ಮೋದಿ 3.0 ಸರ್ಕಾರ ಬರುತ್ತಿದ್ದಂತೆ ಉಗ್ರರ ದಾಳಿ; ಕಾಂಗ್ರೆಸ್ ಕಿಡಿ
ಮೋದಿ 3.0 ಸರ್ಕಾರ ಬರುತ್ತಿದ್ದಂತೆ ಉಗ್ರರ ದಾಳಿ; ಕಾಂಗ್ರೆಸ್ ಕಿಡಿ

ನವದೆಹಲಿ, (ಜೂ.10); ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಶಿವಖೋರಿಗೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಭಯೋತ್ಪಾದಕರು ಭಾನುವಾರ ದಾಳಿ ನಡೆಸಿದ್ದಾರೆ. ಈ ಘಟನೆಯ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿ ಬಿದ್ದು 10 ಮಂದಿ ಸಾವನಪ್ಪಿದ್ದಾರೆ.

ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮಾಡಿ, ಒಂದೆಡೆ ನರೇಂದ್ರ ಮೋದಿ ಮತ್ತು ಅವರ ಎನ್‌ಡಿಎ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಲವು ದೇಶಗಳ ಗಣ್ಯರು ನಮ್ಮ ದೇಶಕ್ಕೆ ಆಗಮಿಸಿದ್ದಾಗಲೂ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ನ ಮೇಲೆ ಭೀಕರ ಭಯೋತ್ಪಾದಕರ ದಾಳಿ ನಡೆದಿದೆ ಎಂದು ಭದ್ರತೆ ವಿಚಾರದ ಬಗ್ಗೆ ಖರ್ಗೆ ಪ್ರಶ್ನಿಸಿದ್ದಾರೆ.

ಈಗಿನ ಎನ್‌ಡಿಎ ಸರ್ಕಾರದಿಂದ ಶಾಂತಿ ಮತ್ತು ಸಹಜತೆಯನ್ನು ತರುವ ಎಲ್ಲಾ ಮಾತುಗಳು ಕೇವಲ ಪ್ರಚಾರದ ಪೊಳ್ಳು ಮಾತಾಗಿವೆ ಎಂದು ಟೀಕಿಸಿದ್ದಾರೆ.

ನಿಯೋಜಿತ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟ್ವಟ್ ಮಾಡಿ, ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವಖೋಡಿ ದೇವಸ್ಥಾನದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸಿನ ಮೇಲೆ ಹೇಡಿತನದ ಭಯೋತ್ಪಾದಕ ದಾಳಿ ಅತ್ಯಂತ ದುಃಖಕರವಾಗಿದೆ.

ಈ ನಾಚಿಕೆಗೇಡಿನ ಘಟನೆಯು ಜಮ್ಮು ಮತ್ತು ಕಾಶ್ಮೀರದ ಆತಂಕಕಾರಿ ಭದ್ರತಾ ಪರಿಸ್ಥಿತಿಯ ನೈಜ ಚಿತ್ರಣವಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಎಲ್ಲಾ ದುಃಖಿತ ಕುಟುಂಬಗಳಿಗೆ ನಾನು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಭಯೋತ್ಪಾದನೆ ವಿರುದ್ಧ ಇಡೀ ದೇಶ ಒಗ್ಗಟ್ಟಾಗಿ ನಿಂತಿದೆ ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature