ಅನಾಥರಾದ ಮಕ್ಕಳಿಗೆ ಆಸರೆಯಾದ ಶಾಸಕ ಪ್ರದೀಪ್ ಈಶ್ವರ್.!
ಅನಾಥರಾದ ಮಕ್ಕಳಿಗೆ ಆಸರೆಯಾದ ಶಾಸಕ ಪ್ರದೀಪ್ ಈಶ್ವರ್.!

ಚಿಕ್ಕಬಳ್ಳಾಪುರ, (ಮೇ.27); ಪಾರ್ಶ್ವವಾಯು ಔಷಧಿಗೆಂದು ಮಂಗಳೂರಿಗೆ ತೆರಳಿದ್ದ ಕುಟುಂಬವೊಂದು ಚಿಕಿತ್ಸೆ ಕೊಡಿಸಿಕೊಂಡು ವಾಪಸ್ಸಾಗುವಾಗ ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75 ರ ಕಂದಲಿ ಬಳಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಕಾರು ಅಪಘಾತ ಪ್ರಕರಣದಲ್ಲಿ ಕಾರು ಚಾಲಕ ಹಾಗು 2 ವರ್ಷದ ಪುಟ್ಟಮಗು ಸೇರಿ 06 ಮಂದಿ ಸಾವನ್ನಪ್ಪಿದ್ದಾರೆ. 

ಬೀಕರ ಅಫಘಾತ ಮಾಹಿತಿ ತಿಳಿದ ಎರಡೂ ಕುಟುಂಬಗಳು ದುಖಃದ ಮಡುವಿನಲ್ಲಿ ಚಿಂತಾಕ್ರಾಂತರಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿಯ ಇಡೀ ಕುಟುಂಬ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಕಾರು ಚಾಲಕ ಕೊಂಡೇನಹಳ್ಳಿ ಯುವಕ ಹಾಸನದ ಬಳಿ ಬೀಕರ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.

ಮೃತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಕಾರಹಳ್ಳಿ ಗ್ರಾಮದ ನಾರಾಯಣಪ್ಪ ಹಾಗೂ ಸುನಂದಮ್ಮ ದಂಪತಿ ಹಾಗೂ ಸುನಂದಮ್ಮ ತಂಗಿ ನೇತ್ರಾವತಿ ಹೊಸಕೋಟೆ ತಾಲ್ಲೂಕು ಹಂದರಹಳ್ಳಿ ನಿವಾಸಿಗಳಾಗಿದ್ದು, ಬೆಂಗಳೂರಿನ ಹೊರಮಾವು ಬಳಿ ವಾಸವಾಗಿರುವ ನೇತ್ರಾವತಿ ಹಾಗೂ ರವಿಕುಮಾರ್ ಹಾಗೂ ಇವರ 2 ವರ್ಷದ ಪುತ್ರ ಚೇತನ್ ಸೇರಿದಂತೆ ಕಾರು ಚಾಲಕ ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಂಡೇನಹಳ್ಳಿ ಗ್ರಾಮದ ಗುಣಶೇಖರ್ ಎಂದು ತಿಳಿದುಬಂದಿದೆ.

ಇನ್ನೂ ಕಾರಹಳ್ಳಿ ಗ್ರಾಮದ ನಾರಾಯಣಪ್ಪಗೆ ಪಾರ್ಶ್ವವಾಯುವಾಗಿದ್ದು ಚಿಕಿತ್ಸೆಗೆ ಅಂತ ಕಳೆದ ಶುಕ್ರವಾರ ಮಂಗಳೂರಿನತ್ತ ಪ್ರಯಾಣ ಬೆಳೆಸಿ, ಚಿಕಿತ್ಸೆ ಮತ್ತು ಔಷಧಿ ಪಡೆದು.‌ ಶನಿವಾರ ರಾತ್ರಿ ಮಂಗಳೂರು ತೊರೆದು ವಾಪಾಸ್ ಬರುವಾಗ ಅಪಘಾತ ಸಂಭವಿಸಿದೆ.

ಮೃತ ನಾರಾಯಣಪ್ಪ ಸುನಂದಮ್ಮ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಒಂದು ಗಂಡು ಮಗು ಇದೆ. ಮೃತ ರವಿಕುಮಾರ್ ಮತ್ತು ನೇತ್ರಾವತಿ ಮೂವರು ಮಕ್ಕಳಿದ್ದು, ಅವರಲ್ಲಿ 2 ವರ್ಷದ ಗಂಡು ಮಗು ಅಪಘಾತದಲ್ಲಿ ದಂಪತಿಗಳೊಂದಿಗೆ ಮೃತನಾಗಿದ್ದು, 9 ವರ್ಷದ ಮತ್ತು 6 ವರ್ಷದ ಇಬ್ಬರು ಹೆಣ್ಣು ಮಕ್ಕಳು ತಂದೆ ತಾಯಿಯನ್ನ ಕಳೆದುಕೊಂಡು ಮಕ್ಕಳು ತಬ್ಬಲಿಯಾಗಿದ್ದಾರೆ.

