ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಮಾದರಿ ಕಾರ್ಯ; ಸರ್ಕಾರಿ ಶಾಲೆಯ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎಂಬುದು ಸಾಬೀತು ಎಂದು ಪ್ರಶಂಸೆ
ಡಿಸಿಎಂ ಡಿಕೆ ಶಿವಕುಮಾರ್ ಅವರಿಂದ ಮಾದರಿ ಕಾರ್ಯ; ಸರ್ಕಾರಿ ಶಾಲೆಯ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎಂಬುದು ಸಾಬೀತು ಎಂದು ಪ್ರಶಂಸೆ

ಬೆಂಗಳೂರು, (ಮಾ.14); ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಬಾಗಲಕೋಟೆ ಮುಧೋಳ ತಾಲ್ಲೂಕಿನ ಮೆಳ್ಳಿಗೇರಿಯಲ್ಲಿರುವ ಮೊರಾರ್ಜೀ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು ಮತ್ತು ಮೂರನೇ ರ‍್ಯಾಂಕ್ ಪಡೆದ ಮಂಡ್ಯದ ವಿದ್ಯಾರ್ಥಿ ನವನೀತ್ ಅವರನ್ನು ಸರ್ಕಾರದ ಪರವಾಗಿ ಸನ್ಮಾನಿಸಿದರಲ್ಲದೆ, ವೈಯಕ್ತಿಕವಾಗಿ ಕ್ರಮವಾಗಿ ರೂ. 5 ಲಕ್ಷ ಮತ್ತು ರೂ. 2 ಲಕ್ಷ ನೀಡಿ ಉಪ ಮಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರೋತ್ಸಾಹಿಸುವ ಮೂಲಕ ಮಾದರಿ ಕಾರ್ಯವನ್ನು ಮಾಡಿದ್ದಾರೆ. 

ಇದೇ ವೇಳೆ ಅಂಕಿತಾಳ ಪೋಷಕರನ್ನೂ ಸನ್ಮಾನಿಸಿದರು. ಡಿಕೆ ಶಿವಕುಮಾರ್ ಅವರು ಆಕೆಯ ಪೋಷಕರನ್ನು ಸನ್ಮಾನಿಸುವಾಗ ಅಂಕಿತಾ ನನ್ನ ಪ್ರಿನ್ಸಿಪಾಲ್ ಸಹ ಬಂದಿದ್ದಾರೆ ಅನ್ನುತ್ತಾಳೆ. ಆಕೆಯಲ್ಲಿದ್ದ ಭಾವನೆಯನ್ನು ಅರ್ಥಮಾಡಿಕೊಂಡ ಶಿವಕುಮಾರ್ ಪ್ರಿನ್ಸಿಪಾಲರನ್ನು ಕರೆದು ಅವರ ಮೇಲೂ ಶಾಲು ಹೊದಿಸಿ, ಹಾರ ಹಾಕಿ ಬೆನ್ನು ತಟ್ಟಿ ಅಭಿನಂದಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಡಿಕೆ ಶಿವಕುಮಾರ್, SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಹಾಗೂ ಮೂರನೇ ಸ್ಥಾನ ಪಡೆದ ಮಂಡ್ಯದ ಕನ್ನಲಿ ಗ್ರಾಮದ ನವನೀತ್‌ ಅವರನ್ನು ಇಂದು ಭೇಟಿಯಾಗಿ ಸನ್ಮಾನಿಸಿ ಗೌರವಿಸಿದೆ. ಹಾಗೆಯೇ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್‌ಗೆ 2 ಲಕ್ಷ ರೂ. ಚೆಕ್‌ ವಿತರಿಸಿದೆ ಎಂದಿದ್ದಾರೆ‌.

ಸರ್ಕಾರಿ ಶಾಲೆಯ ಮಕ್ಕಳು ಯಾರಿಗೇನೂ ಕಡಿಮೆಯಿಲ್ಲ ಎಂಬುದನ್ನು ಈ ಇಬ್ಬರೂ ಮಕ್ಕಳು ನಿರೂಪಿಸಿದ್ದಾರೆ. ಮುಂದೆ ಕೂಡ ಇದೇ ರೀತಿ ಓದಿ ನಿಮ್ಮ ಶಾಲೆ, ಶಿಕ್ಷಕರು, ಪೋಷಕರಿಗೆ ಕೀರ್ತಿ ತನ್ನಿ ಎಂದು ಶುಭ ಹಾರೈಸಿದೆ ಎಂದು ಬರೆದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime

HL

sports