ಭೀಕರ ಅಪಘಾತ.. 45 ಮಂದಿ ದುರ್ಮರಣ..!
ಭೀಕರ ಅಪಘಾತ.. 45 ಮಂದಿ ದುರ್ಮರಣ..!

ಗಬಪಿನ್, (ಮಾ.29): ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇತುವೆಯಿಂದ ಸುಮಾರು 165 ಅಡಿ ಆಳದ ಕಂದಕಕ್ಕೆ ಉರುಳಿ 45 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಗುರುವಾರ ನಡೆದಿದೆ.

ದುರ್ಘಟನೆಯಲ್ಲಿ 8 ವರ್ಷದ ಬಾಲಕಿ ಮಾತ್ರ ಬದುಕುಳಿದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬಸ್‌ನಲ್ಲಿದ್ದ ಯಾತ್ರಿಕರು ಬೋಟ್ನಾನಾದ ರಾಜಧಾನಿ ಗಬಪಿನ್‌ನಿಂದ ಮೊರಿಯಾ ಪಟ್ಟಣದಲ್ಲಿ ಈಸ್ಟರ್‌ ಸೇವೆಗೆ ಪ್ರಯಾಣಿಸುತ್ತಿದ್ದರು. ಆದರೆ, ಈಶಾನ್ಯ ಲಿಂಪೊಪೊ ಪ್ರಾಂತ್ಯದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ. ಕಂದಕಕ್ಕೆ ಉರುಳಿದ ಬಸ್‌ಗೆ ಬೆಂಕಿ ಹತ್ತಿಕೊಂಡಿದೆ.

ಗುರುವಾರ ಸಂಜೆಯವರೆಗೂ ರಕ್ಷಣಾ ಕಾರ್ಯಾಚರಣೆಗಳು ನಡೆದಿದ್ದು, ಮೃತರಲ್ಲಿ ಕೆಲವರ ಅವಶೇಷಗಳನ್ನ ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಸಾರಿಗೆ ಸಚಿವ ಸಿಂದಿಸಿವೆ ಚಿಕುಂಗಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದರು. ಮೃತದೇಹಗಳನ್ನು ಅವರ ಸಂಬಂಧಿಕರಿಗೆ ತಲುಪಿಸಲು ದಕ್ಷಿಣ ಆಫ್ರಿಕಾ ಸರ್ಕಾರ ಸಹಾಯ ಮಾಡುತ್ತದೆ ಮತ್ತು ಅಪಘಾತದ ಕಾರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತದೆ ಎಂದು ಅವರು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

literature

HL

politics

HL

sports

HL

politics

HL

health

HL

politics

HL

politics

HL

others

HL

politics

HL

politics

HL

politics

HL

crime

HL

politics

HL

crime

HL

politics

HL

literature

HL

crime

HL

politics

HL

politics

HL

economy

HL

crime

HL

crime

HL

others

HL

politics

HL

health

HL

crime

HL

politics

HL

economy

HL

others

HL

literature