PM ವಿಶ್ವಕರ್ಮ ಯೋಜನೆ: ತರಬೇತಿ ಹೆಸರಲ್ಲಿ ದೊಡ್ಡಬಳ್ಳಾಪುರದಲ್ಲಿ ಗೋಲ್ ಮಾಲ್ ಆರೋಪ.!; ತನಿಖೆಗೆ ಆಗ್ರಹ
PM ವಿಶ್ವಕರ್ಮ ಯೋಜನೆ: ತರಬೇತಿ ಹೆಸರಲ್ಲಿ ದೊಡ್ಡಬಳ್ಳಾಪುರದಲ್ಲಿ ಗೋಲ್ ಮಾಲ್ ಆರೋಪ.!; ತನಿಖೆಗೆ ಆಗ್ರಹ

ದೊಡ್ಡಬಳ್ಳಾಪುರ, (ಜುಲೈ.26); ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಧಿಕಾರಿಗಳ ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಹಾದಿ ತಪ್ಪುತ್ತಿದ್ದು, ತರಬೇತಿಗೆಂದು ನೀಡಲಾಗುತ್ತಿರುವ ಲಕ್ಷಾಂತರ ರೂ ದುರುಪಯೋಗವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪಿಎಂ ವಿಶ್ವಕರ್ಮ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದರಡಿ 18 ವಿವಿಧ ವೃತ್ತಿಗಳ ಕುಶಲಕರ್ಮಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಬಡಿಗ, ಶಸ್ತ್ರ ತಯಾರಕರು, ಕಮ್ಮಾರ, ಕಲ್ಲುಕುಟಿಗ, ಬಟ್ಟೆಣ ಚಾಪೆ-ಕಸ ಪೊರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಕರು, ದೋಣಿ ತಯಾರಿಸುವವರು, ಕ್ಷೌರಿಕ ವೃತ್ತಿ, ಸುತ್ತಿಗೆ ಮತ್ತು ಉಪಕರಣಗಳನ್ನು ತಯಾರಿಸುವವರು, ಹೂಮಾಲೆ ತಯಾರಕರು, ಆಗಸರು, ಕುಂಬಾರ ವೃತ್ತಿ, ಮೀನು ಬಲೆ ಹೆಣೆಯುವವರು, ಶಿಲ್ಪಿ, ಚಮ್ಮಾರ ಪಾದರಕ್ಷೆ ತಯಾರಕರು, ಬೀಗ ತಯಾರಿಕಾ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರ ಹೊಸ ಯೋಜನೆ ಜಾರಿ ಮಾಡಿದೆ. 

ಕುಶಲಕರ್ಮಿ ಉಪಕರಣ ಪಡೆಯಲು ಸಹಾಯಧನ ಒಂದು ಲಕ್ಷದಿಂದ ಮೂರು ಲಕ್ಷದವರೆಗೆ ಸಾಲ ಕೇವಲ ಶೇ 5 ರಷ್ಟು ಬಡ್ಡಿಯೊಂದಿಗೆ ಪಡೆಯಬಹುದಾಗಿದೆ. ಈ ಯೋಜನೆಯು ಕುಶಲಕರ್ಮಿಗಳಿಗೆ ಉಪಯುಕ್ತವಾಗಿದ್ದು ತರಬೇತಿ ಸುಧಾರಿತ ಉಪಕರಣ ಪಡೆಯಲು ರೂ.15000 ಹಾಗೂ ಸ್ವಯಂ ಉದ್ಯೋಗ ಆರಂಭಿಸಲು ರೂ.3 ಲಕ್ಷ ವರೆಗೆ ಸಾಲ ಪಡೆಯಬಹುದಾಗಿದೆ.

ಈ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ದೊಡ್ಡಬಳ್ಳಾಪುರ ನಗರದಲ್ಲಿ ಎರಡು ಕಟ್ಟಗಳನ್ನು ಲಕ್ಷಾಂತರ ರೂ ಬಾಡಿಗೆ ನೀಡಿ ( ಮೂಲಗಳ ಮಾಹಿತಿ ತಿಂಗಳಿಗೆ ಎರಡು ಲಕ್ಷ) ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ತರಬೇತಿ ನೀಡಬೇಕಿದೆ.

ಆದರೆ ತರಬೇತಿ ಎಂಬುದು ಕೇವಲ ದಾಖಲಾತಿಗೆ ಮಾತ್ರ ಎಂಬಂತಾಗಿದ್ದು, ಕೆಲಸ ಕಾರ್ಯಬಿಟ್ಟು ತರಬೇತಿಗೆ ತೆರಳುವವರಿಗೆ ಯಾವುದೇ ತರಬೇತಿ ನೀಡದೆ. 9 ಗಂಟೆಗೆ ಲಾಗ್ ಇನ್ 5 ಗಂಟೆಗೆ ಲಾಗ್ ಔಟ್ ಇಷ್ಟಕ್ಕೆ ಸೀಮಿತವಾಗಿದೆ ಎಂಬ ಆರೋಪ ಫಲಾನುಭವಿಗಳದ್ದಾಗಿದೆ.

