ಇಸ್ಪೀಟ್ ಆಟ ತಂದ ಆಪತ್ತು.!: ತೆಪ್ಪ ಮಗುಚಿ 6 ಮಂದಿ ನೀರುಪಾಲು| ವಿಡಿಯೋ ನೋಡಿ
ಇಸ್ಪೀಟ್ ಆಟ ತಂದ ಆಪತ್ತು.!: ತೆಪ್ಪ ಮಗುಚಿ 6 ಮಂದಿ ನೀರುಪಾಲು| ವಿಡಿಯೋ ನೋಡಿ

ವಿಜಯಪುರ, (ಜುಲೈ ‌03): ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳುವ ವೇಳೆ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ನಡೆದಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ. 

ನಡುಗಡ್ಡೆಯಲ್ಲಿ ಎಂಟು ಮಂದಿ ಇಸ್ಪೀಟ್‌ ಆಡುತ್ತಿದ್ದರು. ಪೊಲೀಸರ ದಾಳಿಯ ಕಂಡು ತಪ್ಪಿಸಿಕೊಳ್ಳಲು ಹೋಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ಆರು ಮಂದಿ ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಪುಂಡಲಿಕ ಎಂಕಂಚಿ (34 ವರ್ಷ) ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಉಳಿದವರ ಶೋಧ ಕಾರ್ಯ ಮುಂದುವರಿದಿದೆ.

ನದಿ ಆಚೆಯ ನಡುಗಡ್ಡೆಗೆ ತೆರಳಿ ವಾಪಸ್‌ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕೊಲ್ಹಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹೆಚ್ಚುವರಿ ಎಸ್‌ಪಿ ಶಂಕರ ಮಾರಿಹಾಳ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

politics

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics