ದೊಡ್ಡಬಳ್ಳಾಪುರ: MSV ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ..!
ದೊಡ್ಡಬಳ್ಳಾಪುರ: MSV ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ..!

ದೊಡ್ಡಬಳ್ಳಾಪುರ, (ಜುಲೈ.26); ನಗರದ ಪ್ರತಿಷ್ಠಿತ ಎಂ.ಎಸ್.ವಿ. ಪಬ್ಲಿಕ್ ಶಾಲೆಯಲ್ಲಿ ಇಂದು 25ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ 1999ರ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿದ ಹಾಗೂ ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಲಾಯಿತು. ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ತ್ಯಾಗ, ಬಲಿದಾನವನ್ನು ಸ್ಮರಿಸಿ ಅವರಿಗೆ ಗೌರವ ನೀಡಲಾಯಿತು.

ಈ ವೇಳೆ ಮಾತನಾಡಿದ ಶಾಲೆಯ ಶಿಕ್ಷಕ ದಿನಕರ್, ಭಾರತದಲ್ಲಿ ಪ್ರತಿವರ್ಷ ಜುಲೈ 26 ಅನ್ನು ಕಾರ್ಗಿಲ್‌ ವಿಜಯ್‌ ದಿವಸ್‌ ಎಂದು ಆಚರಿಸಲಾಗುತ್ತದೆ. 

ಸುಮಾರು 25  ವರ್ಷಗಳ ಹಿಂದೆ ಕಾರ್ಗಿಲ್ ಕಣಿವೆಯಲ್ಲಿ ಮದ್ದುಗುಂಡುಗಳ ಸುರಿಮಳೆ ಸದ್ದು ಶಾಂತಿ ಬಯಸುವ ಭಾರತದ ಬೆನ್ನಿಗೆ ಚೂರಿ ಹಾಕಿದ ಪಾಪಿ ಪಾಕಿಸ್ತಾನ. ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದರ ಜೊತೆಗೆ ಮುಟ್ಟಿನೋಡಿಕೊಳ್ಳುವ ಹಾಗೆ ಮರ್ಮಾಘಾತವನ್ನು ಭಾರತದ ವೀರ ಯೋಧರು ನೀಡಿದರು.

ಅಂದಿನ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ, ಪಾಕಿಸ್ತಾನದೊಂದಿಗೆ ಸ್ನೇಹ ಹಸ್ತ ಚಾಚಿ, ಬಸ್ ಪ್ರಯಾಣ ಬೆಳೆಸಿ, ಕೆಲವೇ ತಿಂಗಳುಗಳಲ್ಲಿ ಭಾರತಕ್ಕೆ ಗೊತ್ತಿಲ್ಲದಂತೆ ಕಾರ್ಗಿಲ್‍ನ ಕಡಿದಾದ ಹಲವು ಪ್ರದೇಶಗಳಲ್ಲಿ ತಮ್ಮ ಸೈನ್ಯವನ್ನು ಭಯೋತ್ಪಾದಕರ ವೇಷದಲ್ಲಿ ನಿಯೋಜನೆಗೊಳಿಸುತ್ತದೆ.

ಇದನ್ನು ತಡವಾಗಿ ಅರಿತುಕೊಂಡ ಸೇನಾ ವ್ಯವಸ್ಥೆ ಅತ್ಯಂತ ಚಾಕಚಕ್ಯತೆಯಿಂದ, ತನ್ನ ರಕ್ಷಣಾ ತಂತ್ರಗಳನ್ನು ಹೂಡಿ, ವಾಯುದಳವು ಅತ್ಯಂತ ಚಾಣಾಕ್ಷತೆಯಿಂದ ತನ್ನ ಕಾರ್ಯ ನಿಭಾಯಿಸಿದರೆ, ಭೂದಳ ಅತ್ಯಂತ ಕಡಿದಾದ ಬೆಟ್ಟ ಗುಡ್ಡಗಳ ಮಧ್ಯದಲ್ಲಿ ತಮ್ಮ ತುತ್ತಿನ ಚೀಲದೊಂದಿಗೆ ಶತ್ರುಗಳ ತುತ್ತಿನ ಚೀಲವನ್ನು ಸದೆಬಡೆಯಲು ಮದ್ದುಗುಂಡುಗಳ ಸಮೇತ ಮುನ್ನುಗ್ಗುತ್ತದೆ.

ಇದರ ನಡುವೆ ಅಲ್ಲಿ ಕಡಲಲ್ಲಿ ನೌಕಾದಳವು ವಿವಿಧ ಮೂಲಗಳಿಂದ ಪಾಕಿಸ್ತಾನಕ್ಕೆ ಸರಬರಾಜಾಗುವ ತೈಲ, ಆಹಾರ ಪದಾರ್ಥ ಪಾಕಿಸ್ತಾನಕ್ಕೆ ತಲುಪದಂತೆ ತನ್ನ ಕಾರ್ಯ ನಿರ್ವಹಿಸುತ್ತದೆ. ಈ ಎಲ್ಲಾ ಮೂರೂ ದಳದ ಸೈನ್ಯದ ದೇಶಭಕ್ತಿಯ ಮುಂದೆ, ಪಾಪಿ ಪಾಕಿಸ್ತಾನ ಅಮೆರಿಕಾದ ಮುಂದೆ ಮಂಡಿಯೂರಿ ಯುದ್ದ ನಿಲ್ಲಿಸುವಂತೆ ಪ್ರಸ್ತಾಪಿಸುತ್ತದೆ. ಕೊನೆಗೆ ಸೋಲೊಪ್ಪಿಕೊಂಡು ತನ್ನ ಕಾಲಿಗೆ ಬುದ್ಧಿ ಹೇಳುತ್ತದೆ.

ಅಂದಿನ ಯುದ್ಧದಲ್ಲಿ ಸುಮಾರು 524 ಭಾರತದ ಸೈನಿಕರು ವೀರಸ್ವರ್ಗಸ್ಥರಾದರು. ದೇಶಕ್ಕಾಗಿ ಅನೇಕ ಸೈನಿಕರ ತ್ಯಾಗ ಬಲಿದಾನಗಳನ್ನು ನಾವು ಇಂದು ಸ್ಮರಿಸಬೇಕಾಗಿದೆ. ಅವರ ಧೈರ್ಯ, ದೇಶಪ್ರೇಮ, ಪ್ರತಿ ಭಾರತೀಯರ ಧಮನಿಧಮನಿಗಳಲ್ಲಿ ಉಕ್ಕಿ ಹರಿಯಬೇಕಾಗಿದೆ. ಮತ್ತು ಅವುಗಳೆಲ್ಲವನ್ನು ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿ ಮೈಗೂಡಿಸಿಕೊಳ್ಳಬೇಕೆಂದರು.

ನಂತರ ಹುತಾತ್ಮ ಯೋಧರಿಗಾಗಿ ಶಾಲಾ ಮಕ್ಕಳು ಮೇಣದ ಬತ್ತಿಯ ಜ್ಯೋತಿ ಹಚ್ಚಿ, ಮೌನಾಚರಣೆಯ ಮೂಲಕ ವುದರ ಮೂಲಕ ಶಾಂತಿ ಕೋರಿದರು.

ಈ ವೇಳೆ ಶಾಲೆಯ ಅಧ್ಯಕ್ಷ ಎ.ಸುಬ್ರಮಣ್ಯ, ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ, ಶಿಕ್ಷಕ ವೃಂದ ಮತ್ತ್ತು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others