5 ರೂ. ಕುರ್ಕುರೆಗಾಗಿ ಗಂಡನಿಗೆ ಡೈವೋರ್ಸ್ ನೀಡಲು ಮುಂದಾದ ಪತ್ನಿ..!
5 ರೂ. ಕುರ್ಕುರೆಗಾಗಿ ಗಂಡನಿಗೆ ಡೈವೋರ್ಸ್ ನೀಡಲು ಮುಂದಾದ ಪತ್ನಿ..!

ಆಗ್ರಾ, (ಮೇ.14): 5 ರೂಪಾಯಿ ಕುರ್ಕುರೆಗಾಗಿ ಮಡದಿಯೋರ್ವಳು ಗಂಡನಿಗೆ ಡಿವೋರ್ಸ್ ಕೊಡಲು ಮುಂದಾಗಿರುವ ಆಶ್ಚರ್ಯಕರ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಆಗ್ರಾದಲ್ಲಿನ ವಿಚಿತ್ರ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಲ್ಲಿದೆ.

ಮಹಿಳೆ ಕಳೆದ ಒಂದೂವರೆ ತಿಂಗಳಿನಿಂದ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದು, ಇತ್ತೀಚೆಗಷ್ಟೇ ಆಕೆ ತನ್ನ ಗಂಡನ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಳು. ಮಹಿಳೆ ನೀಡಿದ ದೂರನ್ನು ಫ್ಯಾಮಿಲಿ ಕೌನ್ಸೆಲಿಂಗ್‌ ಸೆಲ್‌ಗೆ ವರ್ಗಾಯಿಸಲಾಗಿದ್ದು, ಪತಿ-ಪತ್ನಿಯನ್ನು ಕೌನ್ಸೆಲಿಂಗ್‌ಗಾಗಿ ಸೆಲ್‌ಗೆ ಕರೆಸಲಾಗಿತ್ತು. 

ಈ ವೇಳೆ ಇವರಿಬ್ಬರ ನಡುವಿನ ಜಗಳಕ್ಕೆ 5. ರೂ. ಕುರ್ಕುರೆ ಕಾರಣ ಎಂದು ತಿಳಿದುಬಂದಿದೆ.

ಪತಿ-ಪತ್ನಿ ಇಬ್ಬರಿಗೂ ಕೌನ್ಸೆಲಿಂಗ್ ಮಾಡಿದ ಡಾ.ಸತೀಶ್ ಖಿರವಾರ ಅವರು ಹೇಳುವಂತೆ 'ಕಳೆದ ವರ್ಷ (2023 ರಲ್ಲಿ) ವಿವಾಹವಾಗಿದ್ದ ಈ ಜೋಡಿ ಕೇವಲ ಒಂದು ವರ್ಷದಲ್ಲೇ ವಿಚ್ಛೇದನ ನೀಡಲು ಮುಂದಾಗಿದ್ದಾರೆ. 

ಪತಿ ತನಗೆ 5 ರೂ. ಬೆಲೆಯ ಕುರ್ಕುರೆ ತರಲಿಲ್ಲ ಎಂಬ ಕಾರಣಕ್ಕೆ ಜಗಳವಾಡಿದ್ದಾಳೆ. ಕುರ್ಕುರೆ ಸಿಗದಿದ್ದಾಗ ಆಕೆಯ ತಾಯಿಯ ಮನೆಗೆ ಹೋಗಿದ್ದಾಳೆ ಎಂದು ಪತಿ ಹೇಳಿದ್ದಾನೆ. 

ಪ್ರಕರಣದಲ್ಲಿ ಮುಂದಿನ ದಿನಾಂಕವನ್ನು ನೀಡಲಾಗಿದ್ದು, ಮುಂದಿನ ದಿನಾಂಕದಂದು ಇಬ್ಬರ ನಡುವೆ ರಾಜಿಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime

HL

sports