ನಾರಾಯಣಪ್ಪ ಸುನಂದಮ್ಮ ಸಾವಿನಿಂದ ಕಾರಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದರೆ, ಇವರನ್ನು ಕರೆದುಕೊಂಡ ಹೊರಟಿದ್ದ ಕಾರು ಚಾಲಕ ಚಿಕ್ಕಬಳ್ಳಾಪುರ ತಾಲ್ಲೂಕು ಕೊಂಡೇನಹಳ್ಳಿ ಗ್ರಾಮದ ಗುಣಶೇಖರ್ ಸಾವು ಅವರ ತಂದೆ ತಾಯಿ ಮತ್ತು ಕುಟುಂಬದಲ್ಲಿ ದುಃಖ ಎಲ್ಲೆಮೀರಿದೆ. ಹಾಗೇಯೇ ರವಿಕುಮಾರ್ ಮತ್ತು ನೇತ್ರಾವತಿ ಯವರ ಸಾವಿಗೆ ಗ್ರಾಮಸ್ಥರು ಮರುಕ ವ್ಯಕ್ತಪಡಿಸುತ್ತಿದ್ದಾರೆ.

ಈ ಭೀಕರ ಅಫಘಾತದಲ್ಲಿ ಸಾವನ್ನಪ್ಪಿದ ಆರು ಜನ ನತದೃಷ್ಟರಲ್ಲಿ ಗಂಡಹೆಂಡತಿ ಸಾವಿಗೀಡಾಗಿದ್ದು, ಅನಾಥರಾದ ರವಿಕುಮಾರ್ ಮತ್ತು ನೇತ್ರಾವತಿ ದಂಪತಿಗಳ ಇಬ್ಬರ ಹೆಣ್ಣು ಮಕ್ಕಳಿಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ನೆರವಿಗೆ ಬಂದಿದ್ದಾರೆ.

ಕಾರಹಳ್ಳಿ ರವಿಕುಮಾರ್ ಎನ್ನುವವರಿಗೆ ಚಿಕ್ಕಬಳ್ಳಾಪುರ ತಾಲ್ಲೂಕು ಚೀಗಟೇನಹಳ್ಳಿಯಿಂದ ಮದುವೆಯಾಗಿದ್ದ ನೇತ್ರಾವತಿ ದಂಪತಿಗಳ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. 

ನೇತ್ರಾವತಿಯ ತವರೂರಾದ ಚಿಕ್ಕಬಳ್ಳಾಪುರ ತಾಲ್ಲೂಕಿನ ಚೀಗಟೇನಹಳ್ಳಿಯಲ್ಲೆ ವಾಸವಾಗಿದ್ದರು. ಎನ್ನುವ ಮಾಹಿತಿ ತಿಳಿದು ಅಲ್ಲಿಗೆ ಬೇಟಿ ನೀಡಿದ ಶಾಸಕ ಪ್ರದೀಪ್ ಈಶ್ವರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ಅನಾಥರಾದ ಇಬ್ಬರ ಹೆಣ್ಣುಮಕ್ಕಳಿಗೂ ತಲಾ ಒಂದು ಲಕ್ಷ ಮುದ್ದೇನಹಳ್ಳಿ ಪೋಸ್ಟ್ ಆಪೀಸಲ್ಲಿ ಡಿಪಾಸಿಟ್ ಮಾಡಿ ಅವರ ವಿದ್ಯಾಬ್ಯಾಸದ ಖರ್ಚುವೆಚ್ಚ ನೋಡಿಕೊಳ್ಳುವುದಾಗಿ ಆಶ್ವಾಸನೆ ನೀಡಿ ಅವರ ಮದುವೆಯೂ ತಾನೆ ಮಾಡಿಸುವುದಾಗಿ ಭರವಸೆ ನೀಡಿದರು.

ಈಗಾಗಲೆ ಐವತ್ತು ಅನಾಥ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸುತ್ತಿದ್ದಾರೆ. ತನ್ನದಲ್ಲದ ಕ್ಷೇತ್ರದ ಕುಟುಂಬವೊಂದು ಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ. ಅವರು ತೀರಾ ಬಡವರು ಅವರಿಗೆ ಸಹಾಯ ಮಾಡೋದು ನನ್ನ ಧರ್ಮ ಎಂದು ಬಾವಿಸಿ ಮಾನವೀಯತೆ ಮೆರೆದ ಶಾಸಕರು ತಂದೆತಾಯಿ ಕಳೆದುಕೊಂಡು ಅನಾಥರಾದ ಇಬ್ಬರು ಮಕ್ಕಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

politics

HL

politics

HL

crime

HL

economy

HL

others

HL

crime

HL

others

HL

politics

HL

others

HL

economy

HL

others

HL

agriculture

HL

others

HL

economy

HL

crime

HL

others

HL

politics

HL

others

HL

politics

HL

crime

HL

others

HL

education

HL

politics

HL

others

HL

others

HL

crime

HL

economy

HL

travel

HL

others

HL

literature