ಹಳೆಯ ಪ್ರಕರಣಗಳನ್ನು‌ ನೆನಪಿಸಿ, ಬಾಲಕ ಬುದ್ದಿ ಎಂದು ರಾಹುಲ್ ಗಾಂಧಿಯನ್ನ ಲೇವಡಿ ಮಾಡಿದ ಪ್ರಧಾನಿ ಮೋದಿ
ಹಳೆಯ ಪ್ರಕರಣಗಳನ್ನು‌ ನೆನಪಿಸಿ, ಬಾಲಕ ಬುದ್ದಿ ಎಂದು ರಾಹುಲ್ ಗಾಂಧಿಯನ್ನ ಲೇವಡಿ ಮಾಡಿದ ಪ್ರಧಾನಿ ಮೋದಿ

ನವದೆಹಲಿ, (ಜುಲೈ.02); 18ನೇ ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಸೋಮವಾರ ಸದನದಲ್ಲಿ ಸುದೀರ್ಘವಾಗಿ ಮಾತನಾಡಿದ ರಾಹುಲ್ ಗಾಂಧಿ, ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದರ ಬೆನ್ನಲ್ಲೆ ಇಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ 3ನೇ ಬಾರಿಗೆ ಪ್ರಧಾನಮಂತ್ರಿಯಾದ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಇಂದು ಲೋಕಸಭಾ ಅಧಿವೇಶನದಲ್ಲಿ ಭಾಷಣ ಮಾಡಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಗಾಗಿ ದೇಶವು ಎನ್‌ಡಿಎಗೆ ಮತ ಹಾಕಿದೆ. 2047ರ ಭಾರತ ಸಂಪೂರ್ಣವಾಗಿ ಬದಲಾಗಿರಲಿದೆ. ನಾವು ಜನರಿಗಾಗಿ 24 ಗಂಟೆಯೂ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ವೇಳೆ ಪ್ರತಿಪಕ್ಷಗಳು ಮತ್ತು ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಸರ್ಕಾರವು ಇಂಡಿಯಾ ಬ್ಲಾಕ್ ಸಂಸದರ ನಿರಂತರ ಘೋಷಣೆಗಳ ನಡುವೆ ‘ತುಷ್ಟೀಕರಣ’ವನ್ನು ಅನುಸರಿಸದೆ ‘ಸಂತುಷ್ಟೀಕರಣ’ವನ್ನು ಅನುಸರಿಸಿದೆ ಎಂದು ಹೇಳಿದ್ದಾರೆ. ಹಾಗೇ, ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇನ್ನೂ ಬಾಲಕ ಬುದ್ದಿ ಎಂದು ಲೇವಡಿ ಮಾಡಿ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ನೆನಪಿಸಿ ತಿರುಗೇಟು ನೀಡಿದರು.

ಅಲ್ಲದೆ ಭಗವಂತನ ರೂಪ ಕೇವಲ ದರ್ಶನಕ್ಕೆ ಇರುವುದು…ಪ್ರದರ್ಶನಕ್ಕೆ ಅಲ್ಲ. ಈ ವಿಚಾರವನ್ನು ನಾವೆಲ್ಲರೂ ಚಿಕ್ಕವರಿಂದಲೂ ನೋಡುತ್ತಾ ಬಂದಿರುವುದಾಗಿ ವಿಪಕ್ಷ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು. ಈಶ್ವರನ ರೂಪ ಸ್ವಾರ್ಥ ಹಾಗೂ ಪ್ರದರ್ಶನಕ್ಕೆ ಬಳಸಬಾರದು. ನಿನ್ನೆ ಕಲಾಪದಲ್ಲಿ ರಾಹುಲ್ ಗಾಂಧಿ ಈಶ್ವರನ ಫೋಟೋ ಪ್ರದರ್ಶನ ಮಾಡಿದ್ದನ್ನು ಹಿಂದೂ ಸಮಾಜ ನೋಡಿ ಯೋಚಿಸುತ್ತಿದೆ ಎಂದು ಕುಟುಕಿದರು.

ಮುಂದುವರೆದು ಹಿಂದು ಧರ್ಮದ ಅವಹೇಳನ ಮಾಡಿದ್ದಾರೆಂದು ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಕಾರ ನಡೆಸಿದರು. ಈ ವೇಳೆ ವಿರೋಧ ಪಕ್ಷದ ಸದಸ್ಯರು ಚೂಟ್ ಬೋಲೇ ಕವ್ವಾ ಕಾಟೆ ಎಂದು ಕೂಗಿದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಮಣಿಪುರಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಸದನದ ಬಾವಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ‘ಸರ್ವಾಧಿಕಾರವನ್ನು ಸಹಿಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗುತ್ತಾ, ಮಣಿಪುರದ ಬಗ್ಗೆ ಚರ್ಚೆಗೆ ಒತ್ತಾಯಿಸಿ ಪ್ರತಿಭಟಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->

Latest News

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics

HL

education