ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು ಮಗನ ಮಾರಾಟಕ್ಕೆ ಯತ್ನ..!
ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು ಮಗನ ಮಾರಾಟಕ್ಕೆ ಯತ್ನ..!

ಲಖನೌ, (ಸೆ.09): ಪತ್ನಿಯ ಆರನೇ ಹೆರಿಗೆಗೆ ಸಂಬಂಧಿಸಿದ ಖಾಸಗಿ ಆಸ್ಪತ್ರೆ ಬಿಲ್ಲು ಕಟ್ಟಲಾಗದ ಕಾರ್ಮಿಕನೊಬ್ಬ ತನ್ನ ಮಗುವನ್ನೇ ಮಾರಲು ಮುಂದಾದ ಪ್ರಸಂಗ ಉತ್ತರಪ್ರದೇಶದ ಬರ್ವಾಬಟ್ಟಿ ಎಂಬಲ್ಲಿ ನಡೆದಿದೆ.

ಈ ಪ್ರಕರಣದಲ್ಲಿ ಪತಿ ಹ್ಯಾರೀಸ್ ಪಟೇಲ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪತಿ ಹ್ಯಾರೀಸ್ ಪಟೇಲ್‌ಗೆ ತನ್ನ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ 6ನೇ ಮಗುವನ್ನು ಹೆತ್ತಾಗ ಆಸ್ಪತ್ರೆಯ ಚಿಕಿತ್ಸಾ ಶುಲ್ಕ ಕಟ್ಟಲು ಸಾಧ್ಯವಾಗಲಿಲ್ಲ.

ಹೀಗಾಗಿ ತಾಯಿ ಹಾಗೂ ನವಜಾತ ಶಿಶುವನ್ನು ಆಸ್ಪತ್ರೆಯಿಂದ ಹೊರಗೊಯ್ಯಲು ಸಿಬ್ಬಂದಿ ಅವಕಾಶ ನೀಡಲಿಲ್ಲ. ಈ ಸಂದರ್ಭದಲ್ಲಿ ಯಾರೋ ಹೇಳಿದ ಮಾತಿನಂತೆ ಮಧ್ಯವರ್ತಿಯನ್ನು ಸಂಪರ್ಕಿಸಿ ಮೂರು ವರ್ಷದ ಮಗನನ್ನು ಮಾರಲು ಹ್ಯಾರೀಸ್ ಪಟೇಲ್ ಮುಂದಾಗಿದ್ದನಂತೆ.

ಈ ವಿಷಯ ತಿಳಿದು ಆಸ್ಪತ್ರೆಗೆ ಬಂದ ಪೊಲೀಸರು, ಮಧ್ಯವರ್ತಿ ಅಮರೀಜ್ ಯಾದವ್, ಮಗುವನ್ನು ದತ್ತು ಪಡೆಯಲು ಯತ್ನಿಸಿದ ದಂಪತಿ ಬೋಳ ಯಾದವ್- ಕಲಾವತಿ, ನಕಲಿ ವೈದ್ಯೆ ತಾರಾ ಕುಶವಾಹ ಹಾಗೂ ಆಸ್ಪತ್ರೆಯ ಸಹಾಯಕಿ ಸುಕಾಂತಿ ಎಂಬ ಐವರನ್ನು ಬಂಧಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

crime

HL

crime

HL

others

HL

others

HL

others

HL

others

HL

others

HL

others

HL

others

HL

others

HL

others

HL

politics

HL

politics

HL

crime

HL

crime

HL

politics

HL

others

HL

politics

HL

others

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

art