ಪ್ರಜ್ವಲ್ ವಿರುದ್ಧ ಆಕ್ರೋಶ; ವಿಡಿಯೋ ಸಿಕ್ರೆ ಲೀಕ್ ಯಾರ್ ಬೇಕಾದ್ರೂ ಮಾಡ್ತಾರೆ.. ಮೊದಲು ನಾವ್ ಹೇಗ್ ವರ್ತಿಸುತ್ತೇವೆ ಎಂಬುದು ಪ್ರಶ್ನೆ - ಜೋಶಿ
ಪ್ರಜ್ವಲ್ ವಿರುದ್ಧ ಆಕ್ರೋಶ; ವಿಡಿಯೋ ಸಿಕ್ರೆ ಲೀಕ್ ಯಾರ್ ಬೇಕಾದ್ರೂ ಮಾಡ್ತಾರೆ.. ಮೊದಲು ನಾವ್ ಹೇಗ್ ವರ್ತಿಸುತ್ತೇವೆ ಎಂಬುದು ಪ್ರಶ್ನೆ - ಜೋಶಿ

ಹುಬ್ಬಳ್ಳಿ, (ಮೇ.05); ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ವಿಚಾರದಲ್ಲಿ ವಿಡಿಯೋ ಬಿಡುಗಡೆ ಪ್ರಶ್ನೆಯಲ್ಲ, ಸಾರ್ವಜನಿಕ ಬದುಕಿನಲ್ಲಿ ನಾವ್ ಹೇಗ್ ವರ್ತಿಸುತ್ತೇವೆ ಎಂಬುದು ಪ್ರಶ್ನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಡಿಯೋ ರಿಲೀಸ್ ಯಾರು ಬೇಕಾದರೂ ಮಾಡಬಹುದು ವಿಡಿಯೋ ಯಾರಿಗೆ ಸಿಕ್ಕಿದೆಯೋ ಅವರು ಬಿಡುಗಡೆ ಮಾಡಿರಬಹುದು. ಆದರೆ ಮಹಿಳೆಯರ ಜೊತೆಗೆ ಈ ರೀತಿಯಾಗಿ ನಡೆದುಕೊಂಡಿದ್ದು ಗಂಭೀರ ಅಪರಾಧ.

ಮಾಧ್ಯಮಗಳಿಗೆ ವಿಡಿಯೋ ರಿಲೀಸ್ ಆಗಿರೋದ್ ದುಃಖ ಇದೆಯಾ ಅಥವಾ ಈ ಘಟನೆ ಆಗಬಾರದಿತ್ತು ಎಂದು ದುಃಖ ಇದೆಯಾ..? ಎಂದು ಪ್ರಶ್ನಿಸಿದ ಜೋಶಿ, ಪ್ರಜ್ವಲ್ ರೇವಣ್ಣ ವಿಡಿಯೋ ತಮ್ಮದಲ್ಲ ಎಂದು ಹೇಳಲಿ. ಆಗ ನಾವು ಅದನ್ನು ಎಫ್‌ಎಸ್‌ಎಲ್ ಕೊಡಲು ಒತ್ತಾಯಿಸುತ್ತೇವೆ.

ವಿಡಿಯೋ ಬಿಡುಗಡೆ ನನ್ನ ಪ್ರಕಾರ ಚರ್ಚೆಯ ವಿಷಯವೇ ಅಲ್ಲ. ವಿಡಿಯೋ ಯಾರಿಗೆ ಸಿಕ್ಕಿದೆಯೋ ಅವರು ಬಿಡುಗಡೆ ಮಾಡಿರಬಹುದು. ಆದರೆ ಮಹಿಳೆಯರ ಜೊತೆಗೆ ಈ ರೀತಿಯಾಗಿ ನಡೆದುಕೊಂಡಿದ್ದು ಗಂಭೀರ ಅಪರಾಧ ಎಂದು ಹೇಳಿದರು.

ಪ್ರಜ್ವಲ್ ಬಂಧನ ಆಗಲೇಬೇಕು. ಅವರ ವಿರುದ್ಧ ಹಲವಾರು ಮಹಿಳೆಯರು ಮಹಿಳಾ ಆಯೋಗಕ್ಕೂ ದೂರು ಕೊಟ್ಟಿದ್ದಾರೆ. ಹೀಗಾಗಿ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಎಂದರು.

ಹೆಚ್.ಡಿ.ರೇವಣ್ಣ ಬಂಧನದ ಕುರಿತು ಮಾತನಾಡಿ ಕಾನೂನು ಕ್ರಮ ಕೈಗೊಳ್ಳುತ್ತಿದೆ. ದುರ್ದೈವ ರೇವಣ್ಣಗೆ ವಯಸ್ಸಾಗಿದೆ. ಅವರ ಮೇಲೆ ಸಾಕಷ್ಟು ಆರೋಪ ಬಂದಿದೆ. ಈಗಾಗಿ ತನಿಖೆ ಮಾಡೋದು ಒಳ್ಳೆಯದು ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

sports

HL

others

HL

literature

HL

sports

HL

literature

HL

sports

HL

agriculture

HL

crime

HL

politics

HL

politics

HL

politics

HL

crime

HL

politics

HL

health

HL

education

HL

education

HL

crime

HL

politics

HL

crime

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics