ದೊಡ್ಡಬಳ್ಳಾಪುರದಲ್ಲಿ ತಪ್ಪಿದ ಮತ್ತೊಂದು ಅವಘಡ.. ಕೇಳೋರ್ ಯಾರು ವಾಹನ ಸವಾರರ ಗೋಳು..?
ದೊಡ್ಡಬಳ್ಳಾಪುರದಲ್ಲಿ ತಪ್ಪಿದ ಮತ್ತೊಂದು ಅವಘಡ.. ಕೇಳೋರ್ ಯಾರು ವಾಹನ ಸವಾರರ ಗೋಳು..?

ದೊಡ್ಡಬಳ್ಳಾಪುರ, (ಮೇ.14); ನಗರದ ಹೊರವಲಯದಲ್ಲಿ‌ ಸಿದ್ದೇನಾಯಕನಹಳ್ಳಿ ತಿರುವಿನ ಬಳಿ ಅಪಘಾತ ಸರಣಿ ಮುಂದುವರಿದ್ದು, ಇಂದು ಸಂಜೆ ಲಾರಿ ಅಪಘಾತಕ್ಕೀಡಾಗಿದೆ. ಆದರೆ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಪ್ರಮಾದ ತಪ್ಪಿದೆ.

ಬೆಂಗಳೂರು ಕಡೆಯಿಂದ ಬಂದ ಕಂಟೈನರ್ ಸಾಗಿಸುವ ಲಾರಿ, ಸಿದ್ದೇನಾಯಕನಹಳ್ಳಿ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿ ಅಳವಡಿಸಿದ್ದ ತಡೆಗೋಡೆ ಭೇದಿಸಿಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಚಾಲಕ ಪಾರಾಗಿದ್ದು, ವಿದ್ಯುತ್ ಕಂಬಿ ಸ್ಪರ್ಶದಿಂದ ಉಂಟಾಗಬಹುದಾಗಿದ್ದ ತೊಂದರೆಯಿಂದ ಪರಾಗಿದ್ದಾರೆ. ಘಟನೆಯಲ್ಲಿ ಎರಡು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿದ್ದೇನಾಯಕನಹಳ್ಳಿ ಬಳಿ ನಿರ್ಮಿಸಿರುವ ಅವೈಜ್ಞಾನಿಕ ತಿರುವಿನ ಕಾರಣ ಪದೇ ಪದೇ ಅಪಘಾತ ಸಂಭವಿಸುತ್ತಿದ್ದರು, ವಾಹನ ಸವಾರರಿಂದ ಹಣ ಸಂಗ್ರಹಿಸುವ ಟೋಲ್ ಸಿಬ್ಬಂದಿಗಳಾಗಲಿ, ಜನಪ್ರತಿನಿದಿಗಳಾಗಲಿ ಕ್ರಮಕೈಗೊಳ್ಳದೆ ತಮಗೆ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime

HL

sports