ಆರ್‌ಸಿಬಿ ಅಬ್ಬರ.. ಗುಜರಾತ್ ಟೈಟನ್ಸ್ ತತ್ತರ; ಸಿಡಿಲಬ್ಬರದ ಶತಕ ಸಿಡಿಸಿದ ವಿಲ್​ ಜಾಕ್ಸ್​..!
ಆರ್‌ಸಿಬಿ ಅಬ್ಬರ.. ಗುಜರಾತ್ ಟೈಟನ್ಸ್ ತತ್ತರ; ಸಿಡಿಲಬ್ಬರದ ಶತಕ ಸಿಡಿಸಿದ ವಿಲ್​ ಜಾಕ್ಸ್​..!

ಗುಜರಾತ್, (ಏ.28): ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಗುಜರಾತ್ ಟೈಟನ್ಸ್ ನೀಡಿದ್ದ 201 ರನ್‌ಗಳ ಮೊತ್ತ ಬೆನ್ನೆತ್ತಿದ ಆರ್‌ಸಿಬಿ ಬಿರುಸಿನ ಆರಂಭ ಪಡೆಯಿತು. 3.5 ಓವರ್‌ನಲ್ಲಿ ತಂಡ 40 ರನ್ ಗಳಿಸಿದ್ದಾಗ ಬಿರುಸಿನ ಆಟಕ್ಕೆ ಪ್ರಯತ್ನಿಸಿ ನಾಯಕ ಫಾಫ್ ಡುಪ್ಲೆಸಿ (24 ರನ್, 12 ಎಸೆತ, 1 ಬೌಂಡರಿ, 3 ಸಿಕ್ಸರ್) ಸಾಯಿ ಕಿಶೋರ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಮರಳಿದರು.

ತದನಂತರ ಜೊತೆಗೂಡಿದ ವಿರಾಟ್ ಕೊಹ್ಲಿ (ಅಜೇಯ 70 ರನ್, 44 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ವಿಲ್ ಜ್ಯಾಕ್ಸ್ (ಅಜೇಯ 100 ರನ್, 41 ಎಸೆತ, 5 ಬೌಂಡರಿ, 10 ಸಿಕ್ಸರ್ ಅಮೋಘ ಜೊತೆಯಾಟದ ನೆರವಿನಿಂದ 4 ಓವರ್ ಬಾಕಿ ಇರುವಾಗಲೇ ಆರ್‌ಸಿಬಿ ಗೆಲುವಿನ ನಗೆ ಬೀರಿತು.

ಅಚ್ಚರಿಯೆಂದರೆ ಮೊದಲ 24 ಎಸೆತಗಳಲ್ಲಿ 31 ರನ್ ಕಲೆ ಹಾಕಿದ್ದ ವಿಲ್ ಜ್ಯಾಕ್ಸ್ ಅಂತಿಮ ಹಂತದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಂತಿಮವಾಗಿ 41 ಎಸೆತಗಳಲ್ಲಿ ಐಪಿಎಲ್‌ನ ಚೊಚ್ಚಲ ಶತಕ ಸಿಡಿಸಿದರು.

ಡುಪ್ಲೆಸಿಸ್​ ಔಟಾದ್ರೂ ಕ್ರೀಸ್​ನಲ್ಲೇ ನಿಂತು ತಾಳ್ಮೆಯಿಂದ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಕೇವಲ 44 ಬಾಲ್​ನಲ್ಲಿ ಕೊಹ್ಲಿ 3 ಸಿಕ್ಸರ್​​, 6 ಫೋರ್​ ಸಮೇತ 70 ರನ್​ ಸಿಡಿಸಿದ್ರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

crime

HL

literature

HL

politics

HL

crime

HL

crime

HL

crime

HL

crime

HL

crime

HL

crime

HL

politics

HL

literature

HL

literature

HL

literature

HL

education

HL

education

HL

crime

HL

politics

HL

crime

HL

health

HL

agriculture

HL

politics

HL

literature

HL

literature

HL

literature

HL

literature

HL

politics

HL

politics

HL

crime

HL

politics