ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ದೂರು..!
ಮಾಜಿ ಸಿಎಂ ಯಡಿಯೂರಪ್ಪ ಪುತ್ರನ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ದೂರು..!

ಶಿವಮೊಗ್ಗ, (ಮೇ.14): ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಈಶ್ವರಪ್ಪ, ಸೋಲಿನ ಭೀತಿಯಿಂದ ನನ್ನ ಮೇಲೆ ಅಪ ಪ್ರಚಾರ ಮಾಡಿದ್ದಾರೆ. ಪ್ರಧಾನಿ ಮೊದಿಗೆ ಸುಳ್ಳು ದಾಖಲೆಗಳನ್ನ ನೀಡಿ ನನ್ನ ಮೇಲೆ ಅಪಪ್ರಚಾರ ಮಾಡಿ ಚುನಾವಣೆಯಲ್ಲಿ ಗೆಲ್ಲೋಕೆ ಪ್ರಯತ್ನ ಮಾಡಿದ್ದಾರೆ. ಇದರ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಅನ್ನೋನ್ ಹೆಸರಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ನೇರವಾಗಿ ಬಿವೈ ರಾಘವೇಂದ್ರ ವಿರುದ್ಧ ಎಫ್‌ಐಆ‌ರ್ ಆಗಬೇಕು. ಅವರನ್ನು ಕೂಡಲೇ ಬಂಧಿಸಬೇಕು. ಸೋನಿಯಾ ಗಾಂಧಿ ಅವರ ಪರಿವಾರದಿಂದ ಕಾಂಗ್ರೆಸ್ ಹೊರಬರಬೇಕು ಎಂದು ಹೇಳುತ್ತಿದ್ದೆವು. ಅದೇ ರೀತಿ ಬಿಜೆಪಿ ಕೂಡ ಶುದ್ದೀಕರಣ ಆಗಬೇಕು. ರಾಜ್ಯದಲ್ಲಿ ಅಪ್ಪ ಮಕ್ಕಳ ಆಟಕ್ಕೆ ಕಡಿವಾಣ ಹಾಕಬೇಕು ಎಂದು ಕಿಡಿಕಾರಿದರು.

ಬಿಜೆಪಿಯಿಂದ ತಾತ್ಕಾಲಿಕವಾಗಿ ನನ್ನನ್ನು ಕಿತ್ತು ಬಿಸಾಕಿರಬಹುದು. ಆದರೆ ನಾನು ಸಾಯೋವರೆಗೆ ಬಿಜೆಪಿಯವನೇ. ಬಿಜೆಪಿಯೇ ನನ್ನ ತಾಯಿ. ಜಗದೀಶ್ ಶೆಟ್ಟರ್‌ನ 6 ವರ್ಷ ಉಚ್ಚಾಟಿಸಿದರು. ಆದರೆ ಅವರನ್ನು ಮತ್ತೆ ಕರೆತಂದು ಬಿಜೆಪಿ ಟಿಕೆಟ್ ಕೊಟ್ರು. ಉಚ್ಚಾಟನೆಗೆ ಬೆಲೆ ಇದ್ಯಾ.? ಎಂದು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ ಮಾತಾಡಲು ಅಸಹ್ಯವಾಗುತ್ತದೆ. ಹೆಣ್ಣನ್ನು ಬಳಸಿ ರಾಜಕೀಯ ಮಾಡೋನು ಅಯೋಗ್ಯ ಕೂಡಲೇ ಈ ಪ್ರಕರಣ ಸಿಬಿಐಗೆ ಕೊಡಬೇಕು. ದೇವರಾಜೇಗೌಡ ಪ್ರಕರಣ ಹೊರತಂದರು, ಆದರೆ ಅವರನ್ನೇ ಅರೆಸ್ಟ್ ಮಾಡಿದರು. ಈ ಘಟನೆಯಿಂದ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ ಎಂದರು.

ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಂದ ಹಿಂದೂಗಳ ನಡುವೆ ಜಾತಿ ರಾಜಕೀಯ ಶುರುವಾಗಿದೆ. ಜಾತಿ ಹೆಸರು ಹೇಳಿ ವೋಟ್ ಕೇಳೋಕೆ ನಾಚಿಕೆ ಆಗಬೇಕು. ಕಾಂಗ್ರೆಸ್ ಕುತಂತ್ರದಿಂದ ಮುಸ್ಲಿಂ ಒಂದಾಗಿದ್ದಾರೆ. ಜಾತಿ ಒಡೆಯುತ್ತಿದ್ದಾರೆ. ಮುಂದೆ ಹಿಂದೂಗಳು ಒಂದಾಗಬೇಕು ಎಂದು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime