HIV ಸೋಂಕಿತನ ಮೇಲೆ ಅತ್ಯಾಚಾರವೆಸಗಿ, ಚಿನ್ನಾಭರಣ ದೋಚಿದ ಸಲಿಂಗಿ.!
HIV ಸೋಂಕಿತನ ಮೇಲೆ ಅತ್ಯಾಚಾರವೆಸಗಿ, ಚಿನ್ನಾಭರಣ ದೋಚಿದ ಸಲಿಂಗಿ.!

ನೆಲಮಂಗಲ, (ಜುಲೈ ‌02): ಮಾರಣಾಂತಿಕ ಕಾಯಿಲೆ ಎಚ್​ಐವಿ ಸೋಂಕಿತ 56 ವರ್ಷದ ವ್ಯಕ್ತಿಯ ಮೇಲೆ ಅತ್ಯಾಚಾರ ಎಸಗಿರುವ ದುಷ್ಕರ್ಮಿಯೋರ್ವ ಮನೆಯಲ್ಲಿದ್ದ ನಗದು, ಚಿನ್ನಭರಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಘಟನೆ ನಡೆದಿದೆ.

ನೆಟ್ ವರ್ಕ್ ಪಾಸಿಟಿವ್ ಪೀಪಲ್ ಎಂಬ ಹೆಸರಿನ ಸ್ವಯಂ ಸೇವಾ ಸಂಸ್ಥೆಯ 56 ವರ್ಷದ ಉದ್ಯೋಗಿ ಮೇಲೆ ಶ್ಯಾಮ್ ಪಾಟೀಲ್ ಎಂಬ ಸಲಿಂಗಕಾಮಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಒಂದು ವರ್ಷದ ಹಿಂದೆ ಶ್ಯಾಮ್ ಪಾಟೀಲ್ ಎಂಬ ವ್ಯಕ್ತಿ ತನಗೆ ಟಿಬಿ ಕಾಯಿಲೆ ಇದೆ ಎಂದು ಹೆಚ್​ಐವಿ ಸೋಂಕಿತ ವ್ಯಕ್ತಿಗೆ ಪರಿಚಯನಾಗಿದ್ದ. ಇತ್ತೀಚಿಗೆ ಹೆಚ್​ಐವಿ ಸೋಂಕಿತನ ಹೆಂಡತಿ ಮತ್ತು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದ ವಿಚಾರ ತಿಳಿದು ಮನೆಗೆ ಬಂದಿದ್ದ.

ಮನೆಗೆ ಬಂದ ಶ್ಯಾಮ್ ಪಾಟೀಲ್ ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಹಾಕಿ ಹೆಚ್​ಐವಿ ಸೋಂಕಿತನಿಗೆ ನೀಡಿದ್ದಾನೆ. ಎಚ್​ಐವಿ ಸೋಂಕಿತ ವ್ಯಕ್ತಿಯ ಮುಖಕ್ಕೆ ಸ್ಪ್ರೇ ಹೊಡೆದು ಪ್ರಜ್ಞೆ ತಪ್ಪಿಸಿ. ​ಆತನ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಳಿಕ ಮನೆಯ ಬೀರುವಿನಲ್ಲಿದ್ದ 88 ಗ್ರಾಂ ಚಿನ್ನಭರಣ, 20 ಸಾವಿರ ನಗದು ಮೊಬೈಲ್​ ಮೊಬೈಲ್ ದೋಚಿ ಸಲಿಂಗ ಕಾಮಿ ಶ್ಯಾಮ್​ ಪಾಟೀಲ್​ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬೆಳಿಗ್ಗೆ ಎಚ್‍ ಐವಿ ಸೊಂಕಿತನಿಗೆ ಎಚ್ಚರವಾದಾಗ ವಿಷಯ ತಿಳಿದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಶ್ಯಾಮ್​ ಪಾಟೀಲ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

others

HL

politics

HL

economy

HL

politics

HL

art

HL

politics

HL

politics

HL

crime

HL

health

HL

crime

HL

others

HL

crime

HL

others

HL

others

HL

others

HL

sports

HL

others

HL

others

HL

others

HL

crime

HL

others

HL

politics

HL

politics

HL

sports

HL

politics

HL

crime

HL

health

HL

politics

HL

politics