ಕೊನಘಟ್ಟ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದುರಸ್ತಿ ಭಾಗ್ಯ..!
ಕೊನಘಟ್ಟ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ದುರಸ್ತಿ ಭಾಗ್ಯ..!

ದೊಡ್ಡಬಳ್ಳಾಪುರ, (ಮೇ.28); ಸೂಕ್ತ ನಿರ್ವಹಣೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಕೊನಘಟ್ಟ ಗ್ರಾಮಸ್ಥರಿಗೆ ತೊಂದರೆ ನೀಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ಗ್ರಾಮಪಂಚಾಯಿತಿ ಸದಸ್ಯರು ಯಶಸ್ವಿಯಾಗಿದ್ದಾರೆ.

ಸುಮಾರು ಎರಡು ಸಾವಿರ ಜನಸಂಖ್ಯೆಯಿರುವ ಕೊನಘಟ್ಟ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದ್ದರು, ನಿರ್ವಹಣೆ ಕೊರತೆಯಿಂದ ಗ್ರಾಮಸ್ಥರಿಗೆ ಕುಡಿಯುವ ನೀರು ಸಮರ್ಪಕವಾಗಿ ದೊರಕುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರದ್ದಾಗಿತ್ತು.

ಪದೇ ಪದೇ ದುರಸ್ತಿ, ಸುಮಾರು 5 ನಿಮಿಷ ಕಾದರೂ ತುಂಬದ ನೀರಿನ ಕಾರಣ ಗ್ರಾಮಸ್ಥರ ಸಹನೆಯ ಕಟ್ಟೆ ಹೊಡೆಯುವಂತೆ ಮಾಡಿದೆ. ಪದೇ ಪದೇ ಕೆಟ್ಟು ನಿಲುವ ಕಾರಣ ಅಕ್ಕಪಕ್ಕದ ಗ್ರಾಮಗಳಾದ ಲಿಂಗನಹಳ್ಳಿ, ಕೋಡಿಹಳ್ಳಿಗೆ ತೆರಳಿ ಶುದ್ದ ಕುಡಿಯುವ ನೀರನ್ನು ತರಬೇಕು, ಇಲ್ಲವೇ ಕೊಳಾಯಿ ನೀರನ್ನೇ ಅನಿವಾರ್ಯತೆ ಗ್ರಾಮಪಂಚಾಯಿತಿ ಕೇಂದ್ರ ಸ್ಥಾನವಾದ ಕೊನಘಟ್ಟ ಗ್ರಾಮಸ್ಥರ ಅಳಲಾಗಿತ್ತು.

ಈ ಕುರಿತು ಗ್ರಾಮಪಂಚಾಯಿತಿ ಅಧಿಕಾರಿಗಳು, ಜನ ಪ್ರತಿನಿದಿಗಳಿಗೆ ಪದೇ ಪದೇ ಮನವಿ ಸಲ್ಲಿಸಿದರು ಸಮಸ್ಯೆ ಬಗೆ ಹರಿಯುತ್ತಿಲ್ಲ ಎಂಬುದು ಇಲ್ಲಿನ ಯುವಕ ಆಕ್ರೋಶಕ್ಕೂ ಕೂಡ ಕಾರಣವಾಗಿತ್ತು.

ಈ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬೆನ್ನಲ್ಲೆ ಹೆಚ್ಚೆತ್ತಿರುವ ತಾಲೂಕು ಪಂಚಾಯಿತಿ ಇಒ ಮುನಿರಾಜು, ಗ್ರಾಪಂ ಪಿಡಿಒ ಹಾಗೂ ಸದಸ್ಯರು ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಕುರಿತು ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಸೂಚನೆ ನೀಡಿದ್ದಲ್ಲದೆ, ನೋಟಿಸ್ ನೀಡಿದ್ದರು.

ಇದರ ಬೆನ್ನಲ್ಲೆ ಸೋಮವಾರ ಮಧ್ಯಾಹ್ನ ದುರಸ್ತಿ ಕಾರ್ಯ ಆರಂಭವಾಗಿ, ಸಂಜೆಯ ವೇಳೆಗೆ ಗ್ರಾಮಸ್ಥರಿಗೆ ನೀರು ಲಭ್ಯವಾಗಿದೆ.

ಕಿಡಿಗೇಡಿಗಳ ಹಾವಳಿ; ಇನ್ನು ಶುದ್ಧ ಕುಡಿಯುವ ನೀರಿನ ಘಟಕದ ಕಾಯಿನ್ ಬಾಕ್ಸ್ಗೆ ಕಿಡಿಗೇಡಿಗಳು 5 ರೂ. ಕಾಯಿನ್ ಬದಲು ಕಬ್ಬಿಣದ ವಾಶರ್ ಮತ್ತಿತರ ವಸ್ತುಗಳನ್ನು ಹಾಕುತ್ತಿರುವುದರಿಂದ ಘಟಕ ಪದೇ ಪದೇ ದುರಸ್ತಿಗೆ ಬರುತ್ತಿದೆ ಎನ್ನಲಾಗಿದ್ದು, ಸಾರ್ವಜನಿಕರು ಕಿಡಿಗೇಡಿಗಳನ್ನು ಮಟ್ಟಹಾಕಬೇಕಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature