ಮಿಸ್ಟರ್ ಕುಮಾರಸ್ವಾಮಿ.. ರೇವಣ್ಣ ಕುಟುಂಬ ನನ್ ಕುಟುಂಬ ಅಲ್ಲ ಅಂತ ಯಾಕ್ ಜಾರ್ಕೋತಾ ಇದ್ದೀಯಾ..?; ಡಿಕೆ ಶಿವಕುಮಾರ್ ಟಾಂಗ್
ಮಿಸ್ಟರ್ ಕುಮಾರಸ್ವಾಮಿ.. ರೇವಣ್ಣ ಕುಟುಂಬ ನನ್ ಕುಟುಂಬ ಅಲ್ಲ ಅಂತ ಯಾಕ್ ಜಾರ್ಕೋತಾ ಇದ್ದೀಯಾ..?; ಡಿಕೆ ಶಿವಕುಮಾರ್ ಟಾಂಗ್

ಬೆಂಗಳೂರು, (ಏ.30): ಕುಮಾರಸ್ವಾಮಿಗೆ ನನ್ನ ಬಗ್ಗೆ ಮಾತನಾಡದೇ ಇದ್ರೆ ತಿಂದ ಅನ್ನ ಅರಗೋದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟೌಂಗ್ ಕೊಟ್ಟಿದ್ದಾರೆ.

ಸದಾಶಿವ ನಗರದ ಗೃಹಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ತ್ರೀ ಶಕ್ತಿ, ನಾರಿ ಶಕ್ತಿ ಎಂದು ಮಾತನಾಡುವ ಕುಮಾರಸ್ವಾಮಿಯ ಮನೆಯಲ್ಲೇ ಇಂತಹ ಪ್ರಕರಣ ನಡೆದಿದೆ ಎಂದರೆ, ಉಳಿದವರು ಸುಮ್ಮನೇ ಇರ್ತಾರ ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ವಜಾ ಮಾಡಿದ್ದೇವೆ ಅಂತ ಹೇಳ್ತಾ ಇದ್ದಾರೆ, ಆತನನ್ನು ಉಚ್ಚಾಟನೆ ಮಾಡಿದ್ರು ಒಂದೇ ಬಿಟ್ರು ಒಂದೇ. ಇದೆಲ್ಲ ಕಣ್ಣೊರೆಸುವ ನಾಟಕ, ಈ ರೀತಿ ರಾಜಕೀಯದಲ್ಲಿ ತುಂಬಾನೇ ನೋಡಿದ್ದೇನೆ ನನಗೇನು ಇದು ಹೊಸದಲ್ಲ ಎಂದರು. ನಾನು ಚುನಾವಣೆಯನ್ನು ನೇರವಾಗಿ ಎದುರಿಸುತ್ತೇನೆ. ಜೇಬಲ್ಲಿ ಪೆನ್ ಡ್ರೈವ್ ಇದೆ, ಸಿ.ಡಿ ಇದೆ ಎಂದು ಹೆದರಿಸುವವನು ನಾನಲ್ಲ. ಸದನದಲ್ಲಿ ಚರ್ಚೆಗೆ ಬರುವಂತೆ ನೇರ ಸವಾಲು ಹಾಕುವುದು ಬೆಂಗಳೂರಿನ ಕೆಂಪೇಗೌಡರ ರಕ್ತದ ಗುಣ.

ಅಲ್ಲದೇ ಕುಮಾರಸ್ವಾಮಿ ಅವರು ಏನೋ ಪ್ರತಿಭಟನೆ ಮಾಡ್ತಾರಂತೆ. ಪೆನ್ ಡ್ರೈ ಬಿಡುಗಡೆ ಮಾಡ್ತಾನಂತೆ ಅದೇನು ಮಾಡ್ತೀಯ ಮಾಡು ನಾನು ಅದಕ್ಕೆ ಕಾಯುತ್ತಿದ್ದೇನೆ. ಒಪ್ಕೋ ನೀನು.. ನನಗೂ ಹಾಗೂ ರೇವಣ್ಣ ಕುಟುಂಬಕ್ಕೆ ಸಂಬಂಧವಿಲ್ಲ ಅಂತ ಹೇಳಿ ಜಾರಿ ಕೊಳ್ತಾ ಇದ್ದೀಯ.. ಮಿಸ್ಟರ್ ಕುಮಾರಸ್ವಾಮಿ ರೇವಣ್ಣ ಕುಟುಂಬ ನನ್ ಕುಟುಂಬ ಅಲ್ಲ ಅಂತ ಯಾಕ್ ಜಾರ್ಕೋತಾ ಇದ್ದೀಯಾ..? ಹೇಗ್ ಕುಟುಂಬ ಅಲ್ಲ ಅಂತ ಹೇಳೋಕ್ ಆಗುತ್ತೆ.. ಜನ‌ ಏನ್ ದಡ್ಡರಾ..? ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು

ಪ್ರಜ್ವಲ್ ರೇವಣ್ಣನಿಂದ ಸಾವಿರಾರು ಹೆಣ್ಣು ಮಕ್ಕಳ ಬಾಳು ಹಾಳಾಗಿದೆ. ಆದ್ರೆ ಪ್ರಾಣಭಯದಿಂದ ದೂರು ದಾಖಲಿಸಲು ಮುಂದೆ ಬರುತ್ತಿಲ್ಲ. ನೆರವಿಗಾಗಿ ಬಂದವರು, ಪಕ್ಷದ ಕಾರ್ಯಕರ್ತರು ಇವರ ಚಟಕ್ಕೆ ಬಡವರ ಮಕ್ಕಳನ್ನು ಬಲಿಕೊಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕುಮಾರಸ್ವಾಮಿ ತನ್ನ ಮನೆಯ ಮುಂದೆ ಪ್ರತಿಭಟನೆ ಮಾಡಿಸುವುದಾದರೆ ಧಾರಾಳವಾಗಿ ಮುಂದುವರಿಯಲಿ ಎಂದ ಶಿವಕುಮಾರ್ ಅದಕ್ಕಾಗಿಯೇ ಕಾಯುತ್ತಿದ್ದೇನೆ.. ಯಾಕ್ ಇನ್ನೂ ಸುಮ್ಮನೆ‌ ಇದ್ದೀಯಾ ಎಂದರು..

ಕುಮಾರಸ್ವಾಮಿಯವರ ಹೇಳಿಕೆ ಮತ್ತು ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ಅವರು ಪ್ರಜ್ವಲ್ ವಿಡಿಯೋಗಳ ಬಗ್ಗೆ ಪಕ್ಷದ ವರಿಷ್ಟರಿಗೆ ಪತ್ರ ಬರೆದಿರುವುದ ಓದಿದ ಡಿಕೆ ಶಿವಕುಮಾರ್. ಪ್ರಜ್ವಲ್ ರೇವಣ್ಣ ಹಾಸನದಿಂದ ಸ್ಪರ್ಧಿಸಿದರೆ ಪಕ್ಷದ ಇಮೇಜಿಗೆ ಧಕ್ಕೆಯಾಗುತ್ತದೆ, ಚುನಾವಣೆಯಲ್ಲಿ ಕಾಂಗ್ರೆಸ್ ಈ ಅಂಶವನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತದೆ ಎಂದು ಬರೆದಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಚಿಕ್ಕ ಚಿಕ್ಕ ತಪ್ಪುಗಳನ್ನು ಹುಡುಕುತ್ತಿದ್ದ ಬಿಜೆಪಿಯ ಘನ ನಾಯಕರು ಎಲ್ಲಿ ಹೋಗಿದ್ದಾರೆ, ಬೇರೆ ಕಡೆ ಹೋಗಿ ಭೋದನೆ ನೀಡುವುದಲ್ಲ. ನಿಮ್ಮ ಪಕ್ಷದವರು ತಪ್ಪು ಮಾಡಿದ್ರು ಅದನ್ನು ಖಂಡಿಸಬೇಕು ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

others

HL

literature

HL

crime

HL

politics

HL

politics

HL

crime

HL

crime

HL

crime

HL

crime

HL

politics

HL

politics

HL

politics

HL

economy

HL

crime

HL

crime

HL

crime

HL

politics

HL

agriculture

HL

crime

HL

crime

HL

crime

HL

crime

HL

others

HL

crime

HL

others

HL

crime

HL

others

HL

literature

HL

politics

HL

crime