ಸರ್ಕಾರಿ ಶಾಲೆಗಳ ಉಳಿಸಲು ಹೋರಾಟದ ಅನಿವಾರ್ಯತೆ ಎದುರಾಗಿದೆ: ಶ್ರೀನಗರ ಬಶೀರ್ ಕಳವಳ
ಸರ್ಕಾರಿ ಶಾಲೆಗಳ ಉಳಿಸಲು ಹೋರಾಟದ ಅನಿವಾರ್ಯತೆ ಎದುರಾಗಿದೆ: ಶ್ರೀನಗರ ಬಶೀರ್ ಕಳವಳ

ದೊಡ್ಡಬಳ್ಳಾಪುರ, (ಜುಲೈ ‌02); ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎಂದು ಕರವೇ ಹೋರಾಟಗಾರ ಶ್ರೀನಗರ ಬಶೀರ್ ಕಳವಳ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಮಾಜ ಸೇವಕ ಜಮೀರ್ ಪಾಷ ಅವರ ಕೊಡುಗೆಯಲ್ಲಿ ನಗರದ ಒನ್ನಿಗರ ಪೇಟೆಯಲ್ಲಿರುವ ಸರ್ಕಾರಿ ಉರ್ದು ಶಾಲೆ ಮತ್ತು ಕೋಟೆ ರಸ್ತೆಯಲ್ಲಿರುವ  ಸರ್ಕಾರಿ ಉರ್ದು ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರಗಳು ಉಚಿತ ಶಿಕ್ಷಣದ ಅಡಿಯಲ್ಲಿ ಕೋಟ್ಯಾಂತರ ರೂ ಶಿಕ್ಷಣ ಕ್ಷೇತ್ರಕ್ಕೆ ವೆಚ್ಚ ಮಾಡುತ್ತಿದ್ದರು ಸರ್ಕಾರಿ ಶಾಲೆಗಳಲ್ಲಿ ದಿನ ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಾ ಒಂದೊಂದಾಗಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಇದಕ್ಕೆ ನೇರ ಹೊಣೆ ಸರ್ಕಾರವೇ ಹೊರತು ಸಾರ್ವಜನಿಕರಲ್ಲ ಎಂಬುದು ವಾಸ್ತವ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಅಗತ್ಯ ಶೈಕ್ಷಣಿಕ ಚಟುವಟಿಕೆ ದೊರಕುತ್ತಿಲ್ಲ ಎಂಬ ಬೇಸರದಿಂದ ಸಾರ್ವಜನಿಕರಿರಲಿ‌.. ಸರ್ಕಾರ ಶಾಲೆಯ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ. ತಿಂಗಳಿಗೆ 50 ರಿಂದ 90 ಸಾವಿರದ ವರೆಗೆ ಸಂಬಳ ನೀಡುವ ಶಾಲೆಗಳು ಉಳಿದಿರುವುದಿಲ್ಲ, ನಮಗೆ ಸಂಬಳ ದೊರಕುವುದಿಲ್ಲ ಎಂಬ ಅರಿವು ಅಂತಹ ಶಿಕ್ಷಕರಿಗೆ ಇಲ್ಲವಾಗಿದೆ.

ಸರ್ಕಾರಿ ಶಾಲೆಯೆಂದರೆ ಬಡ ಮಕ್ಕಳ ಶಾಲೆ ಎಂಬ ಮಸಿ ಬಳೆಯುವ ಯತ್ನ ನಿರಂತವಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಶಿಕ್ಷಕರ ಕೊರತೆ ನೀಗಿಸಲು, ಸೂಕ್ತ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಲು ಉಗ್ರವಾದ ಹೋರಾಟ ಅಗತ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಇನಾಯತ್, ಚಾಂದ್  ಭಾಯ್, ಮೊಹಮ್ಮದ್ ಮೌಲಾ, ಟಿಪ್ಪು ಸಮಿತಿಯ ಡಿಕೆ ಬಾಬಾ, ಮುಕ್ತಿಯಾರ್, ಫಯಾಜ್, ಶಿಕ್ಷಕರಾದ ಶಾಹಿನಾ, ಅನಸೂಯ ಮತ್ತಿತರರಿದ್ದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics