ಸ್ಪರ್ಧೆ ಗೆದ್ದು ಬೈಕ್ ಏರಿದ 'ಕುಷ್ಟಗಿ ಟಗರು'..!
ಸ್ಪರ್ಧೆ ಗೆದ್ದು ಬೈಕ್ ಏರಿದ 'ಕುಷ್ಟಗಿ ಟಗರು'..!

ಕುಷ್ಟಗಿ, (ಸೆ.06): ತಾಲೂಕಿನ ಕುಂಬಳಾವತಿ ಗ್ರಾಮದಲ್ಲಿ ನಡೆದ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆಯಲ್ಲಿ ಕುಷ್ಟಗಿ ಟಗರು ಸೆಣಸಾಡಿ ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಹೊಸ ಬೈಕ್ ಗೆದ್ದುಕೊಂಡಿದೆ.

ಶ್ರಾವಣ ಮಾಸದ ನಿಮಿತ್ತ ಕುಂಬಳಾವತಿ ಗ್ರಾಮದ ಶ್ರೀದ್ಯಾಮಾಂಭಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ರಾಜ್ಯ ಮಟ್ಟದ ಟಗರಿನ ಕಾಳಗ ಓಪನ್ ಸ್ಪರ್ಧೆ ಏರ್ಪಡಿಸಲಾಗಿತ್ತು. ರಾಜ್ಯದ ವಿವಿಧ ಕಡೆಯಿಂದ 8 ಹಲ್ಲಿನ 40ಕ್ಕೂ ಹೆಚ್ಚು ಟಗರುಗಳು ಭಾಗವಹಿಸಿದ್ದವು.

4 ಸುತ್ತುಗಳ ಈ ಸ್ಪರ್ಧೆಯಲ್ಲಿ ಬಲಾಢ್ಯ ಎದುರಾಳಿ ಟಗರು ಗಳನ್ನು ಕುಷ್ಟಗಿ ಟಗರು ಸೆಣೆಸಾಡಿ ಮಹಾ ಬಲಾಢ್ಯ ಎನಿಸಿಕೊಂಡಿತು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಗುಡದೂರಿನ ಬಲಿಷ್ಠ ಟಗರಿನ ಜೊತೆಗೆ ತೀವ್ರ ಸೆಣಸಾಡಿ ಕೊನೆಗೆ ಗೆದ್ದ ಕುಷ್ಟಗಿ ಟಗರು, ಅಂದಾಜು 1 ಲಕ್ಷ ರೂ. ಬೆಲೆ ಬಾಳುವ ಹೊಸ ಬೈಕ್ ಬಹುಮಾನವಾಗಿ ಪಡೆದುಕೊಂಡಿದೆ. 

ಹರ್ಷ: ರಾಜ್ಯದ ಐದು ಕಡೆಗಳಲ್ಲಿ ನಡೆದ ಓಪನ್ ಟಗರಿನ ಕಾಳಗ ಸ್ಪರ್ಧೆಯಲ್ಲಿ ನಮ್ಮ ಟಗರು ಭಾಗವಹಿಸಿತ್ತು. ಸ್ವಲ್ಪ ಅಂತರದಲ್ಲಿಯೇ ಸೋತಿತ್ತು. ಆದರೆ ಎದುರಾಳಿ ಟಗುರುಗಳಿಗೆ ಸಾಕಷ್ಟು ಹಾನಿ ಮಾಡಿತ್ತು. ಒಟ್ಟು 5 ರಾಜ್ಯ ಮಟ್ಟದ ಕಾಳಗ ಸ್ಪರ್ಧೆಗಳಲ್ಲಿ ಎರಡರಲ್ಲಿ ಗೆದ್ದು ಬಹುಮಾನ ಗೆದ್ದುಕೊಟ್ಟಿದೆ.

ಈ ಹಿಂದೆ ಸೂಳಿಬಾವಿಯಲ್ಲಿ ನಡೆದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ನಗುದು ಬಹುಮಾನಗಳಿಸಿ ಕೊಟ್ಟಿದೆ. ಮುಂದಿನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳಿಸಲಿದೆ ಎಂಬ ವಿಶ್ವಾಸ ನಮಗಿತ್ತು.

ಸದ್ಯದ ಕುಂಬಳಾವತಿಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ನಮಗೆ ಬಹುಮಾನವಾಗಿ ಬೈಕ್ ತಂದುಕೊಟ್ಟ ನಮ್ಮ ಬಲಾಢ್ಯ ಟಗರಿನ ಬಗ್ಗೆ ನಮಗೆ ಹೆಮ್ಮೆ ಇದೆ. ಅದನ್ನು ಪ್ರೀತಿಯಿಂದ ಗಾಂಧಿನಗರ ಗೂಳಿ ಎಂತಲೇ ಕರೆಯುತ್ತೇವೆ ಎಂದು ಹರುಷ ವ್ಯಕ್ತ ಪಡಿಸುತ್ತಾರೆ ಕುಷ್ಟಗಿ ಟಗರಿನ ಮಾಲೀಕರಾದ ಜಂಬಣ್ಣ ಡೊಳ್ಳಿನ ಸಾ.ಬೆಂಚಮಟ್ಟಿ ಹಾಗೂ ದಾವಲ್ ಕಾಯಗಡ್ಡಿ ಸಾ.ಕುಷ್ಟಗಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

others

HL

others

HL

others

HL

politics

HL

politics

HL

crime

HL

crime

HL

politics

HL

others

HL

politics

HL

others

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

art

HL

crime

HL

education

HL

others

HL

others

HL

art

HL

education

HL

crime