ಬ್ರಹ್ಮರಥೋತ್ಸವ; ಹೊಸಹಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕಲ್ಯಾಣೋತ್ಸವ
ಬ್ರಹ್ಮರಥೋತ್ಸವ; ಹೊಸಹಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕಲ್ಯಾಣೋತ್ಸವ

ದೊಡ್ಡಬಳ್ಳಾಪುರ, (ಮೇ.23): ತಾಲೂಕಿನ ಉಜ್ಜನಿ ಹೊಸಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಮೇ.28 ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಂದು ದೇವಾಲಯದಲ್ಲಿ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ.

ಬ್ರಹ್ಮರಥೋತ್ಸವದ ಅಂಗವಾಗಿ ಮೇ.26ರಿಂದ ಮೇ.31ರವರೆಗೆ ಅಭಿಷೇಕ, ಅರ್ಚನೆ, ಮಹಾಗಣಪತಿ ಪೂಜೆ, ಅಂಕುರಾರ್ಪಣೆ, ಧ್ವಜಾರೋಹಣ, ಕಲ್ಯಾಣೋತ್ಸವ, ಧೂಳೋತ್ಸವ, ಪಲ್ಲಕಿ ಉತ್ಸವ, ಡೊಳ್ಳು ಕುಣಿತ, ಉಯ್ಯಾಲೋತ್ಸವ, ಶಯನೋತ್ಸವ, ಗ್ರಾಮೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಮೇ.28 ರಂದು ಮಧ್ಯಾಹ್ನ 12ರಿಂದ 01ಗಂಟೆಯೊಳಗೆ ಸಲ್ಲುವ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.

ಕಲ್ಯಾಣೋತ್ಸವ ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ನಡೆಸಲಾಗುತ್ತಿದ್ದು, ರಾತ್ರಿ ಕಲ್ಯಾಣೋತ್ಸವ ನೆರವೇರಲಿದೆ.

ಕಲ್ಯಾಣೋತ್ಸವದ ಆಗಮಿಕರಾಗಿ ನರಸಿಂಹಮೂರ್ತಿ ಶರ್ಮ, ಪ್ರಜ್ವಲ್, ಸತ್ಯರಾಮಯ್ಯ, ವೇದ ಬ್ರಹ್ಮ ಶ್ರೀ ಹರಿಹರ ಶರ್ಮ, ವೆಂಕಟರಾಮು,  ಸಾಮವೇಧಿ ಸ್ವರೂಪ ಶರ್ಮ, ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಅಶ್ವಥ್ ನಾರಾಯಣ ಕುಮಾರ್, ವೆಂಕಟಕೃಷ್ಣ ಮೂರ್ತಿ ಮತ್ತಿತರರು ಭಾಗವಹಿಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature