ಅಕ್ರಮ ಮರಳು ಸಾಗಣೆ; ತಡೆಯಲು ಹೋದ ASI ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲೆ.. JCB ಬಳಸಿ ಆರೋಪಿ ಮನೆ ನೆಲಸಮ| ವಿಡಿಯೋ ನೋಡಿ
ಅಕ್ರಮ ಮರಳು ಸಾಗಣೆ; ತಡೆಯಲು ಹೋದ ASI ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲೆ.. JCB ಬಳಸಿ ಆರೋಪಿ ಮನೆ ನೆಲಸಮ| ವಿಡಿಯೋ ನೋಡಿ

ಶಾಹದೋಲ್, (ಮೇ.06); ಅಕ್ರಮ ಮರಳು ಸಾಗಾಟ ತಡೆಯಲು ಹೋದ ಪೊಲೀಸ್​ ಅಧಿಕಾರಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಬಾಡೋಲಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಬಿಯೋಹರಿ ಪೊಲೀಸ್ ಠಾಣೆಯಲ್ಲಿ ನಿಯೋಜಿತವಾಗಿದ್ದ ಎಎಸ್‌ಐ ಮಹೇಂದ್ರ ಬಾಗ್ರಿ ಅವರು ಅಕ್ರಮ ಮರಳು ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದು ಇಬ್ಬರು ಕಾನ್​ಸ್ಟೇಬಲ್​ಗಳೊಂದಿಗೆ ಪರಿಶೀಲನೆಗಾಗಿ ರಾತ್ರಿ ಬಾಡೋಲಿ ಗ್ರಾಮಕ್ಕೆ ತೆರಳಿದ್ದರು ಎನ್ನಲಾಗಿದೆ.

ಈ ವೇಳೆ ಟ್ರ್ಯಾಕ್ಟರ್​ವೊಂದರಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಲಾಗುತಿತ್ತು. ಇದನ್ನು ಕಂಡ ಮಹೇಂದ್ರ ಟ್ರ್ಯಾಕ್ಟರ್​ ತಡೆಯಲು ಮುಂದಾಗಿದ್ದಾರೆ. ಆದರೆ ಚಾಲಕ ಟ್ರ್ಯಾಕ್ಟರ್​ ನಿಲ್ಲಿಸದೇ ಅವರ ಮೇಲೆಯೇ ಹತ್ತಿಸಿದ್ದಾನೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಎಎಸ್​ಐ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಧಿಕಾರಿಯ ಜತೆಗಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಘಟನೆ ಬಳಿಕ ಟ್ರ್ಯಾಕ್ಟರ್​ ಚಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸ್​ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಬಗ್ಗೆ ಶಾಹದೋಲ್ ವಲಯ ಎಡಿಜಿಪಿ ಡಿಸಿ ಸಾಗರ್ ಮಾಹಿತಿ ನೀಡಿದ್ದು, ಈ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದೆ. ಟ್ರ್ಯಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. 

ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ಟ್ರ್ಯಾಕ್ಟರ್ ಮಾಲಕ ತಲೆಮರೆಸಿಕೊಂಡಿದ್ದು, ಆತನ ಸುಳಿವು ನೀಡಿದವರಿಗೆ 30 ಸಾವಿರ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದು ಹೇಳಿದರು.

ಬಿಯೋಹರಿ ಪೊಲೀಸ್ ಠಾಣೆ ವ್ಯಾಪ್ತಿಯ ಜಮೋದಿ ಗ್ರಾಮದಲ್ಲಿ ಎಎಸ್‌ಐ ನನ್ನು ಟ್ರ್ಯಾಕ್ಟರ್‌ನಿಂದ ತುಳಿದು ಹತ್ಯೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸುರೇಂದ್ರ ಸಿಂಗ್ ಅವರ ಅಕ್ರಮ ಮನೆಯನ್ನು ಶಾಹದೋಲ್ ಜಿಲ್ಲಾಡಳಿತ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ಮನೆ ನೆಲಸಮಗೊಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

sports

HL

crime

HL

crime

HL

politics

HL

sports

HL

others

HL

politics

HL

sports

HL

others

HL

literature

HL

sports

HL

literature

HL

sports

HL

agriculture

HL

crime

HL

politics

HL

politics

HL

politics

HL

crime

HL

politics

HL

health

HL

education

HL

education

HL

crime

HL

politics

HL

crime

HL

crime

HL

others

HL

politics

HL

crime