ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಸಿಎಸ್‌ಆರ್ ಅನುದಾನದಲ್ಲಿ ಡೀಪ್ ಫ್ರೀಜರ್ ಬಾಕ್ಸ್‌ ಕೊಡುಗೆ ನೀಡಿದ ಗೋಕುಲ್‌ದಾಸ್ ಎಕ್ಸ್‌ಪೋರ್ಟ್ ಚಾರಿಟಬಲ್ ಫೌಂಡೇಶನ್
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಸಿಎಸ್‌ಆರ್ ಅನುದಾನದಲ್ಲಿ ಡೀಪ್ ಫ್ರೀಜರ್ ಬಾಕ್ಸ್‌ ಕೊಡುಗೆ ನೀಡಿದ ಗೋಕುಲ್‌ದಾಸ್ ಎಕ್ಸ್‌ಪೋರ್ಟ್ ಚಾರಿಟಬಲ್ ಫೌಂಡೇಶನ್

ದೊಡ್ಡಬಳ್ಳಾಪುರ, (ಮೆ.14); ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಗೋಕುಲ್‌ದಾಸ್ ಎಕ್ಸ್‌ಪೋರ್ಟ್ ಚಾರಿಟಬಲ್ ಫೌಂಡೇಶನ್ ಸುಮಾರು 5 ಲಕ್ಷ ರೂ. ಸಿಎಸ್‌ಆರ್ ಅನುದಾನದಲ್ಲಿ ಶವ ಸಂಗ್ರಹಕ ಕೋಲ್ಡ್ ಬಾಕ್ಸ್ (ಡೀಪ್ ಫ್ರೀಜರ್ ಬಾಕ್ಸ್) ಹಸ್ತಾಂತರಿಸಲಾಯಿತು.

ನಗರದ ತಾಯಿ ಮಗು ಆಸ್ಪತ್ರೆಯಲ್ಲಿನ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಮಂಜುನಾಥ್ ಮಾತನಾಡಿ, ಅಪಘಾತ, ರೈಲ್ವೆ ಅಪಘಾತಗಳಲ್ಲಿ ಮೃತಪಟ್ಟಿರುವ ಶವಗಳ ವಾರಸುದಾರರು ಸಿಕ್ಕಿ ಗುರುತು ಪತ್ತೆಯಾಗುವವರೆಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಶವವನ್ನು ಅಲ್ಲಿಯವರೆಗೂ ಸಂಗ್ರಹಿಸುವುದು ಅಗತ್ಯವಾಗಿದೆ. 

ಇದರಿಂದ ಕೋಲ್ಡ್ ಬಾಕ್ಸ್‌ನಲ್ಲಿ ಸಂಗ್ರಹಿಸುವ ಮೂಲಕ ಶವ ಗುರುತು ಪತ್ತೆಯಾದ ನಂತರ ಮರ ಣೋತ್ತರ ಪರೀಕ್ಷೆಯಲ್ಲಿ ಫಲಿತಾಂಶ ನಿಖರವಾಗಿ ಪಡೆಯಲು ಸಹಾಯಕ ವಾಗುತ್ತದೆ. ಈ ಕೊರತೆ ತಾಲೂಕು ಆಸ್ಪತ್ರೆ ಎದುರಾಗಿತ್ತು. ಈ ನಿಟ್ಟಿನಲ್ಲಿ ಗೋಕುಲ್ ದಾಸ್ ಸಂಸ್ಥೆ ನೀಡಿದ ಡೀಪ್ ಕೋಲ್ಡ್ ಬಾಕ್ಸ್ ಸಾಕಷ್ಟು ಸಹಕಾರಿಯಾಗಲಿದೆ ಎಂದರು.

ಗೋಕುಲ್‌ದಾಸ್ ಎಕ್ಸ್‌ಪೋರ್ಟ್ ಚಾರಿಟಬಲ್ ಫೌಂಡೇಶನ್‌ನ ಶ್ರೀನಿ ವಾಸ್, ಸಿದ್ದೇಶ್ವ‌ರ್ ಗೌಡ, ಮಹಂತೇಶ್, ನಾಗರಾಜ್, ವಿಶ್ವನಾಥ್, ಕೆಂಪೇಗೌಡ, ವೀರಭದ್ರಾಚಾರಿ, ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಾ.ಎಂ.ನವೀನ್ ಕುಮಾರ್, ಆಸ್ಪತ್ರೆ  ಆಡಳಿತಾಧಿಕಾರಿ ಡಾ.ರಮೇಶ್, ವೈದ್ಯರಾದ ಡಾ.ರಾಜು, ಸಿಬ್ಬಂದಿ ಯುವರಾಜ್ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime

HL

sports