ಬದುಕು ಸ್ವರ್ಗದಂತಿರಬೇಕಾದರೆ ಮಕ್ಕಳನ್ನು ಸನ್ಮಾರ್ಗದಲ್ಲಿ  ಬೆಳಸಿದಾಗ ಮಾತ್ರ ಸಾಧ್ಯ: ಚುಂಚಶ್ರೀ
ಬದುಕು ಸ್ವರ್ಗದಂತಿರಬೇಕಾದರೆ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳಸಿದಾಗ ಮಾತ್ರ ಸಾಧ್ಯ: ಚುಂಚಶ್ರೀ

ಚಿಕ್ಕಬಳ್ಳಾಪುರ, (ಜುಲೈ.04); ಬದುಕು ಸ್ವರ್ಗದಂತಿರಬೇಕಾದರೆ ಮಕ್ಕಳನ್ನು ಸನ್ಮಾರ್ಗದಲ್ಲಿ  ಬೆಳಸಿದಾಗ ಅವರಿಂದ ಸ್ವರ್ಗ ಮತ್ತು ಮೋಕ್ಷ ದೊರೆಯುತ್ತದೆ. ಮಗುವಿಗೆ ಜನ್ಮಸ್ಥಳವೇ ಮೊದಲ ಪಾಠಶಾಲೆ, ಜನ್ಮದಾತೆ ತಾಯಿಯೇ ಮೊದಲ ಗುರು, ಶಾಲೆ ಮತ್ತು ಗುರು ಮಕ್ಕಳಿಗೆ ವಿದ್ಯೆಮತ್ತು ಬುದ್ದಿ ನೀಡುವ ಎರಡನೇ ಶಾಲೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ  ಬಿಜಿಎಸ್ ವರ್ಲ್ವ್ ಸ್ಕೂಲ್, ಬಿಜಿಎಸ್ ಆಂಗ್ಲಶಾಲೆ ಅಗಲಗುರ್ಕಿ ಮತ್ತು ಬಿಜಿಎಸ್ ಶಾಲೆ ಮಂಚನಬಲೆಯ ಶಿಕ್ಷಣ ಸಂಸ್ಥೆಗಳ  300 ಪುಟಾಣಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಪ್ರಥಮ ಅಕ್ಷರಾಭ್ಯಾಸದ ಕಾರ್ಯಕ್ರಮ ಜ್ಞಾನಾಂಕುರ - 2024ರ ಸಮಾರಂಭದಲ್ಲಿ  ಆಶೀರ್ವಚನ ನೀಡಿ ಅವರು ಮಾತನಾಡಿದರು.

ಮಕ್ಕಳ ಮನಸ್ಸು ತುಂಬಾ ಸೂಕ್ಮವಾಗಿರುತ್ತದೆ. ಪೋಷಕರು ಎನು ಮಾಡುತ್ತಾರೂ ಅದು ಮಕ್ಕಳ ಮನಸ್ಸಿಗೆ ನಾಟುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಜಗಳ, ಮುನಿಸು, ಬೈಗುಳಗಳಂತಹುದನ್ನು ಮಾಡಬೇಡಿ, ಮಾಡಿದರೆ ನಿಮ್ಮ ಮಗು ನಾಳೆ ಅದನ್ನೆ ಮಾಡುತ್ತದೆ. ಹಾಗೇನಾದರೂ ಮಾಡುವುದಿದ್ದರೆ ಮಕ್ಕಳಿಲ್ಲದಾಗ ನೀವಿಬ್ಬರೆ ಇದ್ದಾಗ ಮಾಡಿಕೊಳ್ಳಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ಮಕ್ಕಳು ಮೊದಲ ತಪ್ಪಿಗೆ ಹೆತ್ತವರು ಶಿಕ್ಷೆ ನೀಡಿದರೆ ಮುಂದೆ ಆ ಮಕ್ಕಳು ತಪ್ಪು ಮಾಡಲು ಹೆದರುತ್ತವೆ. ಎಲ್ಲಾ ಮಕ್ಕಳಿಗೂ ಸಂಸ್ಕಾರ ಜನ್ಮದಿಂದಲೇ ಮನಸ್ಸಿನಲ್ಲೇ ಇರುತ್ತದೆ ಅದಕ್ಕೆ ಪೋಷಕರು ನೀರೆರೆದು ಬೆಳಸಿ ಪೋಷಿಸಿದಾಗ ಸಮಾಜ ಮತ್ತು ದೇಶಕ್ಕೆ ಗೌರವ ತರುತ್ತಾರೆ. ಮಕ್ಕಳ ಅಕ್ಷರಭ್ಯಾಸ ಇಲ್ಲಿ ಸಾಂಕೇತಿಕ ಮಾತ್ರ ಆದರೆ ಪೋಷಕರು ನಿಮ್ಮ ಸಂಪ್ರದಾಯ, ಸಂಸ್ಕಾರ ಆಚರಣೆಗಳನ್ನು ಕಲಿಸುವುದರೊಂದಿಗೆ ನಾಡು-ನುಡಿಗೆ, ಗುರು-ಹಿರಿಯರಿಗೆ, ಮಾತಾ-ಪಿತೃಗಳಿಗೆ ಗೌರವ ನೀಡುವುದನ್ನು ಕಲಿಸ ಬೇಕು ಎಂದು ತಿಳಿಸಿದರು.

