ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌; ಛೀ..ಥೂ ಎಂದ ನೆಟ್ಟಿಗರು..
ಬರ ಪರಿಹಾರ ಬಿಡುಗಡೆಗೆ ಮೋದಿಗೆ ಧನ್ಯವಾದ ಹೇಳಿ ಬಿಜೆಪಿ ಪೋಸ್ಟ್‌; ಛೀ..ಥೂ ಎಂದ ನೆಟ್ಟಿಗರು..

ಬೆಂಗಳೂರು, (ಏ.28): ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ರಾಜ್ಯಕ್ಕೆ ಬರ ಪರಿಹಾರ ಕೊಡುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಇಂದು ರಾಜ್ಯಕ್ಕೆ ರೂ.3,454 ಕೋಟಿ ಬರ ಪರಿಹಾರ ಘೋಷಿಸಿದೆ.

'ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸಿನಷ್ಟೂ ಮಧ್ಯಂತರ ಪರಿಹಾರ ನೀಡದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು. 

ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ರೂ.3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. 

ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ಅವರಿಗೆ ತುಂಬು ಹೃದಯದ ಧನ್ಯವಾದಗಳು' ಎಂದು ಬಿಜೆಪಿ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿತ್ತು.

ಏತನ್ಮಧ್ಯೆ, ಬರ ಪರಿಹಾರ ಬಿಡುಗಡೆಗೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿ ರಾಜ್ಯ ಬಿಜೆಪಿ ಘಟಕ ಪೋಸ್ಟ್ ಮಾಡಿರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ನೆಟ್ಟಿಗರ ಕೆಲ ಕಾಮೆಂಟ್ ಇಲ್ಲಿದೆ.

ಇದಕ್ಕೆ ನಮ್ಮ ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟ್ ಹತ್ತೋ ಹಾಗೆ ಮಾಡಿದ ನಿಮ್ಮ ದರಿದ್ರ ಸರ್ಕಾರಕ್ಕೆ ನಾವು ಯಾಕೆ ಧನ್ಯವಾದ ಹೇಳಬೇಕು? ಬೀಜೇಪಿ ರಾಜ್ಯಘಟಕ ಮೂರು ಬಿಟ್ಟಿರುವ ಒಂದು ಸಂಸ್ಥೆ!.

ರೈತರ ಕಾಳಜಿ ಇರೋದು ಕಾಂಗ್ರೆಸ್ಸ್ ಸರ್ಕಾರಕ್ಕೆ ಮಾತ್ರ ಅನ್ನೋದು ಮತ್ತೆ ಸಾಬೀತಾಗಿದೆ. ಹೋರಾಡಿ ಗೆದ್ದು ಬಂದ ಸಿದ್ದರಾಮಯ್ಯ .

ಬರ ಪರಿಹಾರ ಕೊಟ್ಟಿಲ್ಲವೆಂದು ರಾಜ್ಯ ಸರ್ಕಾರ ದೂರು ಕೊಟ್ಟಿತ್ತು.

ಸುಪ್ರೀಂ ಕೋರ್ಟ್ ಕ್ಯಾಕರಿಸಿ ಕೇಂದ್ರಕ್ಕೆ ಉಗಿದಿತ್ತು.

ಹಾಗಾಗಿ ಇಂದು ನಮಗೆ ಬರ ಪರಿಹಾರ ಸಿಕ್ಕಿದೆ.

ಯಾವನ್ನಾದ್ರೂ ಮೋದಿ ಕೊಟ್ರು, ಥ್ಯಾಂಕ್ಸ್ ಅಂದ್ರೆ ಕೆರ ಕಿತ್ತೋಗ್ತವೆ ಹುಷಾರ್..

ನಿಮಗೆ ನಾಚಿಕೆ ಮಾನ ಮರ್ಯಾದೆ ಏನೂ ಇಲ್ಲ. ರಾಜ್ಯ ಸರ್ಕಾರ ಹೋರಾಡಿ, ಸುಪ್ರೀಂ ನಲ್ಲಿಅರ್ಜಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ಉಗಿದ ನಂತರ ಕೊಟ್ಟಿದ್ದೀರಿ. ಈಗ ನಾವೆ ಕೊಟ್ವಿ ಅಂತ ಬೆನ್ನು ತಟ್ಟಿಕೊಳ್ಳುತ್ತಿದ್ದೀರಿ. ಥೂ.. ಅಸಹ್ಯ ನೀವು.

ಕರ್ನಾಟಕದಲ್ಲಿ ಬರ ಬಂದಿದ್ದು ಯಾವಾಗ?

ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದಿದ್ದು ಯಾವಾಗ?

ಒಕ್ಕೂಟ ಸರ್ಕಾರದ ತಜ್ಞರ ತಂಡ ಬಂದಿದ್ದು ವರದಿ ಕೊಟ್ಟಿದ್ದು ಯಾವಾಗ? 

ನಾಡಿನ ಮುಖ್ಯಮಂತ್ರಿ ಸಚಿವರು ಭೇಟಿ ಮಾಡಿ ಮನವಿ ಮಾಡಿದ್ದು ಯಾವಾಗ?

