ಒಂಟೆ ಹುಡುಕಿಕೊಂಡು ಹೋಗಿ ಕಾಣೆಯಾಗಿದ್ದ 3 ಮಕ್ಕಳು ಶವವಾಗಿ ಪತ್ತೆ!
ಒಂಟೆ ಹುಡುಕಿಕೊಂಡು ಹೋಗಿ ಕಾಣೆಯಾಗಿದ್ದ 3 ಮಕ್ಕಳು ಶವವಾಗಿ ಪತ್ತೆ!

ವಿಜಯಪುರ, ( ಮೇ.14); ಮನೆ ಮುಂದೆ ಬಂದ ಒಂಟೆ ಸವಾರಿ ನಂತರ ಒಂಟೆ ಹುಡುಕಿಕೊಂಡು ಹಿಂದೆ ಹೋದ ಮೂವರು ಮಕ್ಕಳು ಕಾಣೆಯಾಗಿ ಮರುದಿನ ನಗರದ ಇಂಡಿ ರಸ್ತೆಯಲ್ಲಿನ ಯುಜಿಡಿ ನೀರು ಸಂಸ್ಕರಣಾ ಘಟಕದಲ್ಲಿ ಶವವಾಗಿ ಪತ್ತೆಯಾದ ಹೃದಯವಿದ್ರಾವಕ ಘಟನೆ ಸೋಮವಾರ ಜರುಗಿದೆ.

ನಗರದ ಗಚ್ಚಿನಕಟ್ಟಿ ಕಾಲೋನಿಯ ಮಿಹಿರ್ ಶ್ರೀಕಾಂತ್ ಜನಗೌಳಿ (7 ವರ್ಷ), ಗದಗ ಮೂಲದ ವಿಜಯ್ ಅನಿಲ್ ದಹಿಂದೆ (7 ವರ್ಷ) ಹಾಗೂ ಅನುಷ್ಕಾ ಅನಿಲ್ ದಹಿಂದೆ (8 ವರ್ಷ) ಶವವಾಗಿ ಪತ್ತೆಯಾದ ಮಕ್ಕಳು ಎಂದು ಗುರುತಿಸಲಾಗಿದೆ. 

ಗದಗ ಮೂಲದ ಅಜಯ್, ಅನುಷ್ಕಾ ಬೇಸಿಗೆ ರಜೆ ನಿಮಿತ್ತ ವಿಜಯ ಪುರದ ಅಜ್ಜಿ ಮನೆಗೆ ಬಂದಿದ್ದರು. ಈ ಮೂವರು ಮಕ್ಕಳು ಭಾನು ವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗಚ್ಚಿನಕಟ್ಟಿ ಕಾಲೋನಿಯ ಚಾಬಕ ಸಾಬ್ ದರ್ಗಾದ ಬಳಿ ಒಂಟೆ ಸವಾರಿ ಮಾಡಿದ ನಂತರ ಕಾಣೆಯಾಗಿದ್ದರು.

ಇಲ್ಲೆ ಆಟವಾಡುತ್ತಿರಬೇಕು ಎಂದು ಸುಮ್ಮ ನಾಗಿದ್ದ ಮನೆಯವರು ಮಧ್ಯಾಹ್ನ 3 ಗಂಟೆಯಾದರೂ ಮಕ್ಕಳು ಮನೆಗೆ ಬರದಿದ್ದಾಗ ಹುಡುಕಾಟ ನಡೆಸಿ, ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮಕ್ಕಳ ಕುಟುಂಬಸ್ಥರು, ಸಂಬಂಧಿಕರು ಹುಡುಕಾಡುವ ವೇಳೆ ಮಕ್ಕಳು ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದು, సిసి ಸೆರೆಯಾಗಿದೆ. ಕ್ಯಾಮೆರಾದಲ್ಲಿ ಆದರೆ ದುರಾದೃಷ್ಟವಶಾತ್ ಸೋಮವಾರ ಮಧ್ಯಾಹ್ನ ಇಂಡಿ ರಸ್ತೆಯ ಯುಜಿಡಿ ನೀರು ಸಂಸ್ಕರಣಾ ಘಟಕದ ಬೃಹತ್ ಚರಂಡಿಯಲ್ಲಿ ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮಟ್ಟಿದೆ.

ಪ್ರತಿಭಟನೆ: ಯುಜಿಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಎದುರು ಮೃತ ಮಕ್ಕಳ ಕುಟುಂಬಸ್ಥರು, ಸಂಬಂಧಿಕರು ಪ್ರತಿಭಟನೆ ಮಾಡಿದ್ದರು. ಸಂಸ್ಕರಣಾ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ತ್ಯಾಜ್ಯ ಘಟಕಕ್ಕೆ ತಡೆಗೋಡೆ ಅಥವಾ ಬೇಲಿ ಹಾಕಿಲ್ಲ. ಹೀಗಾಗಿ ಮೂವರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿವೆ. ಮಕ್ಕಳ ಸಾವಿಗೆ ಮಹಾನಗರ ಮಾಧ್ಯ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಯೇ ಇದಕ್ಕೆ ಕಾರಣವೆಂದು ಮಕ್ಕಳ ಕುಟುಂಬಸ್ಥರು ಆರೋಪಿಸಿದ್ದರು. ಅಲ್ಲದೇ ದೂರು ನೀಡಿದರೂ ಪೊಲೀಸರು ಸಹ ಸರಿಯಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರು ಘಟನಾಸ್ಥಳಕ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಮಾತುಕತೆ ನಡೆಸಿ ಪ್ರತಿಭಟನೆ ಕೈ ಬಿಡಲು ಮನವಿ ಮಾಡಿದರು. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಕುಟುಂಬಸ್ಥರು ಹಾಗೂ ಸಂಬಂಧಿಗಳು ಪ್ರತಿಭಟನೆ ಕೈಬಿಟ್ಟರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

economy

HL

economy

HL

economy

HL

crime

HL

others

HL

others

HL

others

HL

others

HL

others

HL

politics

HL

others

HL

sports

HL

others

HL

others

HL

education

HL

politics

HL

economy

HL

politics

HL

sports

HL

others

HL

economy

HL

others

HL

others

HL

crime

HL

education

HL

others

HL

politics

HL

crime

HL

education