ಮೈಕ್ರೋಸಾಫ್ಟ್ ವಿಂಡೋಸ್ ಸ್ಥಗಿತ; ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಗೊಂದಲ..!
ಮೈಕ್ರೋಸಾಫ್ಟ್ ವಿಂಡೋಸ್ ಸ್ಥಗಿತ; ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಗೊಂದಲ..!

ನವದೆಹಲಿ, (ಜುಲೈ.19); ವಿಶ್ವ ಪ್ರಸಿದ್ಧ ಕಂಪ್ಯೂಟರ್‌ಗಳ ಆಪರೇಟಿಂಗ್ ಸಿಸ್ಟಮ್ ದಿಗ್ಗಜ ಮೈಕ್ರೋಸಾಫ್ಟ್ ವಿಂಡೋಸ್ ವಿಶ್ವಾದ್ಯಂತ ಹಲವೆಡೆ ಸ್ಥಗಿತಗೊಂಡಿದೆ.

ವಿಂಡೋಸ್ ಬಳಕೆದಾರರಿಗೆ ತಮ್ಮ ಕಂಪ್ಯೂಟರ್ ಪರದೆಯ ಮೇಲೆ ನೀಲಿ ಬಣ್ಣದ ಮೃತ್ಯು ಚಿಹ್ನೆ ( ಬ್ಲೂ ಸ್ಟೀನ್ ಆಫ್ ಡೆತ್ - BSOD) ಕಾಣಿಸಲಾರಂಭಿಸಿದೆ.

ಜಾಗತಿಕವಾಗಿ ಕಂಡುಬಂದಿರುವ ಈ ಸಮಸ್ಯೆ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥೆ ಸ್ಪಷ್ಟಿಕರಣ ನೀಡಿದ್ದು, ಇತ್ತೀಚಿಗೆ ಮೈಕ್ರೋಸಾಫ್ಟ್ ಮಾಡಿದ ಕ್ರೌಡ್ ಸ್ಟೈಕ್ ಸಿಸ್ಟಮ್ ಅಪ್‌ಡೇಟ್‌ನಿಂದ ಈ ಸಮಸ್ಯೆ ಉಂಟಾಗಿದೆಯೆಂದು ಒಪ್ಪಿಕೊಂಡಿದೆ. 

ತ್ವರಿತ ಗತಿಯಲ್ಲಿ ತಾಂತ್ರಿಕ ದುರಸ್ಥಿ ನಡೆಯುತ್ತಿದ್ದು ಶೀಘ್ರದಲ್ಲೇ ಸಮಸ್ಯೆ ಪರಿಹಾರವಾಗಲಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ.

ಕ್ರೌಡ್ ಸೈಕ್ ಸಿಸ್ಟಮ್ ಮೈಕ್ರೋಸಾಫ್ಟ್ ನ ಇತ್ತೀಚಿನ ಅಪ್‌ಡೇಟ್ ಆಗಿದ್ದು, ಸೈಬರ್ ಸುರಕ್ಷಿತಿ ಸಾಧನವಾಗಿ ವಿಂಡೋಸ್ ಬಳಕೆದಾರಿಗಾಗಿ ಅಭಿವೃದ್ಧಿಪಡಿಸಲಾಗಿತ್ತು.

ಶುಕ್ರವಾರ ವಿಶ್ವಾದ್ಯಂತ ಕಾಣಿಸಿಕೊಂಡಿರುವ ಬ್ಲೂ ಸ್ಟೀನ್ ಆಫ್ ಡೆತ್ ಸಮಸ್ಯೆಯಿಂದಾಗಿ ಮೈಕ್ರೋಸಾಫ್ಟ್ ವಿಂಡೋಸ್ ಸ್ಥಗಿತಗೊಂಡಿದ್ದು, ಇದರ ಪರಿಣಾಮ ಶೇರು ಮಾರುಕಟ್ಟೆಯ ಮೇಲೂ ಬೀರಿದೆ. 

ಶೇರು ವಿನಿಮಯ ವ್ಯವಹಾರ ನಡೆಸುವ 5ಪೈಸಾ, ದಲಾಳ್ ಸ್ಟ್ರೀಟ್, ನುವಾಮಾ ಮತ್ತು ಮೋತಿಲಾಲ್ ಓಸ್ವಾಲ್ ಮುಂತಾದ ಕಂಪನಿಗಳ ವೆಬ್ ಸೈಟ್ ಮತ್ತು ಆಪ್‌ಗಳ ನಿರ್ವಹಣೆಯಲ್ಲಿ ಏರು ಪೇರು ಉಂಟಾಗಿದೆ.

ಶೇರು ಮಾರುಕಟ್ಟೆಯ ಈ ಪರಿಸ್ಥಿತಿಯಿಂದಾಗಿ ಇಂದು ಒಂದೇ ದಿನದಲ್ಲಿ ಸಾವಿರಾರು ಕೋಟಿ ರೂ. ನಷ್ಟ ಕೂಡ ಎದುರಾಗಲಿದ್ದು, ಹಲವು ಹೂಡಿಕೆದಾರರು ಆತಂಕಕ್ಕೆ ಒಳಗಾಗಿದ್ದಾರೆ. 

ಹಲವು ಶೇರು ವಿನಿಮಯ ಕಂಪನಿಗಳು ಈಗಾಗಳೇ ಸಾಮಾಜಿಕ ಜಾಲತಾಣಗಳ ಮೂಲಕ ಗ್ರಾಹಕರಿಗೆ ತಮ್ಮ ಸೇವಾ ವ್ಯತ್ಯಯದ ಬಗ್ಗೆ ಮಾಹಿತಿ ನೀಡಿದ್ದಾರೆ.

ಶೇರು ಹೂಡಿಕೆದಾರರು ಮತ್ತು ಏಜೆಂಟ್‌ಗಳು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೇರು ಹೂಡಿಕೆಯಿಂದಾಗಿ ತಮಗೆ ಆಗಿರುವ ನಷ್ಟವನ್ನು ಮುಂದಿಟ್ಟುಕೊಂಡು ಈ ನಷ್ಟವನ್ನು ಇಂಡಿಯನ್ ಸ್ಟಾಕ್ ಎಕ್ಸ್ ಚೇಂಜ್ ತುಂಬಿಕೊಡಲಿದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime