elephant attack: ಆನೆ ದಾಳಿಗೆ ಗುತ್ತಿಗೆ ಕಾವಲುಗಾರನ ದುರ್ಮರಣ: ಪರಿಹಾರ ಘೋಷಣೆ
elephant attack: ಆನೆ ದಾಳಿಗೆ ಗುತ್ತಿಗೆ ಕಾವಲುಗಾರನ ದುರ್ಮರಣ: ಪರಿಹಾರ ಘೋಷಣೆ

ಬೆಂಗಳೂರು, (ಜುಲೈ.13); ಗುರುವಾರ ತಡರಾತ್ರಿ ಆನೆದಾಳಿಗೆ ಗುತ್ತಿಗೆ ಕಾವಲುಗಾರರೊಬ್ಬರು ಸಾವನ್ನಪ್ಪಿದ್ದಾರೆ. 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪಕ್ಕದ ಹಕ್ಕಿ ಪಿಕ್ಕಿ ಕಾಲೋನಿಯ 45 ವರ್ಷದ ಚಿಕ್ಕಮಾದಯ್ಯ ಮೃತಪಟ್ಟ ದುರ್ದೈವಿ.

ತಡರಾತ್ರಿ ಅರಣ್ಯ ಇಲಾಖೆ ನೀಡಿದ್ದ ಪಟಾಕಿ, ಬ್ಯಾಟರಿಯನ್ನಷ್ಟೇ ಹಿಡಿದು ಕಾಡಿಗಿಳಿದಿದ್ದ ಚಿಕ್ಕಮಾದಯ್ಯ ಕರ್ತವ್ಯ ನಿರತ ವಾಗಿರುವಾಗಲೇ ಆನೆ ದಾಳಿಗೆ ಒಳಗಾಗಿದ್ದಾರೆ.

ರಾತ್ರಿ ಪಾಳಿಯಲ್ಲಿ ಅರಣ್ಯದಲ್ಲಿನ ಕಾಡು ಮೃಗಗಳ ನಡುವೆ ಜೀವ ಹಿಡಿದು ಹೋರಾಡುವ ಇಂತಹ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಟ ರಕ್ಷಣೆಗೂ ಒಂದು ಅಸ್ತ್ರ ಇಲ್ಲದಿರುವುದು ನಾಗರಿಕ ವಲಯದಲ್ಲಿ ಚರ್ಚೆಗೆ ಒಳಗಾಗುತ್ತಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗಷ್ಟೇ ಕರಡಿ ದಾಳಿಗೆ ಪ್ರಾಣಿ ಪಾಲಕ ಗಂಭೀರ ಗಾಯಗೊಂಡು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದನ್ನು ಮರೆಯುವ ಮುನ್ನ, ಇಂತಹ ಘಟನೆಗಳು ಬನ್ನೇರುಘಟ್ಟ ಅರಣ್ಯದ ಸುತ್ತಲ ಗ್ರಾಮಸ್ಥರಿಗೆ ಭೀತಿ ಮೂಡಿಸಿದೆ.

ಪರಿಹಾರ: ಬನ್ನೇರುಘಟ್ಟ ವನ್ಯಜೀವಿ ವಲಯದ ಕಲ್ಕೆರೆ ಗಸ್ತಿನಲ್ಲಿ ಕಾವಲು ಕಾಯುವಾಗ ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಸಿಬ್ಬಂದಿ ಮಾದಣ್ಣ ನಿಧನಕ್ಕೆ ಸಂತಾಪ ಸೂಚಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಮೃತರ ಕುಟುಂಬಕ್ಕೆ ಒಂದು ವಾರದೊಳಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಬಳಿ ಮೃತ ಮಾದಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದ ಈಶ್ವರ್​ ಖಂಡ್ರೆ, ಆನೆಗಳ ಇರುವಿಕೆಯನ್ನು ತಿಳಿಯುವಲ್ಲಿ ನೈಪುಣ್ಯತೆ ಹೊಂದಿದ್ದ ಮಾದಣ್ಣ ನಿಧನದಿಂದ ಇಲಾಖೆ ಒಬ್ಬ ಪ್ರಾಮಾಣಿಕ ಸಿಬ್ಬಂದಿಯನ್ನು ಕಳೆದುಕೊಂಡಿದೆ ಎಂದಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime