ಪಕ್ಷೇತರರ ಪಾಲಾದ ಗೌರಿಬಿದನೂರು ನಗರಸಭೆ: ಮುಗಿಲು‌ ಮುಟ್ಟಿದ ಕೆಎಚ್‌ಪಿ ಕಾರ್ಯಕರ್ತರ ಸಂಭ್ರಮಾಚರಣೆ
ಪಕ್ಷೇತರರ ಪಾಲಾದ ಗೌರಿಬಿದನೂರು ನಗರಸಭೆ: ಮುಗಿಲು‌ ಮುಟ್ಟಿದ ಕೆಎಚ್‌ಪಿ ಕಾರ್ಯಕರ್ತರ ಸಂಭ್ರಮಾಚರಣೆ

ಗೌರಿಬಿದನೂರು, (ಸೆ.09); ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸೆ.9 ಸೋಮವಾರ ಉಪವಿಭಾಗಾಧಿಕಾರಿ ಅಶ್ವಿನ್ ರವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯ ಲಕ್ಷ್ಮಿನಾರಾಯಣಪ್ಪ ಮತ್ತು ಉಪಾಧ್ಯಕ್ಷರಾಗಿ ಫಜ್ಲುಲ್ಲಾ ಫೀರ್ (ಫರೀದ್) ಆಯ್ಕೆಯಾಗಿದ್ದಾರೆ.

ಗೌರಿಬಿದನೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯರ ಬಲವಿದ್ದು, ಅದರಲ್ಲಿ ಕಾಂಗ್ರೆಸ್ 15, ಜೆಡಿಎಸ್ 6, ಬಿಜೆಪಿ 3 ಉಳಿದಂತೆ 7 ಮಂದಿ ಪಕ್ಷೇತರ ಸದಸ್ಯರಿದ್ದರು. ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಸಕ್ರೀಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಪಕ್ಷೇತರ ಅಭ್ಯರ್ಥಿಗೆ ಹಾಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆನ್ನೆಲುಬಾಗಿ ನಿಂತಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಹಾಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರ ಬೆಂಬಲಿತವಾಗಿ 28 ನೇ ವಾರ್ಡಿನ ಪಕ್ಷೇತರ ಸದಸ್ಯರಾದ ಲಕ್ಷ್ಮಿನಾರಾಯಣಪ್ಪ ಹಾಗೂ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ರವರ ಬೆಂಬಲಿತವಾಗಿ 29 ನೇ ವಾರ್ಡಿನ ಸುಬ್ಬರಾಜು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷರ ಸ್ಥಾನಕ್ಕೆ ಹಾಲಿ ಶಾಸಕರ ಕಡೆಯಿಂದ 15 ನೇ‌ ವಾರ್ಡಿನ ಫಜ್ಲುಲ್ಲಾ ಫೀರ್ (ಫರೀದ್) ಮತ್ತು ಮಾಜಿ ಶಾಸಕ ಕಡೆಯಿಂದ 12 ನೇ ವಾರ್ಡಿನ ವಿ.ಅಮರನಾಥ್ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆ ವೇಳೆಗೆ 31 ಸದಸ್ಯರಲ್ಲಿ 29 ಮಂದಿ ಮಾತ್ರ ಹಾಜರಿದ್ದರು, ಉಳಿದಂತೆ ಬಿಜೆಪಿ ಬಬಲಿತ ಸದಸ್ಯೆ ಪುಣ್ಯವತಿಜಯಣ್ಣ ಮತ್ತು ಜೆಡಿಎಸ್ ಬೆಂಬಲಿತ ಸದಸ್ಯೆ ಸುಬ್ಬಮ್ಮ ಗೈರಾಗಿದ್ದರು. ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸೇರಿದಂತೆ ಒಟ್ಟು 30 ಮಂದಿ ಮತದಾರರು ಚುನಾವಣಾ ಅಧಿಕಾರಿಯ ಮುಂದೆ ಹಾಜರಿದ್ದರು. 

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿನಾರಾಯಣಪ್ಪ ಗೆ 17 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಸುಬ್ಬರಾಜು ಗೆ 13 ಮತಗಳು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಫಜ್ಲುಲ್ಲಾ ಫೀರ್ ಗೆ 16 ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿ.ಅಮರನಾಥ್ ಗೆ 13 ಮತಗಳನ್ನು ಪಡೆದಿದ್ದರು. ಅಂತಿಮವಾಗಿ ಹೆಚ್ಚು ಮತಗಳನ್ನು ಪಡೆದಿದ್ದ ಪಕ್ಷೇತರ ಅಭ್ಯರ್ಥಿಗಳಾದ ಲಕ್ಷ್ಮಿನಾರಾಯಣಪ್ಪ ರನ್ನು ಅಧ್ಯಕ್ಷರನ್ನಾಗಿ ಮತ್ತು ಫಜ್ಲುಲ್ಲಾ ಫೀರ್ ರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ರವರ ಬೆಂಬಲಿತ ಕಾರ್ಯಕರ್ತರು ಮತ್ತು ಮುಖಂಡರು ನಗರಸಭೆಯ ಮುಂಭಾಗದ ಎಂ.ಜಿ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು. 

