ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ.. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ; ಡಿಕೆ ಸುರೇಶ್
ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ.. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ; ಡಿಕೆ ಸುರೇಶ್

ಕನಕಪುರ, (ಜೂ.10); ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೇದರಿಕೊಳ್ಳಬೇಡಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಗದ್ಗದಿತರಾದರು.

ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕನಕಪುರದ ಡಿಕೆ ಶಿವಕುಮಾರ್ ನಿವಾಸದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಡಿಕೆ ಸುರೇಶ್ ಕಣ್ಣೀರು ಹಾಕಿದ್ದಾರೆ.

ಸೋತಿದ್ದೀನಿ ಅಂತಾ ಸುಮ್ನೆ ಕೂರುವುದಿಲ್ಲ. ನಿಮ್ಮೆಲ್ಲರಿಗೂ ಒಂದು ಕೊರಗಿತ್ತು. ನಿಮ್ಮ ಮನೆಗೆ ಬರಲ್ಲ ಅಂತಿದ್ರೀ, ಇನ್ಮುಂದೆ ನಿಮ್ಮ ಮನೆಗೂ ಬರ್ತಿನಿ, ನಿಮ್ಮ ಬೀದಿಗೂ ಬರ್ತಿನಿ. ಎಲ್ಲಾ ಕೆಲಸ ಕಾರ್ಯಗಳನ್ನು ನಿಮ್ಮ ಜೊತೇಲಿ ಇದ್ದು ಮಾಡ್ತೀನಿ.

ನಾನು ಬದುಕಬೇಕು, ಬಾಳಬೇಕು ನನ್ನ ಕೆಲಸಾನೂ ನೋಡಬೇಕು. ಅದೆಲ್ಲದರ ಜೊತೆ ನಿಮ್ಮ ಕೆಲಸವನ್ನೂ ಮಾಡ್ತೀನಿ. ಧೈರ್ಯವಾಗಿರಿ ಯಾರಿಗೂ ಅಂಜಬೇಕಾಗಿಲ್ಲ, ಯಾರಿಗೂ ಹೇದರಿಕೊಳ್ಳಬೇಡಿ. ಯಾರು ಯಾರು ಏನೆಲ್ಲಾ ಮಾಡಿದ್ದಾರೆ, ಅದೆಲ್ಲವನ್ನೂ ದೇವರು ನೋಡ್ಕೊತಾನೆ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಡಿ.ಕೆ.ಸುರೇಶ್‍ಗೆ ನಿರಾಸೆಯಾಗಿದೆ. ಡಾಕ್ಟರ್ ಮಂಜುನಾಥ್ ಅವರು ಒಟ್ಟು 10,79,002 ಹಾಗೂ ಡಿ.ಕೆ.ಸುರೇಶ್ 8,09,355 ಮತಗಳನ್ನು ಪಡೆದರು. ಡಾಕ್ಟರ್ ಬರೋಬ್ಬರಿ 2,69,647 ಮತಗಳ ಅಂತರದಿಂದ ಹಾಲಿ ಸಂಸದರನ್ನು ಪರಾಭವಗೊಳಿಸಿದ್ದಾರೆ. 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature