿದ್ಯುತ್‌ ಉಪಕರಣಗಳು ಬಿಸಿಯಾಗುತ್ತವೆ ಮತ್ತು ತಂತಿ ಕರಗುತ್ತದೆ ಮತ್ತು ಬೆಂಕಿಯ ಅಪಾಯವಿದೆ ಆದ್ದರಿಂದ ಕಚೇರಿಗಳು ಮತ್ತು ಮನೆಗಳಲ್ಲಿ ಬಳಸಿದ ನಂತರ ಇವುಗಳನ್ನು ಸ್ವಿಚ್‌ ಆಫ್‌ ಮಾಡಬೇಕು. ಬಳಕೆಯಲ್ಲಿಲ್ಲದ ಕಚೇರಿಗಳು ಮತ್ತು ಕೊಠಡಿಗಳಲ್ಲಿ ರಾತ್ರಿಯಲ್ಲಿ ಫ್ಯಾನ್‌, ಲೈಟ್‌ ಮತ್ತು ಎಸಿಗಳನ್ನು ಸ್ವಿಚ್‌ ಆಫ್‌ ಮಾಡಬೇಕು.

ಬಿಸಿಲಿನ ಜಳಕ್ಕೆ ತತ್ತರಿಸಿ ಮಕ್ಕಳಿಂದ ಹಿರಿಯವರೆಗು ಈಜು ಕೊಳಗಳತ್ತ ದೌಡಾಯಿಸುತ್ತಿದ್ದಾರೆ. 

ತಾಲ್ಲೂಕಿನಲ್ಲಿ ಮುಂಗಾರು, ಹಿಂಗಾರು ಎರಡು ಕೈಕೊಟ್ಟಿದ್ದರಿಂದ ಕೆರೆ, ಕುಂಟೆಗಳಲ್ಲಿ ನೀರು ಇಲ್ಲದಾಗಿವೆ. ಬಿಸಿಲಿನ ತಾಪದಿಂದ ದೇಹ ತಪ್ಪಾಗಿಸಲು ಈಜುಕೊಳಗಳು ಮಾತ್ರ ಈಗ ಇರುವ ಏಕೈಕ ಮಾರ್ಗವಾಗಿವೆ. 

ನಗರದ ಸುತ್ತಲಿನ ಈಜುಕೊಳಗಳಲ್ಲಿ ಜನ ಜಾತ್ರೆಯೇ ಸೇರುತ್ತಿದೆ. ಆದರೆ ಜನ ದಟ್ಟಣೆಗೆ ತಕ್ಕಂತೆ ಈಜುಕೊಳಗಳಲ್ಲಿನ ನೀರಿನ ಶುದ್ದತೆ ಮಾತ್ರ ಇಲ್ಲದಾಗಿವೆ. 

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಜನರು ಈಜುಕೊಳದಲ್ಲಿ ಇದ್ದೇ ಇರುತ್ತಾರೆ. ಹಾಗಾಗಿ ಈಜುಕೊಳಗಳನ್ನು ಶುದ್ಧ ಮಾಡಿ ಹೊಸದಾಗಿ ನೀರು ತುಂಬಿಸುವುದೇ ಈಜುಕೊಳದವರಿಗೆ ಕಷ್ಟವಾಗುತ್ತಿದೆ. ಅಲ್ಲದೆ ಕೊಳವೆ ಬಾವಿಗಳಲ್ಲೂ ನೀರು ಕುಸಿತವಾಗುತ್ತಿವೆ, ವಿದ್ಯುತ್ ಕೊರತೆಯಿಂದಾಗಿ ಹಳೇ ನೀರಿನಲ್ಲೇ ಜನರು ಈಜುತಿದ್ದಾರೆ. 

ಇದರಿಂದ ಹಲವಾರು ಚರ್ಮ ರೋಗಗಳು, ಒಬ್ಬರಿಂದ ಮತ್ತೊಬ್ಬರಿಗೆ ನಂಜು ರೋಗಗಳು ಹರಡುವ ಸಾಧ್ಯತೆಗಳು ಇವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಅದರಲ್ಲೂ ಬಿಸಿಲಿನ ತಾಪದಿಂದಾಗಿ ಮಕ್ಕಳಲ್ಲಿ ಗಂಟಲು ಉತ, ಜ್ವರ, ಬೇದಿ, ವಾಂತಿಯಂತಹ ಕಾಯಿಲೆಗಳು ಹೆಚ್ಚಾಗಿವೆ. ಈ ಕಾಯಿಲೆಗಳು ಹರಡುವಂತಹ ನಂಜು ರೋಗಗಳಾಗಿವೆ ಎಂದು ವೈದ್ಯರು ಎಚ್ಚರಿಸುತ್ತಲೇ ಇದ್ದಾರೆ. 

ಈಜುಕೊಳಗಳತ್ತ ಮಕ್ಕಳನ್ನು ಕರೆದುಕೊಂಡು ಹೋಗುವ ಮುನ್ನ ನೀರಿನ ಸ್ವಚ್ಛತೆಯ ಬಗ್ಗೆ ಮಾಹಿತಿ ತಿಳಿಯುವ ಕಡೆಗೆ ಪೋಷಕರು ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

others

HL

literature

HL

crime

HL

politics

HL

politics

HL

crime

HL

crime

HL

crime

HL

crime

HL

politics

HL

politics

HL

politics

HL

economy

HL

crime

HL

crime

HL

crime

HL

politics

HL

agriculture

HL

crime

HL

crime

HL

crime

HL

crime

HL

others

HL

crime

HL

others

HL

crime

HL

others

HL

literature

HL

politics