ಪಿಎಂ ವಿಶ್ವಕರ್ಮ ಯೋಜನೆಯ ಅನುಷ್ಠಾನದ ಕಾರ್ಯತಂತ್ರದ ಹೆಜ್ಜೆಯಾಗಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ (ಎಂಎಸ್ಡಿಇ) ಇಂದು ಪಿಎಂ ವಿಶ್ವಕರ್ಮ ಯೋಜನೆಯಡಿ ಮಾಸ್ಟರ್ ಟ್ರೈನರ್ ಗಳನ್ನು ನೇಮಿಸಿಬೇಕಿದೆ. ಆದರೆ ಸಮರ್ಪಕವಾಗಿ ನೇಮಿಸದೆ ಇರುವುದರಿಂದ ತರಬೇತಿಗೆ ಬರುವ ಫಲಾನುಭವಿಗಳು ಬೆಳಗ್ಗೆಯಿಂದ ಸಂಜೆಯವರೆಗೆ ಸುಮ್ಮನೆ ಕೂತು ಬರುವಂತಾಗಿದೆ ಎಂಬುದು ಫಲಾನುಭವಿಗಳ ಆರೋಪ.

ಈ ಯೋಜನೆ ಅಡಿಯಲ್ಲಿ 5 ಮತ್ತು 08 ದಿನಗಳ ತರಬೇತಿ ನೀಡಬೇಕಿದೆ ಇದರಲ್ಲಿ, ಕ್ಷೌರಿಕ, ಟೈಲರ್, ಮೇಸ್ತ್ರಿ, ಬಡಗಿ,  ಗೊಂಬೆ ಮತ್ತು ಆಟಿಕೆ ತಯಾರಕ ಮತ್ತು ಕಮ್ಮಾರ ಫಲಾನುಭವಿಗಳಿಗೆ ನೇಮಕವಾದ ಮಾಸ್ಟರ್ ತರಬೇತುದಾರರು, ಆಧುನಿಕ ತಂತ್ರಜ್ಞಾನ ಕೌಶಲ್ಯಗಳು ಮತ್ತು ಉದ್ಯಮಶೀಲತಾ ಜ್ಞಾನದೊಂದಿಗೆ ಸಜ್ಜುಗೊಳಿಸುವುದು. ಉದ್ಯಮಶೀಲತಾ ಸಾಮರ್ಥ್ಯಗಳು, ವ್ಯವಹಾರ ಯೋಜನೆ ತಯಾರಿಕೆ, ಸರ್ಕಾರದ ಬೆಂಬಲ ಪರಿಸರ ವ್ಯವಸ್ಥೆ, ಹಣಕಾಸು ಸಾಕ್ಷರತೆ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಬಗ್ಗೆ ತರಬೇತಿ ನೀಡಬೇಕಾಗುತ್ತದೆ. ಇದಕ್ಕಾಗಿ ಮಾಸ್ಟರ್ ತರಬೇತುದಾರರಿಗೆ ಆಧುನಿಕ ಟೂಲ್ ಕಿಟ್ ಅನ್ನು ಒದಗಿಸಲಾಗಿದೆ.

ಆದರೆ ತರಬೇತಿಗೆಂದು ಕೆಲಸ ಕಾರ್ಯ ಬಿಟ್ಟು ಹಳ್ಳಿಗಳಿಂದ ಹಣ ಖರ್ಚು ಮಾಡಿ ತೆರಳುವ ಮಹಿಳೆಯರು, ಪುರುಷರಿಗೆ ನಿರಾಸೆ ಎದುರಾಗುತ್ತಿದ್ದು, ಸೂಕ್ತವಾಗಿ ತರಬೇತಿ ನೀಡುತ್ತಿಲ್ಲ. ಪ್ರಶ್ನಿಸಿದರೆ ಸಮರ್ಪಕ ಉತ್ತರವೂ ನೀಡದೆ, ಆರಂಭದ ದಿನ ಹಾಗೂ ಅಂತಿಮ ದಿನ ಪೋಟೋ ತಗೆಸಿಕೊಳ್ಳಲು ತರಬೇತಿ ನಾಟಕವಾಡಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರಗಳ ಬಡ ಜನರಿಗೆ ಅನುಕೂಲ ಕಲ್ಪಿಸುವ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತವೆ ಆದರೆ ಅಧಿಕಾರಿಗಳು ಸೂಕ್ತ ನಿಗಾವಹಿಸದ ಕಾರಣ ಪಿಎಂ ವಿಶ್ವಕರ್ಮ ತರಬೇತಿ ಹೆಸರಲ್ಲಿ ಲಕ್ಷಾಂತರ ರೂ ದುರುಪಯೋಗವಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ತರಬೇತಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಬೇಕಿದೆ.

ಅಲ್ಲದೆ ತರಬೇತಿ ಕೇಂದ್ರಗಳ ಸಿಸಿ ಕ್ಯಾಮರಾಗಳ ದೃಶ್ಯವನ್ನು ವಶಕ್ಕೆ ಪಡೆದು, ನೀಡಲಾದ ತರಬೇತಿ ಏನು‌‌.? ಭಾಗಿಯಾದ ಫಲಾನುಭವಿಗಳು ಎಷ್ಟು..? ತರಬೇತುದಾರರು ಯಾರು..? ಎಂಬ ಕುರಿತು ತನಿಖೆ ನಡೆಸಿ, ತರಬೇತಿ ಹೆಸರಲ್ಲಿ ಲಕ್ಷಾಂತರ ರೂ. ಹಣ ದುರುಪಯೋಗ ಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್, ಡಿಸಿ ಶಶಿಧರ್ ಆಗ್ರಹಿಸಿದ್ದಾರೆ‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime

HL

sports

HL

others