ಗಮನಿಸಿ: ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳು
ಗಮನಿಸಿ: ಹಿರಿಯ ನಾಗರಿಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆ, (ಜುಲೈ 11): ಹಿರಿಯ ನಾಗರಿಕರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವತಿಯಿಂದ ವಿವಿಧ ಇಲಾಖೆಗಳಡಿ ದೊರೆಯುತ್ತಿರುವ ಸೌಲಭ್ಯಗಳು.

ರಾಜ್ಯ ಹಿರಿಯ ನಾಗರಿಕ ಸಹಾಯವಾಣಿ: ಹಿರಿಯ ನಾಗರಿಕರ ತುರ್ತು ಸಹಾಯಕ್ಕಾಗಿ ಅವರ ಸಮಸ್ಯೆಗಳನ್ನು ಬಗೆ ಹರಿಸಲು ಕಾನೂನು ಸಲಹೆಗಳನ್ನು ಆರೋಗ್ಯ/ಕೌಟುಂಬಿಕ/ಆರ್ಥಿಕ ಸಮಸ್ಯೆಗಳನ್ನು ಹೊಂದಿರುವ, ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಒಳಗಾದಂತಹ ಹಿರಿಯ ನಾಗರಿಕರು ಮಾಹಿತಿ, ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಮತ್ತು ಹಿರಿಯ ನಾಗರಿಕರಿಗೆ ತಮ್ಮ ಕುಟುಂಬಗಳಿಂದ ಮತ್ತು ಸಮಾಜದಿಂದ ಯಾವುದೇ ಶೋಷಣೆ ಒಳಗಾದವರಿಗೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.

ಸಹಾಯವಾಣಿ ಕೇಂದ್ರಗಳ ಕರ್ತವ್ಯಗಳು

•ಹಿರಿಯ ನಾಗರಿಕರಿಗೆ ಟೋಲ್ ಫ್ರೀ ನಂ 1090 ಸರಿಯಾದ ರೀತಿಯಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವುದು.

•ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳು 24/7 ಗಂಟೆಗಳ ಸೇವೆ ಸಲ್ಲಿಸುವುದು.

•60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಿನಿಯರ್ ಸಿಟಿಜನ್ ಕಾರ್ಡ್/ಹಿರಿಯ ನಾಗರಿಕರ ಗುರುತಿನ ಚೀಟಿ ಮಾಡಿಸಲು ತಿಳಿಸುವುದು.

•ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯಗಳಾದ ಪಿಂಚಣಿ, ಶೇ.25ರಷ್ಟು ರಿಯಾಯಿತಿ ದರದಲ್ಲಿ ದೊರೆಯುವ ಬಸ್ ಟಿಕೆಟ್ ಹಾಗೂ ರೈಲು ಟಿಕೆಟ್ ಗಳ ಬಗ್ಗೆ ಮತ್ತು ಹಿರಿಯ ನಾಗರಿಕರಿಗೆ ದೊರೆಯುವ ಇನ್ನಿತರ ಸೌಲಭ್ಯಗಳ ಅರಿವು ಮೂಡಿಸುವುದು ಮತ್ತು ಮಾರ್ಗದರ್ಶನ ನೀಡುವುದು.

•ಹಿರಿಯ ನಾಗರಿಕರ ರಕ್ಷಣೆಗಾಗಿ ಉಚಿತ ಕಾನೂನು ಸಲಹೆ, ಆಪ್ತ ಸಲಹೆ ನೀಡಲು ಹಾಗೂ ಸಂಸ್ಥೆಗಳ ತುರ್ತು ಸ್ಪಂದನೆಗಾಗಿ ದಿನದ 24 ಗಂಟೆಯು ಕಾರ್ಯನಿರ್ವಹಿಸುತ್ತಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯ ಆವರಣದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗಿರುತ್ತದೆ.

•ಹಿರಿಯ ನಾಗರಿಕರು ಮಾಹಿತಿ, ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಈ ಕೇಂದ್ರವನ್ನು ಸಂಪರ್ಕಿಸುವುದು.

