ಕೆಎಸ್ ಈಶ್ವರಪ್ಪ ಆಸ್ತಿ ವಿವರ ಸಲ್ಲಿಕೆ; 22.35 ಕೋಟಿ ರೂ. ಆಸ್ತಿ ಘೋಷಣೆ
ಕೆಎಸ್ ಈಶ್ವರಪ್ಪ ಆಸ್ತಿ ವಿವರ ಸಲ್ಲಿಕೆ; 22.35 ಕೋಟಿ ರೂ. ಆಸ್ತಿ ಘೋಷಣೆ

ಶಿವಮೊಗ್ಗ, (ಏ.12); ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕೆಎಸ್ ಈಶ್ವರಪ್ಪ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಒಟ್ಟು 22.35 ಕೋಟಿ ರೂ. ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

2ನೇ ಹಂತದ ಲೋಕಸಭಾ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೇ ದಿನ 2 ಬಾರಿ ಈಶ್ವರಪ್ಪ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. 

ಈ ವೇಳೆ ಈಶ್ವರಪ್ಪ ಅವರ ಬಳಿ ಒಟ್ಟು 22.35 ಕೋಟಿ ರೂ. ಮೌಲ್ಯದ ಅಸ್ತಿ ಇದೆ. ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ 3.10 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದಿದ್ದಾರೆ.

ಉಳಿದಂತೆ ಶಿವಮೊಗ್ಗದ ನಿದಿಗೆ ಗ್ರಾಮದಲ್ಲಿ 1 ಎಕರೆ 31 ಗುಂಟೆ ಕೃಷಿ ಭೂಮಿ ಇರುವುದಾಗಿ ಘೋಷಿಸಿದ್ದಾರೆ. ಊರಗಡೂರಿನಲ್ಲಿ 1.05 ಎಕರೆ, ಸೋಮಯ್ಯ ಲೇಔಟ್‌ನಲ್ಲಿ ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಜಂಟಿ ಖಾತೆಯೊಂದಿಗೆ 3880 ಚದರ ಅಡಿ ಕೃಷಿಯೇತರ ಭೂಮಿ ಇದೆ. ಅಲ್ಲದೆ ಮಾಚೇನಹಳ್ಳಿಯಲ್ಲಿ 4.24 ಎಕರೆ ಕೃಷಿಯೇತರ ಭೂಮಿ ಪುತ್ರ ಕಾಂತೇಶ್ ಜೊತೆ ಜಂಟಿ ಖಾತೆಯಿದೆ.

ಬಿ.ಹೆಚ್.ರಸ್ತೆಯಲ್ಲಿ 11,926 ಚದರ ಅಡಿಯಲ್ಲಿ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡ (ಪುತ್ರ ಕಾಂತೇಶ್ ಜೊತೆ ಜಂಟಿ ಖಾತೆ), ಬೆಂಗಳೂರು ಜಯನಗರದ ಸೌತ್ ಎಂಡ್ ಸರ್ಕಲ್‌ನಲ್ಲಿ 30x40 ಅಡಿಯಲ್ಲಿ ವಾಣಿಜ್ಯ ಕಟ್ಟಡ, ಬೆಂಗಳೂರಿನ ಕುಮಾರ ಪಾರ್ಕ್‌ನಲ್ಲಿ 5700 ಚದರ ಅಡಿಯಲ್ಲಿ ವಾಣಿಜ್ಯ ಕಟ್ಟಡ, ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿ ಪತ್ನಿ ಜಯಲಕ್ಷ್ಮಿ ಅವರೊಂದಿಗೆ ಜಂಟಿ ಖಾತೆಯೊಂದಿಗೆ 4500 ಚದರ ಅಡಿಯ ವಸತಿ ಕಟ್ಟಡ ಇದೆ.

ಈಶ್ವರಪ್ಪ ಬಳಿ 25 ಲಕ್ಷ ರೂ. ನಗದು ಇದೆ. ಪತ್ನಿ ಬಳಿ 2 ಲಕ್ಷ ರೂ. ಇದೆ. ಕೆಎಸ್‌ಸಿಎ ಬ್ಯಾಂಕ್‌ನ ಶಾಸಕರ ಭವನ ಶಾಖೆಯಲ್ಲಿ ಈಶ್ವರಪ್ಪ ಹೆಸರಿನಲ್ಲಿ ಎರಡು ಖಾತೆಗಳಿವೆ. 

ಒಂದರಲ್ಲಿ 1.38 ಲಕ್ಷ ರೂ. ನಗದು, ಮತ್ತೊಂದು ಖಾತೆಯಲ್ಲಿ 1,699 ರೂ. ನಗದು ಇದೆ. ಬ್ಯಾಂಕ್. ಆಫ್ ಬರೋಡಾದ ಶಿವಮೊಗ್ಗ ಶಾಖೆಯಲ್ಲಿ ಎರಡು ಖಾತೆ ಇದೆ. ಒಂದರಲ್ಲಿ 5.45 ಲಕ್ಷ ರೂ, ಮತ್ತೊಂದರಲ್ಲಿ 1 ಲಕ್ಷ ರೂ. ನಗದು ಇದೆ. 

ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ಇದ್ದು 77 ಸಾವಿರ ರೂ. ನಗದು ಇದೆ.

ಈಶ್ವರಪ್ಪ ಬಳಿ ಇರುವ ಚರಾಸ್ತಿಯ ಒಟ್ಟು ಮೌಲ್ಯ 4.28 ಕೋಟಿ ರೂ, ಪತ್ನಿ ಜಯಲಕ್ಷ್ಮಿ ಅವರ ಬಳಿ 3.77 ಕೋಟಿ ರೂ. ಇದೆ. ಸ್ಥಿರಾಸ್ತಿಗಳ ಪೈಕಿ, ಈಶ್ವರಪ್ಪ ಸ್ವಯಾರ್ಜಿತ ಆಸ್ತಿ ಮೌಲ್ಯ 10.95 ಕೋಟಿ ರೂ. ಪಿತ್ರಾರ್ಜಿತ ಆಸ್ತಿ ಮೌಲ್ಯ 1.60 ಕೋಟಿ ರೂ, ಪತ್ನಿ ಜಯಲಕ್ಷ್ಮಿ ಅವರ ಹೆಸರಿನಲ್ಲಿರುವ ಸ್ವಯಾರ್ಜಿತ ಆಸ್ತಿ ಮೌಲ್ಯ 7.31 ಕೋಟಿ ರೂ., ಪಿತ್ರಾರ್ಜಿತ ಆಸ್ತಿ ಮೌಲ್ಯ 1.60 ಕೋಟಿ ರೂ. ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಈಶ್ವರಪ್ಪ ಅವರು ತಮ್ಮ ಪತ್ನಿಗೆ ಸಾಲ ನೀಡಿದಾರೆ. ಇಬ್ಬರ ಬಳಿಯು ಒಂದೇ ಒಂದು ವಾಹನವಿಲ್ಲ. ಈಶ್ವರಪ್ಪ ಅವರ ವಿರುದ್ಧ  ಪ್ರಕರಣವಿಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

health

HL

politics

HL

others

HL

politics

HL

others

HL

crime

HL

others

HL

others

HL

politics

HL

crime

HL

others

HL

health

HL

others

HL

crime

HL

others

HL

education

HL

crime

HL

others

HL

others

HL

politics

HL

others

HL

politics

HL

crime

HL

crime

HL

crime

HL

politics

HL

others

HL

crime

HL

crime