ಹರಿತಲೇಖನಿ ದಿನಕ್ಕೊಂದು ಕಥೆ: ಅದೃಷ್ಟವಂತ
ಹರಿತಲೇಖನಿ ದಿನಕ್ಕೊಂದು ಕಥೆ: ಅದೃಷ್ಟವಂತ

ಮೀನುಗಾರರ ಕುಟುಂಬದಲ್ಲಿ ಸೀನನೆಂಬ ಯುವಕನಿದ್ದ. ದಿನವೂ ಕಡಲಿಗೆ ಹೋಗಿ ಮೀನು ಹಿಡಿದುಕೊಂಡು ಬಂದು ಪಟ್ಟಣದ ಸಂತೆಯಲ್ಲಿ ಮಾರಿ ಬಂದ ದುಡ್ಡಿನಲ್ಲಿ ಅವರ ಸಂಸಾರದ ಬಂಡಿ ಸಾಗಿತ್ತು.

ಸೀನ ಮೋಸ, ವಂಚನೆ, ದ್ರೋಹವನ್ನರಿಯದ ಮುಗ್ಧನಾಗಿದ್ದ. ದೀನ, ದಲಿತ, ಬಡವರಿಗೆ ಉಚಿತವಾಗಿ ಮೀನು ಕೊಟ್ಟು ಬರಿಗೈಯಲ್ಲೇ ಮನೆಗೆ ಬಂದಾಗ ಹೆತ್ತವರೂ ಆತನನ್ನು ಲೋಕಜ್ಞಾನವನ್ನರಿಯದ ಹುಂಬನೆಂದೂ ಜರಿಯುತ್ತಿದ್ದರು. ಎಂದಿನಂತೆ ಸೀನ ಮೀನಿಗಾಗಿ ಕಡಲಿನಲ್ಲಿ ಬಲೆ ಬೀಸಿದ. ಅನೇಕ ಮೀನಿನ ಜತೆ ಒಂದು ಅಪರೂಪದ ಬಂಗಾರದ ಬಣ್ಣದ ದೊಡ್ಡ ಮೀನು ಬಲೆಗೆ ಬಿದ್ದು ಒದ್ದಾಡುತ್ತಿತ್ತು. ಸೀನನಿಗೆ ತುಂಬಾ ಆಶ್ಚರ್ಯವಾಯಿತು.

ಆ ಮೀನು ಮಾತಾಡತೊಡಗಿತು, "ಹೇ, ಮಾನವ! ನಾನು ಸಾಮಾನ್ಯ ಮೀನಲ್ಲ! ದೇವಲೋಕದಿಂದ ಬಂದ ಅಪ್ಸರೆ. ನನ್ನ ಸಖಿಯರ ಸಂಗಡ ಈ ಧರೆಯ ಚೆಲುವನ್ನು ನೋಡುತ್ತಿದ್ದೆವು. ಆಗ, ಎಲ್ಲರಿಗೂ ಈ ಕಡಲಲ್ಲಿ ಮೀನಾಗಿ ಈಜಾಡುವಾಸೆಯಾಗಿ ನೀರಿಗೆ ಇಳಿದಾಗ ನಿನ್ನ ಬಲೆಗೆ ಬಿದ್ದಿರುವೆ. ದಯವಿಟ್ಟು ನನ್ನ ಬಿಟ್ಟುಬಿಡು' ವಿನಂತಿ ಮಾಡಿಕೊಂಡಿತು.

ಈ ಸಂಗತಿ ಕೇಳಿ ಸೀನನಿಗೆ ಕರುಣೆ ಬಂದು ಮೀನನ್ನು ಕಡಲಿಗೆ ಬಿಟ್ಟ ತಕ್ಷಣ ಅಲ್ಲಿ ಅಪ್ಸರೆ ಕಾಣಿಸಿಕೊಂಡು ವಜ್ರದೋಣಿಯೊಂದನ್ನು ಕಾಣಿಕೆಯಾಗಿ ಕೊಟ್ಟು ಮಾಯವಾದಳು. ಸೀನದ ಅದನ್ನು ಪಟ್ಟಣದ ವ್ಯಾಪಾರಿಗೆ ಮಾರಿದಾಗ ಅಪಾರ ದುಡ್ಡು ಬಂತು. ಆ ಹಣದಿಂದ ಗದ್ದೆ, ತೋಟಗಳನ್ನು ಕೊಂಡು ನೆಮ್ಮದಿಯಿಂದ ಬಾಳಗೊಡಗಿದೆ.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

crime

HL

crime

HL

others

HL

others

HL

others

HL

others

HL

others

HL

others

HL

others

HL

others

HL

others

HL

politics

HL

politics

HL

crime

HL

crime

HL

politics

HL

others

HL

politics

HL

others

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

art