Love ಬ್ರೇಕ್‌ ಅಪ್‌ ಆಗಿದ್ದಕ್ಕೆ ಅವಳು ಆಸ್ಪತ್ರೆಗೆ.. ಇವನು ಮಸಣಕ್ಕೆ..!
Love ಬ್ರೇಕ್‌ ಅಪ್‌ ಆಗಿದ್ದಕ್ಕೆ ಅವಳು ಆಸ್ಪತ್ರೆಗೆ.. ಇವನು ಮಸಣಕ್ಕೆ..!

ಕೋಲ್ಕತ್ತಾ, (ಜುಲೈ.05); ಲವ್ ಬ್ರೇಕ್‌ ಅಪ್‌ ಮಾಡಿಕೊಂಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಲೇಕ್ ಗಾರ್ಡನ್ಸ್ ಪ್ರದೇಶದ ಅತಿಥಿ ಗೃಹದಲ್ಲಿ  ನಡೆದಿದೆ. ಆದರೆ ಅದೃಷ್ಟವಶಾತ್‌ ಗೆಳತಿ ಸಾವಿನಿಂದ ಪಾರಾಗಿದ್ದಾಳೆ.

ರಾಕೇಶ್ ಕುಮಾರ್ ಶಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಿಕ್ಕು ಕುಮಾರಿ ದುಬೆ ಸಾವಿನಿಂದ ಪಾರಾದ ಮಹಿಳೆ. 

ಇಬ್ಬರು ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಡ್ಜ್ ನಿವಾಸಿಗಳಾಗಿದ್ದು,  ರಾಕೇಶ್‌ ಕುಮಾರ್‌ ಜೊತೆಗೆ ನಿಕ್ಕು ಕುಮಾರಿ ಸುಮಾರು 7 ವರ್ಷಗಳಿಂದ ಒಟ್ಟಿಗೆ ಇದ್ದರು. ಆದರೆ ಆಕೆ ಬ್ರೇಕ್‌ ಅಪ್‌ ಮಾಡಿಕೊಳ್ಳಲು ಹೇಳಿದ್ದಾಳೆ.

ಇದರಿಂದ ಕೋಪಗೊಂಡ ರಾಕೇಶ್ ನಿಕ್ಕುನನ್ನು ಕೊಲ್ಲಲು ಗುಂಡು ಹಾರಿಸಿದ್ದಾನೆ. ನಂತರ ನಿಕ್ಕು ಮೃತಪಟ್ಟಿದ್ದಾಳೆ ಎಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಕೋಲ್ಕತ್ತಾದ ಅತಿಥಿ ಗೃಹದಲ್ಲಿ ಗುಂಡಿನ ಸದ್ದು ಕೇಳಿ ಸಿಬ್ಬಂದಿ ಧಾವಿಸಿದ್ದಾರೆ. ಈ ವೇಳೆ ರಾಕೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದ. ಇನ್ನೊಂದೆಡೆ ಗಂಭೀರ ಗಾಯಗೊಂಡಿದ್ದ ನಿಕ್ಕುರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಕೆಯ ಹೊಟ್ಟೆ ಮತ್ತು ತೊಡೆಯ ಭಾಗಕ್ಕೆ ಗುಂಡು ತಗುಲಿದೆ ಎಂದು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

others

HL

politics

HL

crime

HL

crime

HL

politics

HL

crime

HL

crime

HL

others

HL

economy

HL

economy

HL

travel

HL

health

HL

others

HL

politics

HL

others

HL

health

HL

crime

HL

others

HL

others

HL

politics

HL

others

HL

others

HL

politics

HL

others

HL

crime

HL

others

HL

others

HL

politics

HL

politics