ಮೋದಿಜೀ ಕಾಲದಲ್ಲಿ ಹೇಳಿದ ಸತ್ಯವನ್ನು ತೆಗೆದು ಹಾಕುತ್ತಾರೆ; ರಾಹುಲ್‌ ಗಾಂಧಿ ಕಿಡಿ
ಮೋದಿಜೀ ಕಾಲದಲ್ಲಿ ಹೇಳಿದ ಸತ್ಯವನ್ನು ತೆಗೆದು ಹಾಕುತ್ತಾರೆ; ರಾಹುಲ್‌ ಗಾಂಧಿ ಕಿಡಿ

ನವ ದೆಹಲಿ, (ಜುಲೈ.02): ಪ್ರಧಾನಿ ಮೋದಿ ಕಾಲದಲ್ಲಿ ಸತ್ಯವನ್ನು ಹೊರಹಾಕಬಹುದು‌.ಆದರೆ ಮುಚ್ಚಿಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಮಂಗಳವಾರ ಸಂಸತ್ ಕಲಾಪಕ್ಕೆ ತೆರಳುವ ಮುನ್ನಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೋಮವಾರ ಕಲಾಪದಲ್ಲಿ ನಾನು ಮಾತನಾಡಿದ ಕೆಲ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ. ಇದು ಪ್ರಧಾನಿ ಮೋದಿ ಅವರ ಕಾಲದಲ್ಲಿ ಮಾತ್ರ ಸಾಧ್ಯ. ಇನ್ನು ಏನೇನು ತೆಗೆದುಹಾಕುತ್ತಾರೆ ನೋಡೋಣ ಎಂದು ಹೇಳಿದರು.

ಮೋದಿಜೀ ಕಾಲದಲ್ಲಿ ಸತ್ಯವನ್ನು ತೆಗೆದು ಹಾಕಲಾಗುತ್ತದೆ. ಆದರೆ ವಾಸ್ತವದಲ್ಲಿ ಸತ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ. ನಾನು ಏನು ಹೇಳಬೇಕಿತ್ತು ಅದನ್ನೇ ಹೇಳಿದ್ದೇನೆ. ಅದೇ ಸರಿ, ಸತ್ಯ. ಅವರು ಏನನ್ನಾದರೂ ತೆಗೆದು ಹಾಕಲಿ. ಸತ್ಯ ಸತ್ಯವೇ ಆಗಿರುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಆರಂಭಗೊಂಡ 18ನೇ ಲೋಕಸಭೆಯ ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಸೋಮವಾರ ಸದನದಲ್ಲಿ ಸುದೀರ್ಘವಾಗಿ ಮಾತನಾಡಿದ ರಾಹುಲ್ ಗಾಂಧಿ, ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು‌.

ರಾಹುಲ್ ಅವರ ಹಿಂದೂ ಎಂದುಕೊಳ್ಳುವವರು ನಡೆಸುವ ಹಿಂಸಾಚಾರ ಹೇಳಿಕೆ, ಈಶ್ವರನ ಫೋಟೋ ಪ್ರದರ್ಶನ, ನೀಟ್ ಚರ್ಚೆ ಇವೆಲ್ಲವೂ ಭಾರೀ ಗದ್ದಲವನ್ನೇ ಸೃಷ್ಟಿಸಿತ್ತು. 

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಕ್ಸಮರಕ್ಕೆ ಸಜ್ಜಾಗಿಯೇ ಬಂದಿದ್ದ ರಾಹುಲ್ ಗಾಂಧಿ, ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಆಡಳಿತ ಪಕ್ಷವನ್ನು ತಬ್ಬಿಬ್ಬು ಗೊಳಿಸಿದರು. ನೀಟ್ ಕುರಿತ ಪ್ರಸ್ತಾಪ ಕೋಲಾ ಹಲಕ್ಕೆ ಕಾರಣವಾಗಿ ದಿನದ ಮಟ್ಟಿಗೆ ಸದನವನ್ನು ಮುಂದೂಡಲಾಯಿತು.

ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮ ಸಂದರ್ಶನದಲ್ಲಿ ಮಾತನಾಡುತ್ತಾ ತಾವು ದೇವರ ಇಚ್ಛೆಯ ಮೇರೆಗೆ ಭೂಮಿಗೆ ಬಂದಿರುವುದಾಗಿ ಹೇಳಿ ಸುದ್ದಿಯಾಗಿದ್ದರು. ಇದೇ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್, "ಮೋದಿ ಸಾಮಾನ್ಯ ವ್ಯಕ್ತಿಯಲ್ಲ.

ದೇವರ ಆದೇಶದ ಮೇರೆಗೆ ಕೆಲಸ ಮಾಡುವವರು. ಅವರ ಆತ್ಮದ ಜತೆ ಪರಮಾತ್ಮ ಸಂವಹನ ನಡೆಸುತ್ತಾನೆ. ಪರಮಾತ್ಮನ ಸೂಚ ನೆಯ ಮೇರೆಗೆ ಅವರು ನೋಟು ಅಮಾನೀಕರ ಣದಂತಹ ಮಹತ್ವದ ನಿರ್ಧಾರವನ್ನು ದಿಢೀ‌ರ್ ಅಂತ ಘೋಷಿಸುತ್ತಾರೆ. ದೇವರ ಆದೇಶದ ಮೇರೆಗೆ ಬಡವರ ಬದಲಿಗೆ ಅಂಬಾನಿ, ಅದಾನಿಯಂತಹ ಉದ್ಯಮಿಗಳ ಏಳಿಗೆಗೆ ಶ್ರಮಿಸುತ್ತಿದ್ದಾರೆ'' ಎಂದು ಕುಟುಕಿದರು.

ರಾಹುಲ್ ಗಾಂಧಿ ಮಾತಿನ ಪ್ರಮುಖ ಅಸ್ತ್ರಗಳು ಈ ರೀತಿಯಲ್ಲಿವೆ

ಹಿಂದೂಗಳಲ್ಲಿ ಕೆಲವರು ಸಮಾಜ ದಲ್ಲಿ ಹಿಂಸಾಚಾರ, ದ್ವೇಷ ಹರಡುವ ಗುತ್ತಿಗೆ ತೆಗೆದುಕೊಂಡಿದ್ದಾರೆ. 

ಹಿಂದೂ ಧರ್ಮ, ಮಹಾಪುರುಷರು, ತ್ರಿಶೂಲ ಹಿಡಿದಿರುವ ಮಹಾಶಿವನೂ ಅಹಿಂಸೆಯನ್ನೇ ಹೇಳುತ್ತಾನೆ. ಆದರೆ ದಿನದ 24 ಗಂಟೆ ಹಿಂದೂಗಳೆಂದು ಹೇಳುತ್ತಾ ತಿರುಗಾಡುವವರು ಹಿಂಸೆ, ಶತ್ರುತ್ವ ಪ್ರಚೋದಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಆರ್‌ಎಸ್‌ಎಸ್ ಸಂಘ ಮಾತ್ರವೇ ಹಿಂದೂ ಸಮುದಾಯವಲ್ಲ.

'ನೀಟ್' ಪರೀಕ್ಷಾ ಕ್ರಮವೇ ಸರಿಯಿಲ್ಲ: ಸಿರಿವಂತರ ಮಕ್ಕಳಿಗಾಗಿ ರೂಪಿಸಿದ ವ್ಯಾಪಾರಿ ಪದ್ಧತಿಯಂತೆ.

అಗ್ನಿವೀರ್ ಯೋಜನೆ ಋಣಾತ್ಮಕ; ಯುವಕರನ್ನು ಬಳಸಿಕೊಂಡು ಎಸೆಯುವ ರೀತಿಯ ಯೋಜನೆ.

ಮೋದಿ ಸಾಮಾನ್ಯರಲ್ಲ, ದೇವರ ಆದೇಶದಂತೆ ಕೆಲಸ ಮಾಡುವವರು. ಆತ್ಮ, ಪರಮಾತ್ಮನ ಜೊತೆ ಸಂವಹನೆ ನಡೆಸುತ್ತಾರೆ. ಪರಮಾತ್ಮನ ಸೂಚನೆ ಮೇರೆಗೆ ಮೋದಿ ನೋಟು ಅಮಾನೀಕರಣದಂತಹ ಮಹತ್ವದ ನಿರ್ಧಾರ ಪ್ರಕಟಿಸುತ್ತಾರೆ.

ಪ್ರಧಾನಿ ಮೋದಿ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. ನನ್ನ ವಿರುದ್ದ 20ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಮೋದಿ ಸೂಚನೆ ಮೇರೆಗೇ ಸಂಸದನಾಗಿದ್ದ ನನಗೆ ನೀಡಿದ್ದ ಮನೆ ಕಿತ್ತುಕೊಳ್ಳಲಾಯಿತು. ಇ.ಡಿ 55 ಗಂಟೆ ವಿಚಾರಣೆ ನಡೆಸಿತು.

ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ದಿನ ಅದಾನಿ, ಅಂಬಾನಿಯವರನ್ನು ಆಮಂತ್ರಿಸಲಾಗಿತ್ತು. ಆದರೆ, ಅಲ್ಲಿನ ಸ್ಥಳೀಯ ಜನರನ್ನು ದೂರ ವಿಡಲಾಗಿತ್ತು. ಆದರೆ, ಲೋಕ ಸಭಾ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ಸೂಕ್ತ ಪಾಠ ಕಲಿಸಿದ್ದಾರೆ ಎಂದು ರಾಹುಲ್‌ ವಾಗ್ದಾಳಿ ನಡೆಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics