ಹರಿತಲೇಖನಿ ದಿನಕ್ಕೊಂದು ಕಥೆ: ನಂಬಿಕೆ
ಹರಿತಲೇಖನಿ ದಿನಕ್ಕೊಂದು ಕಥೆ: ನಂಬಿಕೆ

ಒಬ್ಬ ವ್ಯಕ್ತಿಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ನಾಲ್ಕೈದು ಆನೆಗಳನ್ನು ಮರದ ಕೆಳಗೆ ಕಟ್ಟಿ ಹಾಕಿರುವುದು ಕಂಡಿತು ಅದರಲ್ಲೂ ಆಶ್ಚರ್ಯವೆಂದರೆ ಆ ಆನೆಗಳನ್ನು ಮಾಮೂಲಿನಂತೆ ಕಬ್ಬಿಣದ ಚೈನುಗಳನ್ನು ಬಳಸದೇ ಹಸುವನ್ನು ಕಟ್ಟುವಂತಹಾ ಹಗ್ಗದಿಂದ ಕಟ್ಟಿರುವುದನ್ನು ಕಂಡು ಆಶ್ಚರ್ಯದಿಂದ ಮಾವುತನನ್ನು ವಿಚಾರಿಸಿದ.

"ಅಲ್ಲಾ ಕಣಯ್ಯಾ ಈ ಭಯಾನಕ ಗಾತ್ರದ ಆನೆಗಳನ್ನ ಈ ಸಾಮಾನ್ಯ ಹಗ್ಗದಲ್ಲಿ ಕಟ್ಟೋದುಂಟಾ ಅವಕ್ಕೇನಾದರೂ ತಲೆ ಕೆಟ್ಟರೆ ನೀ ಕಟ್ಟಿರೋ ಹಗ್ಗವೂ ಮರವೂ ಒಂದು ಲೆಕ್ಕವಾ ಎಲ್ಲಾ ಸಪಾಯ ಮಾಡಿ ನಿನ್ನ ಎದೆ ಮೇಲೆ ಕಾಲಿಕ್ಕಿ ಓಡಿಹೋಗೋದಿಲ್ವಾ.! ಅಂದ.

ಅದಕ್ಕೆ ಮಾವುತ ಅದೇನೋ ಗೊತ್ತಿಲ್ಲಾ ಸ್ವಾಮೀ , ಆದರೆ "ಈ ಆನೆಗಳನ್ನ ನಾನು ಪುಟಾಣಿ ಮರಿಯಿದ್ದಾಗಿನಿಂದಲೂ ಸಾಕುತ್ತಿದ್ದೇನೆ , ಅವು ಸಣ್ಣವಾಗಿದ್ದಾಗ ಇದೇ ಹಗ್ಗದಿಂದಲೇ ಕಟ್ಟುತ್ತಿದ್ದೆ ಆಗ ಅವು ಸಣ್ಣವಾದ್ದರಿಂದ ಸತತ ಒಂದು ವರ್ಷ ಹಗ್ಗ ಹರಿದು ಹಾಕಲು  ಪ್ರಯತ್ನ ಪಟ್ಟವು ಆದರೆ ಹಗ್ಗ ಕಿತ್ತು ಹಾಕಲು ಆ ಎಳೆಯ ಪುಟಾಣಿ ದೇಹಕ್ಕೆ ಸಾದ್ಯವಿರಲಿಲ್ಲ ಅಂದಿನಿಂದಲೂ 'ತನಗೆ ಈ ಹಗ್ಗವನ್ನು ಕಿತ್ತು ಹಾಕಲು ಸಾದ್ಯವೇ ಇಲ್ಲ' ಎಂಬ ನಂಬಿಕೆ ಆ ಧೀಮಂತವಾದ ಅಗಾಧ ಗಾತ್ರದ ಆನೆಗಳ ಮನಸ್ಸಲ್ಲಿ ಈಗಲೂ ಬಲಿಷ್ಠವಾಗಿ ಬೇರೂರಿರುವುದರಿಂದಲೇ ಅವು ಕಿತ್ತು ಹಾಕಲಾಗದ ಹಗ್ಗವಿದೆಂಬ ಮೂಢನಂಬಿಕೆಯಲ್ಲಿದ್ದಾವೆ ಅಷ್ಟೇ" ಎಂದ. 

ಜೀವನದಲ್ಲಿ ಎಂದೋ ಕಂಡ ಸಣ್ಣ ಸೋಲು ನಿಮ್ಮನ್ನು ಈಗಲೂ ಸಹ ಗೆಲ್ಲಲಾರದ ಪರಿಸ್ಥಿತಿಗೆ ತರುವ ಮೂಢನಂಬಿಕೆ ಆಗಬಾರದು ಪ್ರಯತ್ನವಿಲ್ಲದೆ ಗೆಲುವಿಲ್ಲ.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

others

HL

others

HL

crime

HL

others

HL

others

HL

others

HL

art

HL

crime

HL

education

HL

others

HL

others

HL

art

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

others

HL

politics

HL

others

HL

crime

HL

politics

HL

economy

HL

health