ಕರ್ನಾಟಕದ ಆಡಳಿತ ಪಕ್ಷದ ಶಾಸಕರು/ಮುಂದಾಳುಗಳು ದಿಲ್ಲಿ ಹೋರಾಟ ಮಾಡಿದ್ದು ಯಾವಾಗ?

ನೀತಿ ಸಂಹಿತೆ ಬಂದಿದ್ದು ಯಾವಾಗ..

ಹೊಟ್ಟೆಗೇನು ತಿಂತೀರ ಕಮಂಗಿಗಳಾ? ಸುಪ್ರೀಂ ಕೋರ್ಟ್ ಮೋದಿ ಸರಕಾರಕ್ಕೆ ಕ್ಯಾಕರಿಸಿ ಉಗಿದ ಬಳಿಕ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಹಣ ಬಿಡುಗಡೆ ಆಗಿದ್ದು. ತಾವರೆಯನ್ನು ಭಕ್ತರ ಕಿವಿ ಮೇಲೆ ಇಟ್ಟಿರಿ.. ಕನ್ನಡಿಗರು ದಡ್ಡರಲ್ಲ ಎಂಬಂತೆ ಬಿಜೆಪಿ ಕರ್ನಾಟಕದ ಟ್ವಿಟ್ಗೆ ನೆಟ್ಟಿಗರು ಗರಂ ಆಗಿಯೇ ಉತ್ತರ ನೀಡಿದ್ದಾರೆ.

ಮತ್ತೊಂದೆಡೆ 'ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ರಾಜ್ಯಕ್ಕೆ 18,172 ಕೋಟಿ ರು. ಬರ ಪರಿಹಾರ ಬಿಡುಗಡೆ ಮಾತ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ಕೇವಲ 3,498 ಕೋಟಿ ರು. (ಶೇ.20) ಮಾತ್ರ ಬಿಡುಗಡೆ ಮಾಡುವ ಮೂಲಕ ರಾಜ್ಯದ ರೈತರಿಗೆ ಮತ್ತೊಮ್ಮೆ ತೀವ್ರ ಅನ್ಯಾಯ ಮಾಡಿದೆ. ಇದರ ವಿರುದ್ಧ ಕಾನೂನು ಹೋರಾಟ ಮುಂದುವರೆಸುತ್ತೇವೆ' ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ರಾಜ್ಯ ಸರ್ಕಾರವು ಗೋಗರೆದರೂ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿರಲ್ಲ. ಹೀಗಾಗಿ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ ಸುಪ್ರೀಂ ಕೋರ್ಟ್ ಸೂಚನೆಯಂತೆ ಹಣ ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ಒಂದು ವಾರದೊಳಗಾಗಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದರು.

ರಾಜ್ಯದಲ್ಲಿ ಪ್ರಸ್ತುತ 240 ತಾಲೂಕುಗಳ ಪೈಕಿ 223 ತಾಲೂಕುಗಳು ಭೀಕರ ಬರ ಎದುರಿಸುತ್ತಿವೆ. ರೈತರಿಗೆ ಮುಂಗಾರು ಬೆಳೆ ಸಂಪೂರ್ಣ ಕೈಕೊಟ್ಟಿದೆ. ಇನ್ನೂ ಹಿಂಗಾರು ಬೆಳೆಯ ಬಗ್ಗೆಯೂ ನಿರೀಕ್ಷೆ ಇಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದ ರೈತರ ಬೆನ್ನಿಗೆ ನಿಲ್ಲಬೇಕಾದ ಕೇಂದ್ರ ಸರ್ಕಾರ ನಿಯಮದಂತೆ ನೀಡಬೇಕಾದ ಹಣದ ಶೇ.20 ರಷ್ಟನ್ನು ಮಾತ್ರ ಬಿಡುಗಡೆ ಮಾಡಿದೆ. ತನ್ಮೂಲಕ ರಾಜ್ಯದ ರೈತರ ವಿರುದ್ಧದ ತನ್ನ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ ಎಂದು ಅಸಮಾಧಾನ ಹೊರಹಾಕಿದರು.

ಹೋರಾಟ ಮುಂದುವರೆಯಲಿದೆ: ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ ನಿಯಮದ ಅನ್ವಯವೇ ನಾವು ಮನವಿ ಸಿದ್ದಪಡಿಸಿ ಸಲ್ಲಿಸಿದ್ದೆವು. ಆದರೆ ಕೇಂದ್ರವು ಕರ್ನಾಟಕದ ಹಕ್ಕಿಗೆ ಕಿಂಚಿತ್ತೂ ಬೆಲೆ ನೀಡಿಲ್ಲ. ಹೀಗಾಗಿ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

literature

HL

education

HL

crime

HL

politics

HL

education

HL

politics

HL

crime

HL

literature

HL

politics

HL

crime

HL

crime

HL

crime

HL

crime

HL

crime

HL

crime

HL

politics

HL

literature

HL

literature

HL

literature

HL

education

HL

education

HL

crime

HL

politics

HL

crime

HL

health

HL

agriculture

HL

politics

HL

literature

HL

literature

HL

literature