ವಿರಕ್ತಮಠ ಸಿದ್ದರಾಮ ಮಹಾಸ್ವಾಮೀಜಿ ಸಾವಿಗೆ ಟ್ವಿಸ್ಟ್..!: ಕಾರು ಚಾಲಕನಿಂದ ದೂರು
ವಿರಕ್ತಮಠ ಸಿದ್ದರಾಮ ಮಹಾಸ್ವಾಮೀಜಿ ಸಾವಿಗೆ ಟ್ವಿಸ್ಟ್..!: ಕಾರು ಚಾಲಕನಿಂದ ದೂರು

ಕಲಬುರಗಿ, (ಜುಲೈ.09): ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ವಿರಕ್ತ ಮಠದ ಶ್ರೀ ಸಿದ್ದರಾಮ ಮಹಾಸ್ವಾಮೀಜಿಯವರು ಸೋಮ ವಾರ ಮುಂಜಾನೆ ಮಠದ ತಮ್ಮ ರೂಮಿನಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಮೃತರ ಅಂತ್ಯಕ್ರಿಯೆ ಲಿಂಗಾಯತ ವೀರಶೈವ ಧರ್ಮದ ಶರಣ ಪರಂಪರೆಯ ಧಾರ್ಮಿಕ ವಿಧಿವಿಧಾನ ಪ್ರಕಾರ ಸಂಜೆ 4 ಗಂಟೆಗೆ ನೆರವೇರಿತು.

ಆರಂಭದಲ್ಲಿ ಹೃದಯಾಘಾತಕ್ಕೊಳಗಾಗಿ ಅವರು ಮೃತಪಟ್ಟಿ ದ್ದಾರೆ ಎಂದು ಮಠದ ಭಕ್ತರು ಮಾಹಿತಿ ನೀಡಿದ್ದರು. ಆದರೆ, ಸ್ವಾಮೀಜಿಯವರ ಕಾರು ಚಾಲಕ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದು, ಸ್ವಾಮೀಜಿ ಗಂಟಲು ನೋವಿನಿಂದ ಬಳಲುತ್ತಿದ್ದರು. ಇದರಿಂದಾಗಿ ತುಂಬ ವ್ಯಾಕುಲರಾಗಿದ್ದರು. ಇದೇ ಕಾರಣದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಕಲಬುರಗಿ ನೂತನ ಪೊಲೀಸ್ ವರಿಷ್ಠಾಧಿಕಾರಿ ಅಷ್ಟೂರು ಶ್ರೀನಿವಾಸುಲು, ಸ್ವಾಮೀಜಿಯ ಆತ್ಮಹತ್ಯೆ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

ಭಾನುವಾರ ಸಂಜೆ ರಟಕಲ್‌ನಲ್ಲಿ ಅವರು ಬಸವಾದಿ ಶರಣರ ವಚನ ಸಂಗಮ ಆಯೋಜಿಸಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮತ್ತಿತರ ಮುಖಂಡರು ಪಾಲ್ಗೊಂಡಿದರು.

ಕಾರ್ಯಕ್ರಮದ ಬಳಿಕ ತಮ್ಮ ರೂಮಿಗೆ ಹೋದವರು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಶ್ರೀಗಳು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ್ ಗ್ರಾಮದವರಾಗಿದ್ದು, 2017ರಿಂದ ಸ್ವಾಮೀಜಿಗಳಾಗಿ ರಟಕಲ್ ವಿರಕ್ತ ಮಠದಲ್ಲಿ ನೆಲೆಸಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

others

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime