ನವದೆಹಲಿ, (News Channel): ನಿನ್ನೆ ರಾತ್ರಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ್ದು, ದೇಶಾದ್ಯಂತ 07 ದಿನಗಳ ಕಾಲ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ದೇಶಾದ್ಯಂತ ಪಕ್ಷಾತೀತವಾಗಿ ಡಾ.ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.
ಆದ್ರೆ ಮನಮೋಹನ್ ಸಿಂಗ್ ಅವರ ವಿಧಿವಶ ಆಗಿರುವ ಸುದ್ದಿ ಓದುವ ಭರದಲ್ಲಿ ಖಾಸಗಿ ಸುದ್ದಿ ವಾಹಿನಿ ನ್ಯೂಸ್ ಆಂಕರ್ ಒಬ್ಬರು ಭಾರೀ ಯಡವಟ್ಟು ಮಾಡಿದ್ದು ಹಾಲಿ ಪ್ರಧಾನಿ ನರೇಂದ್ರ ಮೋದಿ ವಿಧಿವಶ ಎಂದು ಓದಿದ್ದಾರೆ.
ರಾಷ್ಟ್ರೀಯ ಸುದ್ದಿ ವಾಹಿನಿ ಆಜ್ ತಕ್ ನ ಮಹಿಳಾ ನ್ಯೂಸ್ ಆ್ಯಂಕರ್ ಗುರುವಾರ ರಾತ್ರಿ (ಡಿ.26 ರಂದು) ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬದಲು ಮೋದಿ ನರೇಂದ್ರ ಮೋದಿ ಅವರ ಹೆಸರನ್ನು ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಮನಮೋಹನ್ ಸಿಂಗ್ ವಿಧಿವಶ ಎಂಬ ಸುದ್ದಿಯನ್ನು ಬ್ರೇಕ್ ಮಾಡುವ ಭರದಲ್ಲಿ ನಿರೂಪಕಿ ಹೀಗೆಂದಿದ್ದಾರೆ. ಏಮ್ಸ್ ದಿಲ್ಲಿ ಆಸ್ಪತ್ರೆಯ ಪ್ರತಿಕಾ ಪ್ರಕಟಣೆ ಇದು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 92ರ ವರ್ಷದಲ್ಲಿ ಎಂದು ಅರ್ಧಕ್ಕೆ ಮಾತು ನಿಲ್ಲಿಸಿದ್ದಾರೆ.
ಆ ನಂತರ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು 92ರ ವರ್ಷಕ್ಕೆ ನಿಧನ ಹೊಂದಿದ್ದಾರೆ ಎಂದು ತಪ್ಪನ್ನು ಸರಿಪಡಿಸಿಕೊಂಡು ಓದಿದ್ದಾರೆ. ಆದರೆ ನೆಟ್ಟಿಗರು ಈ ಕೆಲ ಸೆಕೆಂಡ್ಗಳ ವಿಡಿಯೋವನ್ನು ಕಟ್ ಮಾಡಿ ದಿನದ 24 ಗಂಟೆ ಮೋದಿ ಭಜನೆ ಮಾಡಿದರೆ ಹೀಗೆ ಆಗೋದು ಎಂದು ಟ್ರೋಲ್ ಮಾಡುತ್ತಿದ್ದಾರೆ.