ತಮ್ಮ ನೆಚ್ಚಿನ ‌ಶಾಸಕರು ಹೊರಬರುತ್ತಿದ್ದಂತೆ ಪುಷ್ಪಮಾಲೆಗಳನ್ನು ಹಾಕಿ ಜೈಕಾರ ಕೂಗುತ್ತಾ ಸಂಭ್ರಮಿಸಿದರು. ಈ‌ ಬಾರಿಯ ನಗರಸಭೆ ಚುನಾವಣೆಯು ಕಾಂಗ್ರೆಸ್ ಬೆಂಬಲಿತ ಮುಖಂಡರಿಗೆ ಮುಖಭಂಗವಾಗಿದ್ದು, ಮತ್ತೊಮ್ಮೆ ಅಧಿಕಾರ ಕೈ ಪಾಳಯದಿಂದ ದೂರಸರಿದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಹಾಲಿ ಮತ್ತು ಮಾಜಿ ಶಾಸಕರಿದ್ದರೂ ಕೂಡ ನಗರಸಭೆ ಅಧಿಕಾರವು ಪಕ್ಷೇತರರ ಪಾಲಾಗಿರುವ ಬಗ್ಗೆ ನಾಗರೀಕ ವಲಯದಲ್ಲಿ  ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.

ಸಂಸದ ಡಾ.ಕೆ.ಸುಧಾಕರ್ ಗೈರು: ಗೌರಿಬಿದನೂರು ‌ನಗರಸಭೆಯಲ್ಲಿ ಬಿಜೆಪಿ ಬೆಂಬಲಿತ 3, ಜೆಡಿಎಸ್ ಬೆಂಬಲಿತ 6 ಮತ್ತು ಓರ್ವ ಬಿಜೆಪಿ ಸಂಸದ ಸೇರಿದಂತೆ ಒಟ್ಟು 10 ಮಂದಿ ಮೈತ್ರಿ ಸದಸ್ಯರಿದ್ದರು. ಆದರೆ ಸೋಮವಾರ ನಡೆದ ನಗರಸಭೆ ಚುನಾವಣೆಗೆ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ರವರು ಗೈರಾಗಿದ್ದರು. ಇದರಿಂದಾಗಿ ಮೈತ್ರಿ ಬೆಂಬಲಿತ ಸದಸ್ಯರು ಪಕ್ಷೇತರ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ನಗರಸಭೆಗೆ ಪೊಲೀಸ್ ಸರ್ಪಗಾವಲು; ಸೋಮವಾರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ  ಆಯ್ಕೆಗೆ ಸಂಬಂಧಿಸಿದಂತೆ ಚುನಾವಣಾ ಪ್ರಕ್ರಿಯೆ ನಡೆಯುವ ಕಾರಣ ಬೆಳಿಗ್ಗೆ 11 ಗಂಟೆಯಿಂದಲೇ ನಗರಸಭೆಯ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ವಗಾವಲನ್ನು ನಿಯೋಜನೆ ಮಾಡಿತ್ತು. ಚುನಾವಣೆಯಲ್ಲಿ ಮತಚಲಾವಣೆಗೆ ಬಂದ ನಗರಸಭೆ ಸದಸ್ಯರು ಮತ್ತು ಸ್ಥಳೀಯ ಶಾಸಕರಿಗೆ ಸೂಕ್ತ ಬಂದೋಬಸ್ತು‌ ವ್ಯವಸ್ಥೆ ಮಾಡಿದ್ದರು.

ಮಗನ ಮಿಸ್ಸಿಂಗ್ ‌ದೂರು ನೀಡಿದ ತಂದೆ; ನಗರಸಭೆ ವ್ಯಾಪ್ತಿಯ 22 ನೇ ವಾರ್ಡಿನ ಸದಸ್ಯ ಗಿರೀಶ್ ಕಳೆದ ಎರಡು ದಿನಗಳಿಂದ ಕಾಣೆಯಾಗಿರುವ ಬಗ್ಗೆ ಅವರ ತಂದೆ ಬಲರಾಂ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಗರಸಭೆ ಚುನಾವಣೆಯ ಪ್ರಯುಕ್ತ ವಿರೋಧಿ ಪಾಳಯದ ನಾಯಕರು ತಮ್ಮ ಮಗ, ನಗರಸಭೆ ಸದಸ್ಯ ಗಿರೀಶ್ ರನ್ನು ಅಪಹರಿಸಿರಬಹುದು ಎಂಬುದಾಗಿ ಬಲರಾಂ ತಿಳಿಸಿದ್ದಾರೆ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

crime

HL

crime

HL

others

HL

others

HL

others

HL

others

HL

others

HL

others

HL

others

HL

others

HL

others

HL

politics

HL

politics

HL

crime

HL

crime

HL

politics

HL

others

HL

politics

HL

others

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

art