ಟ್ರೆಂಡ್ ಆಯ್ತು ದರ್ಶನ್ ಕೈದಿ ನಂ 6106; ತೊಟ್ಟಿಲ ಮಗುವಿಗೂ ಪೋಟೋ ಶೂಟ್..!
ಟ್ರೆಂಡ್ ಆಯ್ತು ದರ್ಶನ್ ಕೈದಿ ನಂ 6106; ತೊಟ್ಟಿಲ ಮಗುವಿಗೂ ಪೋಟೋ ಶೂಟ್..!

ಬೆಂಗಳೂರು, (ಜುಲೈ.02); ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ ವ್ಯಕ್ತಿಯ ಹತ್ಯೆ ಆರೋಪದಡಿಯಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ ಅವರ ಮೇಲೆ ಅಭಿಮಾನಿಗಳ ಅಭಿಮಾನ ಮಾತ್ರ ಕಡಿಮೆ ಆಗಿಲ್ಲ.

ಬದಲಾಗಿ ಅವರ ಕೈದಿ ನಂಬರ್ ಹಾಕಿಕೊಂಡು ಓಡಾಡುವುದು, ಬೈಕ್ ಹಿಂದೆ ಆ ಸಂಖ್ಯೆ ಹಾಕಿಸಿಕೊಳ್ಳುವುದು. ಕೈದಿ ಸಂಖ್ಯೆ ಸಿನಿಮಾ ತೆಗೆಯುವುದು ಈಗ ಟ್ರೆಂಡ್ ಆಗಿದೆ‌.

ಮುಂದುವರಿದು ಅಭಿಮಾನಿಯೋರ್ವ ಒಂದು ವರ್ಷದ ಮಗುವಿಗೆ ಖೈದಿ ನಂಬರ್ 6106 ನಂಬರ್ ಹಾಕಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಹುಟ್ಟುಹಬ್ಬ ಆಚರಿಸಿದ್ದು, ‌ನಟ ದರ್ಶನದ ಮೇಲಿನ ಅಭಿಮಾನವನ್ನು ತನ್ನ ಮಗುವಿನ ಫೋಟೊ ಶೂಟ್ ಮಾಡಿಸಿ ಮೆರೆದಿದ್ದಾರೆ.

ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುವ ಬಿಳಿ ಬಟ್ಟೆ ಹಾಗೂ ಎದೆಯ ಮೇಲೆ ಕೈದಿ ನಂಬರ್ ಹಾಕಿಸಿದಂತೆ ಹೆತ್ತ ಮಗುವಿನ ಮೊದಲ ವರ್ಷದ ಜನ್ಮದಿನವನ್ನು ಅಭಿಮಾನಿಯೊಬ್ಬ ಆಚರಿಸಿ, ದರ್ಶನ್ ಮೇಲಿನ ಅಭಿಮಾನ ತೋರ್ಪಡಿಸಿದ್ದಾರೆ‌

ಹಿಂದೆಲ್ಲ ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್ ರಂತಹ ಗಣ್ಯ ವ್ಯಕ್ತಿಗಳ ರೀತಿಯ ಮಕ್ಕಳನ್ನು ಅಲಂಕರಿಸಿ ಹೆತ್ತವರು ಸಂಭ್ರಮಿಸುತ್ತಿದ್ದರು. ಇದೀಗ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಮೇಲಿನ ಅಭಿಮಾನ ಮೆರೆದಿದ್ದಾರೆ.

ನಟ ದರ್ಶನ್ ಮೇಲಿನ ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ಹೊಸ ಟ್ರೆಂಡ್ ಆಗಿದೆ. ಅದರಂತೆ ಮಗುವಿಗೆ ಖೈದಿ ನಂಬರ್ ಬಳಸಿ ಪೊಟೋ ಶೂಟ್ ಮಾಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ‌.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics

HL

education