ಚುನಾವಣೆ ದಿನವೇ ಗೊಲ್ಲಹಳ್ಳಿ ತಾಂಡ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ.. ಅಧಿಕಾರಿಗಳು ದೌಡು
ಚುನಾವಣೆ ದಿನವೇ ಗೊಲ್ಲಹಳ್ಳಿ ತಾಂಡ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ.. ಅಧಿಕಾರಿಗಳು ದೌಡು

ದೊಡ್ಡಬಳ್ಳಾಪುರ, (ಏ.26): ಲೋಕಸಭೆ ಚುನಾವಣೆ‌ ಮತದಾನ ದಿನವೇ ತಾಲೂಕಿನ ತೂಬಗೆರೆ ಹೋಬಳಿಯ ಗೊಲ್ಲಹಳ್ಳಿ ತಾಂಡ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿ, ಪ್ರತಿಭಟನೆಗೆ ಕುಳಿತಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಸುಬ್ರಹ್ಮಣ್ಯ ಗ್ರಾಮದಲ್ಲಿ ಸ್ಮಶಾನಕ್ಕೆ ಜಮೀನು ಮಂಜೂರು, ಸಮುದಾಯ ಭವನ,  ಸಾಗುವಳಿ ಚೀಟಿ ವಿತರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತದಾನ ಬಹಿಷ್ಕರಿಸಿದ್ದೇವೆ‌

ಗ್ರಾಮದಲ್ಲಿ 380 ಮತಗಳಿದ್ದು ಇಡೀ ಗ್ರಾಮಸ್ಥರು ಒಕ್ಕೊರಲಿನಿಂದ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮದ ಸಮಸ್ಯೆಗಳು ಬಗೆಹರಿಸುವವರೆಗೂ ಯಾವುದೇ ಚುನಾವಣೆಗಳಲ್ಲಿ ಮತದಾನ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಬ್ಯಾನ‌ರ್ ಹಾಕಿದ್ದು, ಮತಗಟ್ಟೆಗೆ ತೆರಳದೆ ಬೀದಿಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ಸ್ಥಳಕ್ಕೆ ತಹಶಿಲ್ದಾರ್ ದೌಡಾಯಿಸಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವವರೆಗೂ ಮತದಾನ ಮಾಡುವುದಿಲ್ಲವೆಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

literature

HL

politics

HL

crime

HL

crime

HL

agriculture

HL

crime

HL

crime

HL

politics

HL

health

HL

politics

HL

others

HL

crime

HL

crime

HL

crime

HL

health

HL

agriculture

HL

literature

HL

health

HL

economy

HL

politics

HL

literature

HL

politics

HL

literature

HL

education

HL

crime

HL

crime

HL

crime

HL

politics

HL

politics

HL

politics