ಬಿಜೆಪಿ ಸಂಸದೆಗೆ ಕಪಾಳ ಮೋಕ್ಷ; ಲಾಡು ಹಂಚಿ ಸಂಭ್ರಮ| ವೈರಲ್ ವಿಡಿಯೋ ನೋಡಿ
ಬಿಜೆಪಿ ಸಂಸದೆಗೆ ಕಪಾಳ ಮೋಕ್ಷ; ಲಾಡು ಹಂಚಿ ಸಂಭ್ರಮ| ವೈರಲ್ ವಿಡಿಯೋ ನೋಡಿ

ಪಂಜಾಬ್, (ಜೂ.10); ಬಾಲಿವುಡ್‌ ನಟಿ, ಬಿಜೆಪಿಯ ನೂತನ ಸಂಸದೆ ಕಂಗನಾ ರನೌತ್‌ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿಯೊಬ್ಬರು ಕಪಾಳ ಮೋಕ್ಷ ಮಾಡಿರುವ ಘಟನೆ ವರದಿಯಾಗಿತ್ತು.

ಈ ಘಟನೆ ಬಗ್ಗೆ ಕಂಗನಾ ರನೌತ್‌ ಅವರು ಕೂಡ ವಿಡಿಯೋ ಮೂಲಕ ನೇರ ಆರೋಪ ಮಾಡಿದ್ದರು. ರೈತರ ಪ್ರತಿಭಟನೆ ಬಗ್ಗೆ ಕಂಗನಾ ರನೌತ್ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ನಾನು ಕಪಾಳ ಮೋಕ್ಷ ಮಾಡಿದ್ದೇನೆ. 100 ರೂಪಾಯಿ ಆಸೆಗೆ ರೈತರ ವೇಷದಲ್ಲಿ ಪ್ರತಿಭಟನಾಕಾರರು ಕುಳಿತಿದ್ದಾರೆ ಎಂದು ಕಂಗನಾ ಹೇಳಿದ್ದರು. ಅವರು ಅಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆಯೇ? ಅವರು ಈ ಹೇಳಿಕೆಯನ್ನು ನೀಡಿದಾಗ ನನ್ನ ತಾಯಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಕುಲ್ವಿಂದರ್ ಕೌರ್ ಹೇಳಿದ್ದಾರೆ.

ತಪಾಸಣೆ ವೇಳೆ ಘಟನೆ ನಡೆದಿದೆ. ವಿಸ್ತಾರಾ ವಿಮಾನವೇರುವ ಮುನ್ನ ಸಿಐಎಸ್‌ಎಫ್‌ ಮಹಿಳಾ ಪೇದೆ ಕುಲ್ವಿಂದ‌ರ್ ಕೌರ್ ನೂತನ ಸಂಸದೆ ಕಂಗನಾ ಕಪಾಲಕ್ಕೆ ಬಾರಿಸಿದ್ದಾರೆ. ತಪಾಸಣೆ ವೇಳೆ ಮೊಬೈಲ್ ಫೋನ್ ಕಿತ್ತುಕೊಳ್ಳಲು ಮುಂದಾದ ಪೇದೆ ಕೌರ್ ಅವರನ್ನು ಸಂಸದೆ ಪಕ್ಕಕ್ಕೆ ನೂಕಿದರು. ಪ್ರತಿಯಾಗಿ ಸಿಟ್ಟಿಗೆದ್ದ ಪೇದೆ ಕೌರ್, ಕಂಗನಾ ಕೆನ್ನೆಗೆ ಬಾರಿಸಿದರು ಎಂದು ತಿಳಿದು ಬಂದಿದೆ.

ಕಂಗನಾ ಗುಲಾಬಿ ವರ್ಣದ ಸೀರೆಯು ಟ್ಟುಕೊಂಡು ಮನೆಯಿಂದ ಖುಷಿಯಿಂದ ಹೊರಟಿದ್ದರು. ಆದರೆ, ಅವರ ಖುಷಿ ವಿಮಾನ ನಿಲ್ದಾಣದಲ್ಲೇ ಮೊಟಕಾಗು ವಂತಾಗಿತ್ತು.

ಕಪಾಳಮೋಕ್ಷಗೈದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಐಎಸ್‌ಎಫ್‌ ಸಿಬ್ಬಂದಿ ಕುಲ್ವಿಂದರ್‌ ಕೌರ್‌ ಅವರನ್ನು ಅಮಾನತು ಮಾಡಲಾಗಿದ್ದು, ಇಲಾಖಾ ತನಿಖೆಗೆ ನಿರ್ದೇಶನ ನೀಡಲಾಗಿದೆ. 

ಈಗ ಈ ಘಟನೆಗೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ನಡೆಯುತ್ತಿದೆ.

ಕಂಗನಾ ರನೌತ್‌ ಅವರಿಗೆ ಕಪಾಳಮೋಕ್ಷಗೈದಿರುವ ಸಿಐಎಸ್‌ಎಫ್‌ನ ಮಹಿಳಾ ಸಿಬ್ಬಂದಿ ಕುಲ್ವಿಂದರ್‌ ಕೌರ್‌ ಅವರಿಗೆ ಪಂಜಾಬ್‌ನ ಉದ್ಯಮಿಯೊಬ್ಬರು ಒಂದು ಲಕ್ಷ ಬಹುಮಾನ ಘೋಷಿಸಿದ್ದಾರೆ.

ಅಲ್ಲದೆ ಪಂಚಾಬ್ ನಲ್ಲಿ ಸಿಹಿ ಲಡ್ಡು ಹಂಚಿ ಸಂಭ್ರಮಿಸಲಾಗುತ್ತಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature

HL

politics

HL

travel