ಪ್ರಜ್ವಲ್ ರೇವಣ್ಣ ಪ್ರಕರಣ; ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮವೆಂದ ಮಾಜಿ ಸಿಎಂ ಕುಮಾರಸ್ವಾಮಿ
ಪ್ರಜ್ವಲ್ ರೇವಣ್ಣ ಪ್ರಕರಣ; ಪಕ್ಷದಿಂದ ನಿರ್ದಾಕ್ಷಿಣ್ಯ ಕ್ರಮವೆಂದ ಮಾಜಿ ಸಿಎಂ ಕುಮಾರಸ್ವಾಮಿ

ಶಿವಮೊಗ್ಗ, (ಏ.29): ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ವೈರಲ್ ಕುರಿತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಹಾಸನದಲ್ಲಿ ಅಭ್ಯರ್ಥಿ ಗೆಲ್ತಾರೆ.. ಮೂರು ದಿನಗಳ ಹಿಂದೆ ಪೆನ್ ಡ್ರೈವ್ ಬಿಟ್ಟವರು ಯಾರು..? ಕಾರಣ ಏನು..? ಹಳೆಯ ವಿಷಯ ಈಗ ಏಕೆ ಎತ್ತಿದ್ದಾರೆ..? ಎಸ್‌ಐಟಿ ರಚನೆಯಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಬೇಕು. ಈ ನೆಲದ ಕಾನೂನಿನಲ್ಲಿ ಯಾರೇ ತಪ್ಪು ಮಾಡಿದರೂ ತಲೆಬಾಗಲೇಬೇಕು ಎಂದು ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೂ ಮೂರು ದಿನ ವಿಡಿಯೋಗಳನ್ನು ವೈರಲ್ ಮಾಡಿದ್ದಾರೆ. ಇದು ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದರು. 

ಕುಟುಂಬ ಅಂತ ಯಾಕ್ ತರ್ತೀರಿ.. ಕಾಂಗ್ರೆಸ್ ನಾಯಕರಿಗೆ ನಾ ಪ್ರಶ್ನೆ ಮಾಡೋದು‌‌.. ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ವ್ಯಕ್ತಿ ಬಗ್ಗೆ ಚರ್ಚೆ ಮಾಡಿ. ಕುಟುಂಬವನ್ನು ಯಾಕೆ ಎಳೆದು ತರ್ತಿರಾ? ಎಂದು ಪ್ರಶ್ನಿಸಿದ ಅವರು, ದೇವೇಗೌಡ ಹಾಗೂ ಕುಮಾರಸ್ವಾಮಿ ಹೆಸರನ್ನು ಯಾಕೆ ತರುತ್ತಿರಾ? ತಪ್ ಯಾರ್ ಮಾಡಿದ್ದರೆ, ಅವರು ಶಿಕ್ಷೆ ಅನುಭವಿಸಲೇ ಬೇಕೆಂದು ನಾ ಹೇಳಿದ್ದೀನಿ ಅಲ್ವಾ. 

ಎಸ್‌ಐಟಿ ವರದಿ ಏನು ಕೊಡುತ್ತೋ ಅದರ ಪ್ರಕಾರ ಶಿಕ್ಷೆಯಾಗುತ್ತದೆ. ಇಂತಹ ಪ್ರಕರಣದಿಂದ ನನಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮುಜುಗರವಾಗುತ್ತದೆ. ಇಂತಹಕ್ಕೆ ನನ್ನ ಸಹಮತ ಇಲ್ಲ ಎಂದು ಹೇಳಿದರು.

ಅವರು ಎಲ್ಲಿಗೇ ಹೋಗ್ತಾರೋ, ಏನ್ ಮಾಡ್ತಾರೋ ಕಾಯಲು ಸಾಧ್ಯವೆ, ನಮ್ಮ ಕೈಯಲ್ ಇದೆಯೇ...? ಅವರು ಬೇರೆ ಇದ್ದಾರೆ. ನಮ್ಮ ಗಮನಕ್ಕೆ ಬಂದಿದ್ದರೆ ಮುಜುಗರ ತಪ್ಪಿಸಬಹುದಿತ್ತು. 

ಈ ಕುರಿತು ನಾ ಹೆಚ್ಚು ಮಾತಾಡಲ್ಲ. ಎಸ್‌ಐಟಿ ತನಿಖೆಯ ವರದಿ ಬರಲಿ ನಂತರ ಮಾತಾಡುವೆ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

education

HL

literature

HL

crime

HL

politics

HL

art

HL

literature

HL

literature

HL

crime

HL

politics

HL

economy

HL

art

HL

politics

HL

politics

HL

economy

HL

crime

HL

crime

HL

politics

HL

education

HL

literature

HL

literature

HL

education

HL

crime

HL

politics

HL

education

HL

politics

HL

crime

HL

literature

HL

politics

HL

crime