ಮಕ್ಕಳಲ್ಲಿ ಜ್ಞಾನ ಅಂಕುರವಾಗಿ ಮುಂದೆ ಜೀವನದಲ್ಲಿ ದಾರಿ ದೀಪವಾಗುತ್ತದೆ. ಜ್ಞಾನದಿಂದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡು ಕೊಂಡು ಜೀವನ ಸಾರ್ಥಕತೆ ಹೊಂದಬಹುದು. ಜ್ಞಾನಕ್ಕೆ ಬೇಕಾದ ಅಕ್ಷರಾಭ್ಯಾಸಕ್ಕೆ ಚುಂಚಶ್ರೀಗಳಿಂದ ಪಡೆಯುತ್ತಿರುವ ನೀವೆ ಧನ್ಯರು ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್ ಹೇಳಿದರು.

ಸಮಾರಂಭದಲ್ಲಿ  ಮಾತನಾಡಿದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಚಿಕ್ಕಬಳ್ಳಾಪುರ ವಿಭಾಗದ ಆಡಳಿತಾಧಿಕಾರಿ ಡಾ.ಎನ್.ಶಿವರಾಮ ರೆಡ್ಡಿ, ಮಕ್ಕಳಿಗೆ ಶಾಲೆಗಳು ಶಾಸ್ತ್ರೋಕ್ತವಾಗಿ ವಿದ್ಯೆ ಕಲಿಸಬಹುದು. ಆದರೆ ಸಂಸ್ಕಾರ ಮತ್ತು ಜೀವನ ಮೌಲ್ಯವನ್ನು ಪೋಷಕರು ಕಲಿಸಬೇಕು. ಮಗುವನ್ನು ಶಾಲೆಗೆ ಕಳುಹಿಸಿದರೆ ಮಗು ಶಾಲೆಯಲ್ಲಿ ಎಲ್ಲಾ ಕಲಿಯುತ್ತದೆ ಎಂಬ ತಪ್ಪು ಗ್ರಹಿಕೆ ಪೋಷಕರಲ್ಲಿದೆ. ಉತ್ತಮ ಶಾಲೆ ಎಷ್ಟು ಮುಖ್ಯವೋ ಉತ್ತಮ ಪೋಷಕರು ಅಷ್ಟೇ ಮುಖ್ಯ. ಅತಿಯಾದ ಪ್ರೀತಿಯಿಂದ ಮಕ್ಕಳು ಹಾದಿ ತಪ್ಪುತ್ತಾರೆ. ಮಗುವಿಗೆ ಕನಿಷ್ಟ 18 ವರ್ಷಗಳಾಗುವವರೆಗೂ ಪೋಷಕರು ಮಕ್ಕಳ ಮೇಲೆ ನಿಗಾವಹಿಸಿ ತಪ್ಪು ದಾರಿ ಹಿಡಿಯದಂತೆ ಜವಾಬ್ದಾರಿಯಿಂದ ನೋಡಿ ಕೊಳ್ಳಬೇಕು ಎಂದರು.

ಯಾವ ಮಕ್ಕಳು ಎಳೆಯ ಮಕ್ಕಳಲ್ಲ. ಅವರ ವಯಸ್ಸಿಗೆ ಅವರು ಶಕ್ತಿ ವಂತರೇ. ಅವರ ಕೆಲಸಗಳನ್ನು ಅವರೆ ಮಾಡಲು ತಿಳಿಸಿ, 4 ರಿಂದ 5 ವಯಸ್ಸಿನಲ್ಲಿ ಎಲ್ಲಾ ಮಕ್ಕಳ ಮೆದುಳು ಶೇ 90 ರಷ್ಟು ಬೆಳೆದಿರುತ್ತದೆ. ಮಕ್ಕಳಿಗೆ ಪೋಷಕರು ಮೊಬೈಲ್ ಕೊಟ್ಟು ಕೂರಿಸಬೇಡಿ, ಮೋಬೈಲ್ ಅವರ ಆಟದ ಮತ್ತು ಬುದ್ದಿ ಬೆಳಸುವ ಸ್ಕೂಲ್ ಅಲ್ಲಾ, ಮಕ್ಕಳನ್ನು ಚಿಕ್ಕವಯಸ್ಸಿನಲ್ಲೇ ಸಂಸ್ಕಾರ ಯುತರನ್ನಾಗಿ ಮಾಡಿ, ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂದು ಪೋಷಕರಿಗೆ ತಿಳಿ ಹೇಳಿದರು.

ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಸಾಯಿ ಕೀರ್ತಿನಾಥ ಸ್ವಾಮೀಜಿ, ಭಾರತ ಸರ್ಕಾರದ ಎಡಿಸಿ ಲಕ್ಷ್ಮಣ್. ನವ ದೆಹಲಿ ಕನ್ನಡ ಸಂಘಟನೆಯ ಅಧ್ಯಕ್ಷ ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕಿ ಮನೀಷ್, ಎಸ್‌ಜೆಸಿ ಇಂಜನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಜಿ.ಟಿ.ರಾಜು, ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ಕುಮಾರ್, ಬಿಜಿಎಸ್ ವರ್ಲ್ವ್ ಸ್ಕೂಲ್ ಪ್ರಾಂಶುಪಾಲ ಗಿರಿಬಾಬು, ಬಿಜಿಎಸ್ ಶಾಲೆ ಮಂಚನಬಲೆಯ ಪ್ರಾಂಶುಪಾಲ ಜಿ.ವಿ.ಗಂಗಾಧರ್ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

health

HL

others

HL

politics

HL

crime

HL

crime

HL

politics

HL

crime

HL

crime

HL

others

HL

economy

HL

economy

HL

travel

HL

health

HL

others

HL

politics

HL

others

HL

health

HL

crime

HL

others

HL

others

HL

politics

HL

others

HL

others

HL

politics

HL

others

HL

crime

HL

others

HL

others

HL

politics

HL

politics