ಅಯೋಧ್ಯೆಯಲ್ಲಿ ಮೋದಿ ರೋಡ್‌ ಶೋ: ಶ್ರೀರಾಮನಿಗೆ ಆರತಿ
ಅಯೋಧ್ಯೆಯಲ್ಲಿ ಮೋದಿ ರೋಡ್‌ ಶೋ: ಶ್ರೀರಾಮನಿಗೆ ಆರತಿ

ಅಯೋಧ್ಯೆ, (ಮೇ.06): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉತ್ತರ ಪ್ರದೇಶದ ಪವಿತ್ರ ನಗರ ಅಯೋಧ್ಯೆಗೆ ಆಗಮಿಸಿ ರಾಮಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

'ಈ ವೇಳೆ ದೇಶದ 140 ಕೋಟಿ ಜನರ ಒಳಿತಿಗೆ ಪ್ರಾರ್ಥಿಸಿದ್ದೇನೆ' ಎಂದು ಅವರು ಬಳಿಕ ಟ್ವಿಟ್ ಮಾಡಿದ್ದಾರೆ.

ಜಾರ್ಖಂಡ್, ಬಿಹಾರ ಹಾಗೂ ಉತ್ತರ ಪ್ರದೇಶದ ಕೆಲವು ಕಡೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಅವರು ಅಲ್ಲಿಂದ ಸಂಜೆ ಅಯೋಧ್ಯೆಗೆ ಆಗಮಿಸಿ ರಾಮನಿಗೆ ಆರತಿ ನೆರವೇರಿಸಿದರು.

ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಟ್ರಸ್ಟ್ ಸದಸ್ಯರು, ಪುರೋಹಿತರು, ಭಾರಿ ಸಂಖ್ಯೆಯ ಭಕ್ತರು ಇದ್ದರು. ಜ.22ರಂದು 'ಪ್ರಾಣ-ಪ್ರತಿಷ್ಠಾಪನಾ' ಸಮಾರಂಭ ನಡೆದ ನಂತರ ರಾಮಮಂದಿರಕ್ಕೆ ಪ್ರಧಾನಿ ಮೋದಿಯವರ ಮೊದಲ ಭೇಟಿ ಇದಾಗಿದೆ.

ರೋಡ್‌ ಶೋ: ರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಮೋದಿ ನಗರದಲ್ಲಿ 2 ಕಿಲೋಮೀಟರ್ ಉದ್ದದ ರೋಡ್ ಶೋ ನಡೆಸಿದರು, ಇದು ಸುಗ್ರೀವ ಕೋಟೆಯಿಂದ ಪ್ರಾರಂಭವಾಯಿತು ಮತ್ತು ಲತಾ ಚೌಕ್ ವರೆಗೆ ನಡೆಯಿತು. 

ಶೋನಲ್ಲಿ ಬಾಬ್ರಿ ಮಸೀದಿ ಪರ ದಾವೇದಾರ ಇಟ್ಬಾಲ್ ಅಸ್ಸಾರಿ ಕೂಡ ಪಾಲ್ಗೊಂಡಿದ್ದು ವಿಶೇಷ. ಮೇ 20ಕ್ಕೆ ಅಯೋಧ್ಯೆಯಲ್ಲಿ 5ನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.

ಕಾಂಗ್ರೆಸ್‌ಗೆ ಚಾಟಿ: ಅಯೋಧ್ಯೆ ಭೇಟಿ ಬಳಿಕ ಟ್ವಿಟ್ ಮಾಡಿರುವ ಮೋದಿ, 'ಹಿಂದಿನ ಕಾಂಗ್ರೆಸ್ ಸರ್ಕಾರ ಮನಸ್ಸು ಮಾಡಿದ್ದರೆ ಇಷ್ಟೊತ್ತಿಗೆ ಅಯೋಧ್ಯೆ ಜಾಗತಿಕ ಭಕ್ತಿ ಕೇಂದ್ರ ಆಗುತ್ತಿತ್ತು. ಆದರೆ ಮತಬ್ಯಾಂಕ್ ರಾಜಕಾರಣಕ್ಕಾಗಿ ಅದು ಕ್ರಮ ಕೈಗೊಳ್ಳಲಿಲ್ಲ. ಈಗ ನಾವು ಅಯೋಧ್ಯೆ ಸುಧಾರಿಸಿದ್ದೇವೆ' ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

sports

HL

others

HL

literature

HL

sports

HL

literature

HL

sports

HL

agriculture

HL

crime

HL

politics

HL

politics

HL

politics

HL

crime

HL

politics

HL

health

HL

education

HL

education

HL

crime

HL

politics

HL

crime

HL

crime

HL

others

HL

politics

HL

crime

HL

others

HL

others

HL

others

HL

politics

HL

crime

HL

politics

HL

politics