T20 ವಿಶ್ವವಿಜೇತರ ದರ್ಶನಕ್ಕೆ ಜನಸಾಗರ: ವೈರಲ್ ವಿಡಿಯೋ ನೋಡಿ
T20 ವಿಶ್ವವಿಜೇತರ ದರ್ಶನಕ್ಕೆ ಜನಸಾಗರ: ವೈರಲ್ ವಿಡಿಯೋ ನೋಡಿ

ಮುಂಬಯಿ, (ಜುಲೈ.05): 17 ವರ್ಷಗಳ ಬಳಿಕ ಟಿ-20 ವಿಶ್ವಕಪ್ ಗೆದ್ದು ಸ್ವದೇಶಕ್ಕೆ ಮರಳಿದ ಭಾರತ ತಂಡಕ್ಕೆ ತವರು ನೆಲದಲ್ಲಿ ಅಭೂತಪೂರ್ವ ಸ್ವಾಗತ ನೀಡಲಾಯಿತು.

ಮುಂಬಯಿನ ಮರೈನ್ ಡ್ರೈವ್ ರಸ್ತೆಯಲ್ಲಿ ತೆರೆದ ಬಸ್‌ನಲ್ಲಿ ಆಗಮಿಸಿದ ಟೀಮ್ ಇಂಡಿಯಾ ಸದಸ್ಯ ರನ್ನು ಸುರಿವ ಮಳೆಯನ್ನೂ ಲೆಕ್ಕಿಸದೇ ಲಕ್ಷಾಂತರ ಕ್ರೀಡಾಭಿಮಾನಿಗಳು ಎದುರುಗೊಂಡರು. 

ಎರಡೂವರೆ ಕಿ.ಮೀ ಉದ್ದದ ಅಭೂತಪೂರ್ವ ರೋಡ್ ಶೋನಲ್ಲಿ ಸೇರಿದ ಜನಸಾಗರ ರೋಹಿತ್ ಪಡೆ ಅಭಿಮಾನದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿತು.

ಗುರುವಾರ ಬೆಳಗ್ಗೆ 10 ಗಂಟೆಗೆ ಬಾರ್ಬಡೋಸ್ ನಿಂದ ದೆಹಲಿಗೆ ಬಂದಿಳಿದ ಭಾರತ ತಂಡಕ್ಕೆ ಅಭಿ ಮಾನಿಗಳಿಂದ ಭರ್ಜರಿ ಸ್ವಾಗತ ದೊರೆಯಿತು. 11 ಗಂಟೆಗೆ ವಿಜೇತ ತಂಡದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದರು.

ವಿಶ್ವವಿಜೇತರೊಂದಿಗೆ ಉಪಾಹಾರ ಸಭೆ ನಡೆಸಿದ ಪ್ರಧಾನಿ, ಎಲ್ಲ ಆಟಗಾರರ ಬೆನ್ನು ತಟ್ಟಿ ಅಭಿನಂದಿ ಸಿದರು. ಈ ವೇಳೆ ಭಾರತ ತಂಡವು ಮೋದಿ ಅವರಿಗೆ ಟ್ರೋಫಿಯನ್ನು ಸಮರ್ಪಿಸಿದರು.

ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ವಿಶ್ವಕಪ್ ಹಿಡಿದು ಮೋದಿ ಫೋಟೋ ಗಳಿಗೆ ಪೋಸ್ ನೀಡಿದರು. ಬಳಿಕ ಮುಂಬೈಗೆ ತೆರಳಿದ ಭಾರತ ತಂಡಕ್ಕೆ ಭರ್ಜರಿ ಸ್ವಾಗತ ಕಾದಿತ್ತು.

ಸಂಜೆ ವೇಳೆಗೆ ನಾರೀಮನ್ ಪಾಯಿಂಟ್‌ನಿಂದ ಮರೈನ್‌ ಡ್ರೈವ್‌ ರಸ್ತೆಯಲ್ಲಿ ತೆರೆದ ಬಸ್‌ನಲ್ಲಿ ಸಾಗಿದ ಎರಡೂವರೆ ಕಿ.ಮೀ ಉದ್ದದ ಅಭೂತಪೂರ್ವ ರೋಡ್ ಶೋನಲ್ಲಿ ಲಕ್ಷಾಂತರ ಕ್ರೀಡಾಭಿಮಾನಿಗಳು ಪಾಲ್ಗೊಂಡು ರೋಹಿತ್ ಪಡೆಗೆ ಅಭಿನಂದನೆಗಳ ಸುರಿಮಳೆ ಸುರಿಸಿದರು. ಬಿಸಿಸಿಐ ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಈ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡರು.

ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಗೊಂಡ ಜನಸ್ತೋಮ ವಿಶ್ವಕಪ್‌ ವಿಜೇತರನ್ನು ಕಣ್ಣುಂಬಿಕೊಂಡಿತು. ಈ ಬಳಿಕ ವಾಂಖೆಡೆಯಲ್ಲಿ ಬಿಸಿಸಿಐ ಘೋಷಿಸಿದ್ದ 125 ಕೋಟಿ ಬಹುಮಾನವನ್ನು ನೀಡಲಾಯಿತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

health

HL

others

HL

politics

HL

crime

HL

crime

HL

politics

HL

crime

HL

crime

HL

others

HL

economy

HL

economy

HL

travel

HL

health

HL

others

HL

politics

HL

others

HL

health

HL

crime

HL

others

HL

others

HL

politics

HL

others

HL

others

HL

politics

HL

others

HL

crime

HL

others

HL

others

HL

politics

HL

politics