ಕರ್ನಾಟಕದಲ್ಲಿ ಕಾಂಗ್ರೆಸ್ ವಸೂಲಿ ಗ್ಯಾಂಗ್ ಸರಕಾರ ನಡೆಸುತ್ತಿದೆ: ಪ್ರಧಾನಿ ಮೋದಿ ಗಂಭೀರ ಆರೋಪ
ಕರ್ನಾಟಕದಲ್ಲಿ ಕಾಂಗ್ರೆಸ್ ವಸೂಲಿ ಗ್ಯಾಂಗ್ ಸರಕಾರ ನಡೆಸುತ್ತಿದೆ: ಪ್ರಧಾನಿ ಮೋದಿ ಗಂಭೀರ ಆರೋಪ

ಬಾಗಲಕೋಟೆ, (ಏ.29): ಮುಂದಿನ ಕೆಲ ವರ್ಷಗಳಲ್ಲಿ ಭಾರತವನ್ನು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಿಸುವುದು ನಮ್ಮ ಸಂಕಲ್ಪವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ. 

ಬಾಗಲಕೋಟೆಯಲ್ಲಿ ಸೋಮವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ನಾವು ಭಾರತವನ್ನು ಉತ್ಪಾದನಾ ಹಬ್, ಕೌಶಲ್ಯ ಕೇಂದ್ರವನ್ನಾಗಿ ಮಾಡಲು ಬಯಸುತ್ತೇವೆ. ಇದಕ್ಕೆ ದೂರದೃಷ್ಟಿ ಬೇಕು. ಮೋಜು, ಮಸ್ತಿ ಮಾಡುವವರಿಂದ ಇದನ್ನು ಮಾಡಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ಸರ್ಕಾರ ತನ್ನ ನೌಕರರಿಗೆ ಸಂಬಳ ನೀಡದ ದಿನ ದೂರದಲ್ಲಿ ಇಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ವಸೂಲಿ ಗ್ಯಾಂಗ್ ನಡೆಸುತ್ತಿದೆ. ಸರ್ಕಾರವಲ್ಲಾ, 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವರು, ಒಂದೇ ಬಾರಿಗೆ ಬಡತನವನ್ನು ತೊಡೆದುಹಾಕುತ್ತೇವೆ ಎಂದು ಹೇಳುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಮತಗಳನ್ನು ಪಡೆಯಲು ಭಯೋತ್ಪಾದನೆ ಮತ್ತು ಮೂಲಭೂತವಾದಿ ಮನಸ್ಥಿತಿವುಳ್ಳವರನ್ನು ಕಾಂಗ್ರೆಸ್ ರಕ್ಷಿಸುತ್ತಿದೆ. ತನ್ನ ಪ್ರಣಾಳಿಕೆಯಲ್ಲಿ ಧರ್ಮ ಆಧಾರಿತ ಮೀಸಲಾತಿ ನೀಡುವ ಸಂದೇಶ ನೀಡಿದೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಸೋತವರು ತಂತ್ರಜ್ಞಾನ ಬಳಸಿ, ನಕಲಿ ವಿಡಿಯೋ ಸೃಷ್ಟಿಸಿ, AI ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇಂತಹ ನಕಲಿ ವಿಡಿಯೋಗಳ ಬಗ್ಗೆ ಪೊಲೀಸರು ಮತ್ತು ಬಿಜೆಪಿ ಪಕ್ಷದವರಿಗೆ ಮಾಹಿತಿ ನೀಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ವಸೂಲಿ ಗ್ಯಾಂಗ್ ಸರ್ಕಾರ ನಡೆಸುತ್ತಿದೆ. ಖಜಾನೆಗೆ ಹಣ ಬರುತ್ತಿದ್ದಂತೆಯೇ ಲೂಟಿ ಮಾಡಿ ತಮ್ಮ ಖಜಾನೆ ಭರ್ತಿ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಕೋಟ್ಯಂತರ ಮೊತ್ತದ ಹಗರಣ ಮಾಡುವ ಕನಸನ್ನು ಕಾಂಗ್ರೆಸ್ ನವರು ಕಾಣುತ್ತಿದ್ದಾರೆ. ರಾಜ್ಯ ಲೂಟಿ ಮಾಡುವವರಿಗೆ ಮೇ 7ರಂದು ಶಿಕ್ಷೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.

ಭಾರತದ ಭವಿಷ್ಯ ಬರೆಯುವ, ವಿಕಸಿತ ಭಾರತ ನಿರ್ಮಾಣ, ಆತ್ಮನಿರ್ಭರ್ ಚುನಾವಣೆ ಇದಾಗಿದೆ. ಭಾರತ ಕೆಲವೇ ವರ್ಷಗಳಲ್ಲಿ ವಿಶ್ವದ ಮೂರನೇ ಆರ್ಥಿಕ ಶಕ್ತಿ ಆಗಲಿದೆ. ಇದನ್ನು ಮಾಡಲು ನಿಮ್ಮ ಒಂದು ಮತ ಆ ಶಕ್ತಿ ನೀಡಲಿದೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

education

HL

crime

HL

crime

HL

education

HL

literature

HL

crime

HL

politics

HL

art

HL

literature

HL

literature

HL

crime

HL

politics

HL

economy

HL

art

HL

politics

HL

politics

HL

economy

HL

crime

HL

crime

HL

politics

HL

education

HL

literature

HL

literature

HL

education

HL

crime

HL

politics

HL

education

HL

politics

HL

crime

HL

literature