ಬೆಲೆ ಏರಿಕೆ ನಡುವೆ ಗೌರಿ ಗಣೇಶ ಚತುರ್ಥಿ ಹಬ್ಬಕ್ಕೆ ಸಂಭ್ರಮದ ಸ್ವಾಗತ
ಬೆಲೆ ಏರಿಕೆ ನಡುವೆ ಗೌರಿ ಗಣೇಶ ಚತುರ್ಥಿ ಹಬ್ಬಕ್ಕೆ ಸಂಭ್ರಮದ ಸ್ವಾಗತ

ದೊಡ್ಡಬಳ್ಳಾಪುರ, (ಸೆ.06): ಗೌರಿ ಗಣೇಶ ಹಬ್ಬಕ್ಕೆ ದಿನಬಳಕೆ ವಸ್ತುಗಳು ಹಾಗೂ ಗೌರಿ, ಗಣೇಶ ಮೂರ್ತಿಗಳು ಸಹ ದುಬಾರಿಯಾಗಿವೆ. ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹಲವಾರು ನಿಯಮಗಳು ಹೇರಲಾಗಿದೆ. ಇವೆಲ್ಲದರ ನಡುವೆ, ಆಗಮಿಸಿರುವ ಗೌರಿ ಗಣೇಶ ಹಬ್ಬಕ್ಕಾಗಿ ತಾಲೂಕಿನಲ್ಲಿ ಸಿದ್ದತೆಗಳು ನಡೆದಿವೆ.

ಗಣೇಶ ಮೂರ್ತಿಗಳು ದುಬಾರಿ: ಸರ್ಕಾರ ಪಿಓಪಿ ಗಣೇಶಮೂರ್ತಿಗಳನ್ನು ಕಟ್ಟುನಿಟ್ಟಾಗಿ ನಿಷೇಸಿದೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಮಾತ್ರ ಕೂರಿಸುವಂತೆ ಆದೇಶವಿರುವುದರಿಂದ ಪಾರಂಪರಿಕ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. 

ಹೂವಿನ ವ್ಯಾಪಾರದ ಭರಾಟೆ: ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಗಣೇಶ ಹಬ್ಬಕ್ಕೆ ಹೂವಿನ ಬೆಲೆಗಳು ಕೊಂಚ ಕಡಿಮೆ ಇವೆ. ಬಾಳೆಹಣ್ಣು  ಪಚ್ಚ ಬಾಳೆ ಕೆಜಿಗೆ 50 ರೂ ಆದರೆ ಏಲಕ್ಕಿ ಬಾಳೆ ಕೆಜಿಗೆ 100ರೂ ಮುಟ್ಟಿದೆ.

ಗುಲಾಬಿ, ಸೇವಂತಿ ಮೊದಲಾದ ಬಿಡಿ ಹೂಗಳು ಕೆ.ಜಿಗೆ 150ರಿಂದ 200ರೂಗಳಿಗೆ ಮಾರಾಟವಾಗುತ್ತಿವೆ. ಕಾಕಡ, ಕೆ.ಜಿಗೆ 750 ಮಳ್ಳೆ 600ರೂ ಕನಕಾಂಬರ 1000ರೂಗಳಿದ್ದು, ಹಬ್ಬವನ್ನು ನೆನಪಿಸುತ್ತಿವೆ.

ಗಣೇಶನ ಉತ್ಸವ ಮೂರ್ತಿ, ಮಾವಿನಸೊಪ್ಪು, ಬಾಳೆಕಂದು ಮೊದಲಾದ ಸಾಮಗ್ರಿಗಳ ಬೆಲೆಗಳು ಸಹ ಏರಿಕೆಯಾಗಿವೆ.  ಬೆಲೆ ಏರಿಕೆಗಳು ಗಣೇಶ ಹಬ್ಬದ ಉತ್ಸಾಹಕ್ಕೆ ತಣ್ಣೀರೆರಚಿದ್ದರೂ ವರ್ಷಕ್ಕೊಮ್ಮೆ ಬರುವ ಗಣೇಶ ಹಬ್ಬವನ್ನು ಆಚರಿಸಲು ತಾಲೂಕಿನಲ್ಲಿ ಸಕಲ ಸಿದ್ದತೆಗಳು ನಡೆದಿವೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

others

HL

others

HL

crime

HL

others

HL

others

HL

others

HL

art

HL

crime

HL

education

HL

others

HL

others

HL

art

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

others

HL

politics

HL

others

HL

crime

HL

politics

HL

economy

HL

health