ಕಟಿಂಗ್ ಮಾಡಿಸಲು ದುಡ್ಡಿಲ್ವಾ ಎಂದ ವಿಜಯೇಂದ್ರ.. ಕಲಾಂ ಹೇರ್ ಸ್ಟೈಲ್ ನೋಡಿದ್ದೀಯಾ ಎಂದ ಮಧು ಬಂಗಾರಪ್ಪ
ಕಟಿಂಗ್ ಮಾಡಿಸಲು ದುಡ್ಡಿಲ್ವಾ ಎಂದ ವಿಜಯೇಂದ್ರ.. ಕಲಾಂ ಹೇರ್ ಸ್ಟೈಲ್ ನೋಡಿದ್ದೀಯಾ ಎಂದ ಮಧು ಬಂಗಾರಪ್ಪ

ಬೆಂಗಳೂರು, (ಮೇ.28): ಹೇರ್‌ ಕಟ್‌ ವಿಚಾರವಾಗಿ ಉನ್ನತ ಸ್ಥಾನದಲ್ಲಿರುವ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಇಬ್ಬರು ಮಕ್ಕಳು ಮಾತಿನ ಸಮರ ನಡೆಸುವ ಮೂಲಕ ನಗೆಪಾಟಿಲಿಗೆ ಒಳಗಾಗುತ್ತಿದ್ದಾರೆ‌.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇರ್ ಕಟಿಂಗ್ ಕುರಿತು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಮಧು ಬಂಗಾರಪ್ಪ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.

ಕಟಿಂಗ್ ವಿಚಾರವಾಗಿ ವಿಜಯೇಂದ್ರಗೆ ತಿರುಗೇಟು ನೀಡಿದ್ದ ಸಚಿವ ಮಧು ಬಂಗಾರಪ್ಪ ‘ಫ್ರೀ ಇದ್ದರೆ ವಿಜಯೇಂದ್ರ ಬಂದು ಹೇರ್‌ ಕಟ್‌ ಮಾಡಲಿ’ ಎಂಬ ಹೇಳಿಕೆಗೆ ಕೌಂಟರ್ ಕೊಟ್ಟ ವಿಜಯೇಂದ್ರ, ಎಲ್ಲಾ ಹುದ್ದೆಗೆ ಅದರದ್ದೇ ಆದ ಗೌರವವಿದೆ. ಹೇರ್‌ ಕಟ್‌ ಬಗ್ಗೆ ನಾನಲ್ಲ ದಾವಣಗೆರೆಯಲ್ಲಿ ಕೆಲ ಶಿಕ್ಷಕರು ಮಾತನಾಡಿದ್ದನ್ನು ಅವರಿಗೆ ತಿಳಿಸಿದ್ದೇನೆ ಅಷ್ಟೆ. 

ಶಿಕ್ಷಣ ಸಚಿವರು ಮಾದರಿಯಾಗಿರಬೇಕು ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು. ಹೀಗಾಗಿ ಕಟಿಂಗ್ ಮಾಡಿಸಿಕೊಂಡು, ತಲೆಗೆ ಎಣ್ಣೆ ಹಚ್ಚಿ ಬನ್ನಿ ಎಂದಿದ್ದು. ಅವರ ಬಳಿ ಹಣ ಇಲ್ಲದಿದ್ದರೆ ನಮ್ಮ ಯುವ ಮೋರ್ಚಾಗೆ ಹೇಳಿ ದುಡ್ಡಿನ ವ್ಯವಸ್ಥೆ ಮಾಡಿಸುತ್ತೇವೆ ಎಂದು ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ. ಕನ್ನಡ ಬರಲ್ಲ ಎನ್ನುತ್ತಾರೆ, ಶಿಕ್ಷಕರ ತಾತ್ಕಾಲಿಕ ನೇಮಕಾತಿ ಉಸ್ತುವಾರಿಯಲ್ಲಿ ಕಾಂಟ್ರಾಕ್ಟರ್‌ಗೆ ಒಪ್ಪಿಸಿದ್ದಾರೆ. ಇಲಾಖೆಯಲ್ಲಿ ಅವಾಂತರಗಳೇ ಹೆಚ್ಚಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

ಅಬ್ದುಲ್ ಕಲಾಂ ಹೇರ್ ಸ್ಟೈಲ್ ಗೊತ್ತಾ.?; ತಮ್ಮ ಹೇರ್ ಸ್ಟೈಲಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಹೇಳಿಕೆಗೆ ವಿಚಾರವಾಗಿ ಮೈಸೂರಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತ್ರಿಕ್ರಿಯಿಸಿದ ಮಧು ಬಂಗಾರಪ್ಪ, ಅಬ್ದುಲ್ ಕಲಾಂ ಹೇರ್ ಸ್ಟೈಲ್ ನೋಡಿದ್ದೀರಾ..? 

ನಮ್ಮ ಡಿಕೆ ಶಿವಕುಮಾರ್ ಗಡ್ಡದ ಬಗ್ಗೆ ಮಾತಾಡಿ 130ರಿಂದ ಬಿಜೆಪಿ 60 ಕ್ಕೆ ಬಂದರು. ಈಗ ನನ್ನ ಕೂದಲು ಬಗ್ಗೆ ಮಾತಾಡಿ ಲೋಕಸಭಾ ಚುನಾವಣೆಯಲ್ಲಿ 26 ರಿಂದ 6 ಕ್ಕೆ ಬರುತ್ತಾರೆ ನೋಡಿ ಎಂದು ಭವಿಷ್ಯ ನುಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಗೌರವದಿಂದ ನಡೆದುಕೊಳ್ಳುವಂತದ್ದು ಕಲಿಯಬೇಕು. ಪ್ರಧಾನಿ ಮೋದಿ ಅವರು ಕೋವಿಡ್ ಟೈಂ ನಲ್ಲಿ ಗಡ್ಡ ಬಿಟ್ಟಿದ್ರು ಅದನ್ನು ಯಾಕೆ ಪ್ರಶ್ನಿಸಲಿಲ್ಲ? ಅಬ್ದುಲ್ ಕಲಾಂ ಹೇರ್ ಸ್ಟೈಲ್ ಬಗ್ಗೆ ಇದೇ ಬಿಜೆಪಿ ರಾಜ್ಯಾಧ್ಯಕ್ಷ ಏನಾದ್ರೂ ಮಾತಾಡೋಕ್ ಆಗುತ್ತಾ..?

ಅವರು ಮಾಡಿರುವ 40% ಹಣದಲ್ಲಿ ನನ್ನ ಹೇರ್ ಕಟ್ ಮಾಡೋದ್ ಬೇಡ. ನನ್ನ ಕೂದಲು ಚೆನ್ನಾಗಿದೆ. ತಲೆ ಒಳಗಿನ ಮೆದುಳು ಚೆನ್ನಾಗಿದೆ. ಅವರಂತೆ ನನಗೆ ಯಾವ ದುರ್ಬುದ್ಧಿಯೂ ಇಲ್ಲ. ಅವರಂತೆ ಛೋಟಾ ಸೈನ್ ಮಾಡುವ ವ್ಯವಹಾರ ನನಗೆ ಗೊತ್ತಿಲ್ಲ ಎಂದು ವ್ಯಂಗ್ಯಭರಿತವಾಗಿ ಗಂಭೀರ ಆರೋಪ ಮಾಡಿದರು.

ನನ್ನ ಹೇರ್ ಸ್ಟೈಲ್ ಬಗ್ಗೆ ಮಾತಾಡೋದು ಒಂದು ವಿಷಯವಾ? ಅದು ಯಾಕೆ ಅವರಿಗೆ ಸಮಸ್ಯೆಗಳ ಬಗ್ಗೆ ಮಾತಾಡೋಣ ಎಂದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature

HL

politics