•ಹಿರಿಯ ನಾಗರಿಕರಿಗೆ ಅವರ ಉತ್ತರಾಧಿಕಾರಿಗಳು ಅವರನ್ನು ಸರಿಯಾಗಿ ಪಾಲನೆ ಮಾಡದಿರುವ ಕುರಿತು, ಆಸ್ತಿಗೆ ಸಂಬಂಧಿಸಿದಂತೆ ದಾನ ಪತ್ರ ಮುಂತಾದ ವಿಷಯಗಳಲ್ಲಿ ನ್ಯಾಯ ಒದಗಿಸುವಂತೆ ಕೋರಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳಿಗೆ ದೂರು ಸಲ್ಲಿಸಿದ್ದಲ್ಲಿ ಅಂತಹ ಪ್ರಕರಣಗಳನ್ನು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಮೂಲಕ ಹಿರಿಯ ನಾಗರಿಕರಿಗೆ ಕಂದಾಯ ಉಪವಿಭಾಗಗಳಲ್ಲಿ ನಿರ್ವಹಣಾ ನ್ಯಾಯಾಲಯ ಮಂಡಳಿಗಳ ಮೂಲಕ ಹಿರಿಯ ನಾಗರಿಕರಿಗೆ ಸಹಾಯ ಒದಗಿಸುವುದು,  ಕಂದಾಯ ಉಪವಿಭಾಗದಲ್ಲಿ ಹಿರಿಯ ನಾಗರಿಕರಿಗೆ ಒಂದು ವೇಳೆ ನ್ಯಾಯ ದೊರೆಯದೇ ಇದ್ದಲ್ಲಿ ಅಂತಹ ಹಿರಿಯ ನಾಗರಿಕರನ್ನು ಮೇಲ್ಮನವಿ ನಿರ್ವಹಣಾ ನ್ಯಾಯ ಮಂಡಳಿಗೆ (ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ) ಪ್ರಕರಣವನ್ನು ದಾಖಲಿಸುವುದು.

•ಹಿರಿಯ ನಾಗರಿಕರ ಸಹಾಯವಾಣಿ ಇರುವ ಬಗ್ಗೆ ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡುವುದು ಇದರ ಮೂಲ ಉದ್ದೇಶವಾಗಿರುತ್ತದೆ.

ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಪೊಲೀಸ್ ಉಪಾಧೀಕ್ಷಕರ ಕಛೇರಿಯ ಅವರಣ ದೊಡ್ಡಬಳ್ಳಾಪುರ ಇಲ್ಲಿ ಸರ್ವೋದಯ ಸರ್ವೀಸ್ ಸೊಸೈಟಿ ರವರ ವತಿಯಿಂದ ರಾಜ್ಯ ಸರ್ಕಾರದ ಅನುದಾನದಡಿ ನಡೆಸಲಾಗುತ್ತಿದೆ.

ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳು: ಹಿರಿಯ ನಾಗರಿಕರಿಗೆ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು, ಹಿರಿಯರಲ್ಲಿ ಅಡಗಿರುವ ಸಂಪನ್ಮೂಲ ಶಕ್ತಿಯನ್ನು ಉಪಯೋಗಿಸಿಕೊಂಡು ಅವರ ಸಮಯವನ್ನು ಸದುಪಯೋಗ ಪಡಿಸಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಹಗಲು ಯೋಗಕ್ಷೇಮ ಕೇಂದ್ರಗಳನ್ನು ರಾಜ್ಯದ 30 ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲು ಉದ್ದೇಶಿಸಲಾಗಿರುತ್ತದೆ.

ಪ್ರತಿ ಕೇಂದ್ರದಲ್ಲಿ 150 ವಯೋವೃದ್ಧರು ಬಂದು ಹೋಗಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹಿರಿಯ ನಾಗರಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ, ಸಲಹೆ, ಮಾರ್ಗದರ್ಶನ, ಮನೋರಂಜನೆ, ಕ್ರೀಡೆ ಇತರೆ ಚಟುವಟಿಕೆಗಳನ್ನು ಈ ಕೇಂದ್ರದಲ್ಲಿ ನಡೆಸಲಾಗುತ್ತಿದೆ.

•ಹಿರಿಯ ನಾಗರಿಕರು 60ರ ನಂತರ ಮನೆಗಳಲ್ಲಿ ಒಂಟಿಯಾಗಿ ಕಾಲ ಕಳೆಯುವ ಬದಲು ಸಮಾನ ವಯಸ್ಕ/ಚಿಂತಕರೊಂದಿಗೆ ತಮ್ಮ ಯೋಚನೆಗಳನ್ನು ಹಂಚಿಕೊಳ್ಳುವುದರ ಮೂಲಕ ಹಿರಿಯ ನಾಗರಿಕರನ್ನು ಸಕ್ರಿಯಗೊಳಿಸುವುದು ಹಗಲು ಯೋಗಕ್ಷೇಮ ಕೇಂದ್ರಗಳ ಮೂಲ ಉದ್ದೇಶವಾಗಿದೆ.

•ಕೇಂದ್ರಕ್ಕೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ ಆರೋಗ್ಯ ತಪಸಣಾ ಶಿಬಿರಗಳನ್ನು ಏರ್ಪಡಿಸುವುದು.

• ಕೇಂದ್ರಕ್ಕೆ ಭೇಟಿ ನೀಡುವ ಹಿರಿಯ ನಾಗರಿಕರ ಮನೋರಂಜನೆಗಾಗಿ ದಿನಪತ್ರಿಕೆಗಳು, ದೃಶ್ಯ ಮಾಧ್ಯಮಗಳ ಸೌಲಭ್ಯ ಕಲ್ಪಿಸುವುದು.

• ಕೇಂದ್ರಕ್ಕೆ ಭೇಟಿ ನೀಡುವ ಹಿರಿಯ ನಾಗರಿಕರ ದೈಹಿಕ ಚಟುವಟಿಕೆಗಳಿಗಾಗಿ ಕ್ರೀಡೆಗಳನ್ನು ಏರ್ಪಡಿಸುವುದು.

• ಕೇಂದ್ರಕ್ಕೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ ಲಘು ಉಪಹಾರ ಒದಗಿಸುವುದು.

ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ರೋಜಿಪುರ ಕೋರ್ಟ್ ರಸ್ತೆ, ದೊಡ್ಡಬಳ್ಳಾಪುರ ಟೌನ್ನಲ್ಲಿ ಗ್ರಾಮೀಣ ಅಭ್ಯುದಯ ಸೇವಾ ಸಂಸ್ಥೆ ರವರ ವತಿಯಿಂದ ರಾಜ್ಯ ಸರ್ಕಾರದ ಅನುದಾನದಡಿ ನಡೆಸಲಾಗುತ್ತಿದೆ.

ವೃದ್ಧಾಶ್ರಮಗಳು: ತಮ್ಮ ಜಿಲ್ಲೆಗಳಲ್ಲಿನ ನಿರ್ಗತಿಕ ವೃದ್ಧ ಫಲಾನುಭವಿಗಳನ್ನು ವೃದ್ಧಾಶ್ರಮಗಳಿಗೆ ಸೇರಿಸಿಕೊಂಡು ಅವರಿಗೆ ಮೂಲಭೂತ ಸೌಕರ್ಯ, ಆರೋಗ್ಯ ತಪಾಸಣೆ, ಮಲಗಲು ಕೊಠಡಿ, ಹಾಗೂ ಊಟದ ವ್ಯವಸ್ಥೆಯನ್ನು ಅಲ್ಲಿನ ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ, ಹಿರಿಯ ನಾಗರಿಕರ ಗುರುತಿನ ಚೀಟಿ, ಆಧಾರ ಕಾರ್ಡ್ ಇಲ್ಲದೇ ಇರುವವರಿಗೆ ಆಧಾರನ್ನು ಮಾಡಿಸುವುದು ವೃದ್ಧಾಶ್ರಮದ ಮೂಲ ಉದ್ದೇಶವಾಗಿದೆ.

•ಅನಾರೋಗ್ಯ ಹೊಂದಿರುವ ಹಿರಿಯ ನಾಗರಿಕರಿಗೆ ಪ್ರತ್ಯೇಕ ಕೊಠಡಿಗಳನ್ನು, ಹಾಸಿಗೆ, ಕಂಬಳಿ ಬೆಟ್ಶೀಟ್ಗಳು ಕಲ್ಪಿಸುವುದು.

•ಹಿರಿಯ ನಾಗರಿಕರ ಪಾಲನೆ-ಪೋಷಣೆ ಮಾಡಲು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವುದು.

•ಒಂದು ವೇಳೆ ಕುಟುಂಬದಿಂದ ಹಿರಿಯರನ್ನು ಹೊರಗೆ ಹಾಕಿರುವ ಪ್ರಸಂಗಗಳು ಇದ್ದು ಅಂತಹ ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಇದರೆ ಅಂತಹ ನ್ಯಾಯ ಒದಗಿಸಲು ಹಿರಿಯ ನಾಗರಿಕರ ಸಹಾಯವಾಣಿಗಳ ಮೂಲಕ ಸಹಾಯ ಮಾಡುವುದು. 

•ಹಿರಿಯ ನಾಗರಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಒದಗಿಸುವುದು.

ಹಿರಿಯ ನಾಗರಿಕರ ರಾಜ್ಯ ನೀತಿಯ ಉದ್ದೇಶಗಳು

•ವಯಸ್ಸಾದವರ ಒಳಿತನ್ನು ಕಾಪಾಡುವುದು.

•ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ, ಆರೋಗ್ಯ ಪಾಲನೆ ಆಶ್ರಯ ಮತ್ತು ಅವರ ಕಲ್ಯಾಣಕ್ಕಾಗಿ ಅವರನ್ನು ನಿಂದಿಸುವವರ ಮತ್ತು ಅನುಚಿತ ಉಪಯೋಗ ಪಡೆದುಕೊಳ್ಳುವವರಿಂದ ರಕ್ಷಣೆ ಒದಗಿಸಲು ಮತ್ತು ಇತರೆ ಅವಶ್ಯಕತೆಗಳನ್ನು ಪೂರೈಸಲು ಬೆಂಬಲ ನೀಡುವುದು. 

•ಗ್ರಾಮಾಂತರ ಪ್ರದೇಶಗಳಲ್ಲಿ ವಾಸಿಸುತ್ತಿರುವ ವೈದ್ಯರಿಗೆ ನಗರ ಪ್ರದೇಶಗಳಲ್ಲಿ ಇರುವಂತೆ ಸಮಾನ ಅವಕಾಶಗಳನ್ನು ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸುವುದು.

•ಹಿರಿಯ ನಾಗರಿಕರು ರಚನಾತ್ಮಕ ಸುಭೀಕ್ಷ ಮತ್ತು ತೃಪ್ತಿಕರ ಜೀವನ ನಡೆಸಲು ಅವಕಾಶಗಳನ್ನು ನೀಡುವುದು. 

•ಈ ನೀತಿಯು ವಯಸ್ಸಾದ ಬಡ ವ್ಯಕ್ತಿಗಳ ಕಲ್ಯಾಣಕ್ಕಾಗಿ ಆಯವ್ಯಯ ಹಂಚಿಕೆಯನ್ನು ಮಾಡುವ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ.

•ವಯೋಮಾನ ಸಂಘಟಿತ ಸಮಾಜವನ್ನು ಹೊಂದುವ ಗುರಿಯನ್ನು ಹೊಂದಿದೆ.

•ವಯಸ್ಸಾದ ವ್ಯಕ್ತಿಗಳು ಸಹ ಸಂಪನ್ಮೂಲ ವ್ಯಕ್ತಿಗಳ ಜೊತೆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಉಪಯುಕ್ತ ಮಾಹಿತಿಯನ್ನು ಸಲ್ಲಿಸುತ್ತಾರೆ ಎಂಬುದನ್ನು ರಾಜ್ಯವು ಗುರುತಿಸುತ್ತದೆ.

*ತಂದೆ, ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ ಪೋಷಣೆ ಮತ್ತು ಕಲ್ಯಾಣಕ್ಕಾಗಿ ಕಾಯ್ದೆ-2007 ಮತ್ತು ಅಧಿನಿಯಮ 2009ರ ಪ್ರಮುಖ ಅಂಶಗಳು:*

•ಕಾಯ್ದೆಯ ಸೆಕ್ಷನ್ 7(1)&(2) ರಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ಉಪವಿಭಾಗದಲ್ಲಿ ನಿರ್ವಹಣಾ ನ್ಯಾಯ ಮಂಡಳಿಯನ್ನು ರಚಿಸಿದೆ.

•ಕಾಯ್ದೆಯ ಸೆಕ್ಷನ್ 15(1)ರಲ್ಲಿ ಉಪ ವಿಭಾಗಾಧಿಕಾರಿಗಳು ನೀಡಿದ ತೀರ್ಪಿನ ವಿರುದ್ಧ ಹಿರಿಯ ನಾಗರಿಕರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ ದೂರು ದಾಖಲಿಸಬಹುದು.

•ಕಾಯ್ದೆಯ ಸೆಕ್ಷನ್ 9(2)ರಲ್ಲಿ ಹಿರಿಯ ನಾಗರಿಕರನ್ನು ಅವರ ಮಕ್ಕಳು ನಿರ್ಲಕ್ಷಿಸಿದಲ್ಲಿ ಉಪ ವಿಭಾಗಾಧಿಕಾರಿಗಳು ಹಿರಿಯ ನಾಗರಿಕರ ಪರವಾಗಿ ಗರಿಷ್ಟ ರೂ.10,000/-ಗಳ ಮಾಸಿಕ ನಿರ್ವಹಣಾ ಭತ್ಯೆ ನೀಡುವಂತೆ ಅವರ ಮಕ್ಕಳಿಗೆ ಆದೇಶ ಹೊರಡಿಸಬಹುದಾಗಿದೆ.

•ಕಾಯ್ದೆಯ ಸೆಕ್ಷನ್ 24ರಲ್ಲಿ ನಿರ್ವಹಣಾ ನ್ಯಾಯ ಮಂಡಳಿಯ ತೀರ್ಪನ್ನು ಉಲ್ಲಂಘಿಸಿದ್ದಲ್ಲಿ ಅವರ ಮಕ್ಕಳಿಗೆ ಗರಿಷ್ಠ 3 ತಿಂಗಳ ಜೈಲುವಾಸ ಅಥವಾ ರೂ.5000/- ದಂಡ ಅಥವಾ ಎರಡು ಶಿಕ್ಷೆಯನ್ನು ವಿಧಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಕಛೇರಿ, ನಂ.3 ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ಈ ವಿಳಾಸ ಹಾಗೂ ವಿಕಲಚೇತನರ ಸಹಾಯವಾಣಿ ಕೇಂದ್ರದ ದೂ.ಸಂ-08029787441 ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others