ಬರ ಪರಿಹಾರ; ಕೇಂದ್ರದ ವಿರುದ್ಧ ರಾಜ್ಯಕ್ಕೆ ಮತ್ತೊಂದು ಗೆಲುವು..!
ಬರ ಪರಿಹಾರ; ಕೇಂದ್ರದ ವಿರುದ್ಧ ರಾಜ್ಯಕ್ಕೆ ಮತ್ತೊಂದು ಗೆಲುವು..!

ನವದೆಹಲಿ, (ಏ.30); ಬರ ಪರಿಹಾರ ವಿತರಣೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರಕಾರ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ರೂ.3,454 ಕೋಟಿ ಮೊತ್ತವು ಕೇಳಿದ್ದಕ್ಕಿಂತ ತೀರಾ ಕಡಿಮೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಾದಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸಂಜೀವ್ ಖನ್ನಾ ನೇತೃತ್ವದ ದ್ವಿಸದಸ್ಯ ಪೀಠ ಬರ ಪರಿಹಾರ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿ ನೀಡಿದ ಅಂತರ್ ಸಚಿವಾಲಯದ ವರದಿಯನ್ನು ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿ ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿದೆ.

ವಿಚಾರಣೆಯಲ್ಲಿ ಕರ್ನಾಟಕ ಸರ್ಕಾರದ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ ಅದಕ್ಕಾಗಿ ಧನ್ಯವಾದಗಳು. ಆದರೆ ಬಿಡುಗಡೆ ಮಾಡಿರುವ ಪರಿಹಾರದ ಮೊತ್ತ ಕಡಿಮೆಯಾಗಿದೆ ಇದು ಅಸಮಂಜಸ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರ ಸರ್ಕಾರ ಪರ ವಾದಿಸಿದ ಅರ್ಟಾನಿ ಜನರಲ್ ಆರ್ ವೆಂಕಟರಮಣಿ, ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಪರಿಹಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಇದೇ ಅಂಶವನ್ನು ಹಿಡಿದು ನ್ಯಾಯಾಧೀಶರಿಗೆ ಗಮನಕ್ಕೆ ತಂದ ಸಿಬಲ್, ರಾಜ್ಯಕ್ಕೆ ಆಗಮಿಸಿದ ಕೇಂದ್ರ ಸರ್ಕಾರ ನೇಮಿಸಿದ ಅಂತ‌ರ್ ಸಚಿವಾಲಯದ ತಜ್ಞರ ಸಮಿತಿಯು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ವರದಿ ಏನು ಎಂಬುದು ರಾಜ್ಯಕ್ಕೆ ತಿಳಿದಿಲ್ಲ, ಅದರ ಪ್ರತಿಯನ್ನು ರಾಜ್ಯಕ್ಕೆ ನೀಡಿಲ್ಲ. ಹೀಗಾಗಿ ಆ ಪ್ರತಿಯನ್ನು ಕೋರ್ಟ್ ಮುಂದೆ ಇಡಬೇಕು. ಅದರ ಅನ್ವಯ ಪರಿಹಾರ ನೀಡುವುದಕ್ಕೆ ನಮ್ಮದು ಯಾವುದೇ ತಕರಾರು ಇಲ್ಲ ಎಂದರು. 

ಇದಕ್ಕೆ ಪ್ರತಿಕ್ರಿಯೆ ನೀಡಲು ಸಮಯ ಬೇಕು ಎಂದು ಅರ್ಟಾನಿ ಜನರಲ್ ಕೇಳಿದರು‌. ಇದಕ್ಕೆ ನಿರಾಕರಿಸಿದ ಪೀಠ ಮುಂದಿನ ಸೋಮವಾರದೊಳಗೆ ತಜ್ಞರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

others

HL

literature

HL

crime

HL

crime

HL

politics

HL

politics

HL

politics

HL

politics

HL

education

HL

crime

HL

crime

HL

education

HL

literature

HL

crime

HL

politics

HL

art

HL

literature

HL

literature

HL

crime

HL

politics

HL

economy

HL

art

HL

politics

HL

politics

HL

economy

HL

crime

HL

crime

HL

politics

HL

education