ಬರ ಪರಿಹಾರ; ಸುಪ್ರೀಂ ಕೋರ್ಟಲ್ಲಿಂದು ಕರ್ನಾಟಕದ ಅರ್ಜಿ ವಿಚಾರಣೆ
ಬರ ಪರಿಹಾರ; ಸುಪ್ರೀಂ ಕೋರ್ಟಲ್ಲಿಂದು ಕರ್ನಾಟಕದ ಅರ್ಜಿ ವಿಚಾರಣೆ

ನವದೆಹಲಿ, (ಮೇ‌.06): ಬರ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಮತ್ತೆ ವಿಚಾರಣೆಗೆ ಬರಲಿದೆ.

ಕೇಂದ್ರ ಸರ್ಕಾರವು ಕಳೆದ ವಾರವೇ 3,454 ಕೋಟಿರು. ಅನ್ನು ಬರಪರಿಹಾರವಾಗಿ ಬಿಡುಗಡೆ ಮಾಡಿತ್ತು. ಆದರೆ ಇದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಆಕ್ಷೇಪ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರವು ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ತಾರತಮ್ಯ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. 

ಆಗ ಕೇಂದ್ರ ಸರ್ಕಾರವು ಬರ ಪರಿಶೀಲನಾ ಸಮಿತಿಯು ನೀಡಿದ ಶಿಫಾರಸ್ಸಿನಂತೆ ಈ ಹಣ ಬಿಡುಗಡೆ 2 ಮಾಡಲಾಗಿದೆ ಎಂದು ಕೋರ್ಟ್‌ಗೆ ಹೇಳಿತ್ತು. ಆಗ ನ್ಯಾಯಾಲಯವು ಸಮಿತಿಯ ಶಿಫಾರಸ್ಸನ್ನು ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತ್ತು.

ಇದೀಗ ಅರ್ಜಿಯ ವಿಚಾರಣೆ ಮತ್ತೆ ನಡೆಯಲಿದ್ದು, ಈ ವೇಳೆ ಕೇಂದ್ರ ಸರ್ಕಾರವು ಬರ ಪರಿಶೀಲನಾ ಸಮಿತಿಯ ಶಿಫಾರಸು ಸಲ್ಲಿಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ಈ ಸಂಬಂಧ ಕೇಂದ್ರದಿಂದ 18,171 ಕೋಟಿ ರೂ. ಬರಪರಿಹಾರಕ್ಕಾಗಿ ಕರ್ನಾಟಕ ಸರ್ಕಾರವು ಮನವಿ ಸಲ್ಲಿಸಿತ್ತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

sports

HL

crime

HL

crime

HL

politics

HL

sports

HL

others

HL

politics

HL

sports

HL

others

HL

literature

HL

sports

HL

literature

HL

sports

HL

agriculture

HL

crime

HL

politics

HL

politics

HL

politics

HL

crime

HL

politics

HL

health

HL

education

HL

education

HL

crime

HL

politics

HL

crime

HL

crime

HL

others

HL

politics

HL

crime